ಬಂಟ್ವಾಳ, ಜೂ 09 : ತಾಲೂಕಿನ ಗ್ರಾಮ ಪಂಚಾಯತ್ ವೊಂದರ ಕಟ್ಟಡ ಕಾಮಗಾರಿಗಾಗಿ ದಾಸ್ತಾನು ಇರಿಸಲಾಗಿದ್ದ ಕಬ್ಬಿಣದ ರಾಡ್ ಕಳವು ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತೃತ್ವದ ತಂಡ ಬಂಧಿಸಿದೆ. ಸರಪಾಡಿ ಪೆರ್ಲ ದರ್ಖಾಸು ನಿವಾಸಿ ವಾಹನ ಚಾಲಕ ವಿನೋದ್ ಕುಮಾರ್, ಬೆಳ್ತಂಗಡಿ ತಾಲೂಕಿನ ಪುತ್ರಿಲ ನಿವಾಸಿ ಪುನೀತ್ , ಅಲ್ಲಿಪಾದೆ ಪುರುಷೋತ್ತಮ ಮೂವರು ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ 70 ಸಾವಿರ ಮೌಲ್ಯದ 600 ಕೆ.ಜಿ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇವರು ಅಮ್ಟಾಡಿ ಗ್ರಾಮಪಂಚಾಯತ್ ನಲ್ಲಿ ನಡೆಯತ್ತಿದ್ಧ ಕಟ್ಟಡ ಕಾಮಗಾರಿಗೆಂದು ತಂದು ದಾಸ್ತಾನು ಮಾಡಲಾಗಿದ್ದ ಕಬ್ಬಿಣದ ರಾಡ್ ಗಳನ್ನು ಮಾರ್ಚ್ ತಿಂಗಳಿನ 18 ರಂದು ಕಳವು ಮಾಡಿದ್ದರು.ಕಟ್ಟಡ ಕಾಮಗಾರಿ ನಡೆಸಲು ತಂದಿರಿಸಿದ ಕಬ್ಬಿಣದ ಸೊತ್ತುಗಳು ಕಳವಾದ ಬಗ್ಗೆ ಇಲ್ಲಿನ ಪಿಡಿಒ ರವಿ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ಅ ಬಳಿಕ ಪೋಲಿಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.
ಎಸ್.ಐ.ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಮೊಡಂಕಾಪು ಎಂಬಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಸಂಶಯಾಸ್ಪದ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಸಮರ್ಪಕವಾಗಿ ಉತ್ತರ ನೀಡದ ಚಾಲಕ ಸಹಿತ ವಾಹನದಲ್ಲಿದ್ದ ಮೂವರನ್ನು ವಿಚಾರ ನಡೆಸಿದಾಗ ಅಮ್ಟಾಡಿಯಲ್ಲಿ ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ನೇತ್ರತ್ವದ ರಾಮಕೃಷ್ಣ ಅವರ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post