ಮಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ದೇಶದಾದ್ಯಂತ ಸಂಚಲನ ಸೃ..ಷ್ಟಿಸಿತ್ತು. ರಾಷ್ಟ್ರೀಯ ತನಿಖಾ ದಳದ(ಎನ್ ಐ ಎ) ಅಧಿಕಾರಿಗಳು ಈ ಪ್ರಕರಣದ ನಾಲ್ಕನೇ ಆರೋಪಿ ಎನ್ನಲಾದ ಸುಳ್ಯದ ಮುಸ್ತಫಾ ಪೈಚಾರು ಎಂಬಾತನನ್ನು ಸಕಲೇಶಪುರದಲ್ಲಿ ಮೇ.9ರ ಮದ್ಯರಾತ್ರಿ ಬಂಧಿಸಿದ್ದಾರೆ.
ಆನೆಮಹಲ್ ಸಿರಾಜ್ ಎಂಬಾತನ ಜೊತೆಗೆ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿ ಸಿರಾಜ್, ಮುಸ್ತಫಾ ಪೈಚಾರ್ ಮತ್ತು ಇವರ ಜೊತೆಗಿದ್ದ ಸೋಮವಾರ ಪೇಟೆ ಮೂಲದ ಇಲಿಯಾಸ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಮುಸ್ತಫಾ ಎಲ್ಲಿ ಅಡಗಿದ್ದ..? ಸಕಲೇಶಪುರದ ಆನೆಮಹಲ್ ನಲ್ಲಿ ಮುಸ್ಲಿಂ ಕುಟುಂಬಕ್ಕೆ ಸೇರಿದ್ದ ವ್ಯಕ್ತಿಯೋರ್ವರ ತೋಟದಲ್ಲಿ ಶುಂಠಿ ಕೃಷಿ ಮಾಡುವ ನೆಪದಲ್ಲಿ ಮುಸ್ತಫಾ ಅಲ್ಲಿಗೆ ಪ್ರವೇಶವಾಗಿದ್ದ. ಈ ಮನೆ ಒಂಟಿ ಮನೆಯಾಗಿದ್ದು, ಹತ್ತಿರ ಎಲ್ಲೂ ಮನೆಗಳಿರಲಿಲ್ಲ. ಎರಡು ತಿಂಗಳ ಹಿಂದೆ ಮತ್ತೋರ್ವ ವ್ಯಕ್ತಿಯ ಜೊತೆ ಮುಸ್ತಫಾ ಅಲ್ಲಿಗೆ ಎಂಟ್ರಿಯಾಗಿದ್ದ ಎನ್ನಲಾಗಿದೆ. ಎನ್ಐಎ ಮತ್ತು ರಾಜ್ಯ ಪೊಲೀಸ್ ಈತನ ಚಲನವಲನ ಮೇಲೆ ಕಣ್ಣಿಟ್ಟಿತ್ತು. ಮುಸ್ತಫಾ ಕಳೆದ ಎರಡು ದಿನಗಳ ಹಿಂದೆ ಹತ್ತಿರದ ಮನೆಯಿಂದ ಕರೆಯೊಂದನ್ನು ಮಾಡಿದ್ದ. ಈ ಕರೆಯ ಟ್ರೇಸ್ ಮಾಡಿದ ಪೊಲೀಸರು ಮೇ.9ರ ಮಧ್ಯರಾತ್ರಿ ದಾಳಿ ಮಾಡಿ ಬಂಧಿಸಿದೆ. ಈತನ ಬಂಧನ ಆಗಿರುವ ವಿಷಯ ಮರುದಿನ ಬೆಳಗ್ಗೆಯವರೆಗೆ ಹತ್ತಿರದ ಮನೆಗೂ ಗೊತ್ತಾಗಿರಲಿಲ್ಲ.
ಎನ್ ಐ ಎ ಆರೋಪಿ ಮುಸ್ತಫಾ ಪೈಚಾರಿಗೆ ಲುಕ್ ಔಟ್ ನೋಟೀಸ್ ಹೊರಡಿಸಿದ್ದು, ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿತ್ತು. ಎನ್ ಐ ಎ ಕಳೆದ ವರ್ಷ ಜನವರಿಯಲ್ಲಿ 20 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಈ ಕುರಿತ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Discover more from Coastal Times Kannada
Subscribe to get the latest posts sent to your email.








Discussion about this post