ಕಾಸರಗೋಡು: ಕವಿತಾ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ನಡೆಯುವ ’ಕವಿತಾ ಫೆಸ್ತ್’ ಈ ಭಾರಿ ಕಾಸರಗೋಡು ಜಿಲ್ಲೆಯ ಬೇಳದಲ್ಲಿ ಅದ್ದೂರಿಯಾಗಿ ನಡೆಯಿತು. ಜನೆವರಿ 8 ಭಾನುವಾರ ದಿನಪೂರ್ತಿ ನಡೆದ ಕಾರ್ಯಕ್ರಮನ್ನು ಕೊಂಕಣಿ ಬರಹಗಾರ ಹಾಗೂ ಪತ್ರಕರ್ತರಾದ ಆಸ್ಟಿನ್ ಡಿ ಸೋಜಾ ಪ್ರಭು ಉದ್ಘಾಟಿಸಿದರು. ಯುವ ಬರಹಗಾರರಾದ ಸ್ಟ್ಯಾನಿ ಬೇಳ ಹಾಗೂ ಕೆಬಿಎಂ, ಗೋವಾ ಇದರ ಅಧ್ಯಕ್ಷರಾದ ಅನ್ವೇಶ ಸಿಂಗ್ಭಾಳ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ಭಾಗವಾಗಿ ನೆಲ್ಸನ್ ಹಾಗೂ ಲವೀನಾ ರೋಡ್ರಿಕ್ಸ್ ಪ್ರಾಯೋಜಕತ್ವದ ಚಾಫ್ರಾ ದೆಕೋಸ್ತಾ ಸ್ಮಾರಕ ಅಖಿಲ ಭಾರತ ಕವನ ವಾಚನ ಸ್ಪರ್ಧೆ ನಡೆಯಿತು. ಕೊಂಕಣಿ ಬರಹಗಾರ, ನ್ಯಾಯವಾದಿ ಸಂತೋಶ್ ಪೆರ್ಲ ಹಾಗೂ ಕೊಂಕಣಿ-ಕನ್ನಡ ಕವಿ ವಿಲ್ಸನ್ ಕಟೀಲ್ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು.

ಕವಿತಾ ಟ್ರಸ್ಟ್ ಟ್ರಸ್ಟಿಗಳಾದ ವಿಲ್ಲಿಯಂ ಪಾಯ್ಸ್ ಹಾಗೂ ಟೈಟಸ್ ನೊರೊನ್ಹಾ ಸಂವಾದವನ್ನು ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೊಂಕಣಿ ಕವಿ ಹಾಗೂ ಸಾಹಿತಿಗಳಾದ ವಿಲ್ಸನ್ ಕಟೀಲ್ ರಚನೆಯ ’ಚಿತುರ್ಲೆಚೆ ಅಚ್ಛೇ ದಿನ್’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು
ನಿರಾಕರ್ ಎಜುಕೇಶನ್ ಸೊಸಾಯ್ಟಿ ಅಧ್ಯಕ್ಷರಾದ ಪ್ರಶಾಂತ್ ನಾಯ್ಕ್ ಅವರು ಸಮರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದರು. ಗೀತಾರಚನೆಕಾರ ರತ್ನಮಾಲ ದಿವಾಕರ್ ಹಾಗೂ ಅನಿವಾಸಿ ಉಧ್ಯಮಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ಕೊಂಕಣಿ ಕವಯತ್ರಿ ಇಂದು ಅಶೋಕ್ ಗೇರುಸೊಪ್ಪೆಯವರಿಗೆ ಮಥಾಯಸ್ ಕುಟಾಮ್ ಕವಿತಾ ಪ್ರಶಸ್ತಿ ಪ್ರಧಾನ ಮಾಡಲಾಯಿತು.
Discover more from Coastal Times Kannada
Subscribe to get the latest posts sent to your email.







Discussion about this post