ಉಳ್ಳಾಲ: ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಹೊಲಿಗೆ ಸಂಬಂಧಿತ ಮಳಿಗೆ ‘ಥ್ರೆಡ್ ಹೌಸ್’ ಒಳಗಡೆಯೇ ಅದರ ಮಾಲಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮೂಲತ ಸೇವಂತಿಗುಡ್ಡೆ ನಿವಾಸಿಯಾಗಿದ್ದ ಪ್ರಸ್ತುತ ಕನೀರುತೋಟದಲ್ಲಿ ವಾಸಿಸುತ್ತಿರುವ ಪ್ರವೀಣ್ ಆಳ್ವ (45) ಆತ್ಮಹತ್ಯೆಗೈದ ಅಂಗಡಿ ಮಾಲಕ. ತೊಕ್ಕೊಟ್ಟು ಜಂಕ್ಷನ್ ಬಳಿ ಟೈಲರ್ ಗಳಿಗೆ ಸಂಬಂಧಿಸಿದ ಹೊಲಿಗೆ ನೂಲು ಸೇರಿದಂತೆ ಇತರ ಕಚ್ಚಾ ವಸ್ತುಗಳನ್ನು ಪೂರೈಸುವ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ ನಡೆಸುತ್ತಿದ್ದರು.

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಅವರು ಬೆಳಗ್ಗೆ 6.30ಕ್ಕೆ ಮನೆಯಿಂದ ಹೊರಟಿದ್ದು ಅಂಗಡಿಗೆ ಬಂದ ಪ್ರವೀಣ್ ಎದುರಿನ ಶಟರ್ ಕೆಳಗೆಳೆದು ಶಾಲಿನಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಪ್ರವೀಣ್ ಅವರ ಸ್ನೇಹಿತರೋರ್ವರು ಬಂದು ಶಟರ್ ಎತ್ತಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.ಅವರು ಆತ್ಮಹತ್ಯೆಗೈದ ಸ್ಥಳದಲ್ಲಿ ಚೀಟಿಯೊಂದರಲ್ಲಿನನ್ನ ಆತ್ಮಹತ್ಯೆಗೆ ನಾನೇ ಕಾರಣ ಎಂದು ಬರೆದಿದ್ದಾರೆ ಎಂದು ಹೇಳಲಾಗಿದೆ. ಮೃತರು ತಾಯಿ, ಪತ್ನಿ ಪುತ್ರನನ್ಬು ಅಗಲಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post