ಮಂಗಳೂರು: ಲಾಟರಿ ಎಂಬ ಸ್ಕೀಮ್ ನ ಹೆಸರಿನಲ್ಲಿ ಸಾರ್ವಜನಿಕರಿಂದ ತಿಂಗಳಿಗೆ 1000ದಂತೆ 20-25 ಕಂತುಗಳನ್ನು ಪಡೆದು ಕಾರು ಬೈಕು ಚಿನ್ನ ಹಾಗು ಮನೆಗಳನ್ನು ನೀಡುವುದಾಗಿ ಜಾಹಿರಾತುಗಳನ್ನು ನೀಡಿ ವಂಚಿಸುವ ಸುಮಾರು 10-15 ಸ್ಕಿಮ್ ಗಳು ಮಂಗಳೂರು ನಗರದಾದ್ಯಂತ ಮತ್ತು ದ.ಕ ಉಡುಪಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತಿದ್ದು ಇದರ ಮೂಲ ಸುರತ್ಕಲ್ ಆಗಿರುತ್ತದೆ. ಈ ಸ್ಕೀಮ್ ನವರು ತಿಂಗಳಿಗೆ 25-30 ಲಕ್ಷದವರೆಗೆ ಹಣವನ್ನು ಸಂಗ್ರಹಿಸಿ ವರ್ಷಕ್ಕೆ 5-10 ಕೋಟಿ ಹಣವನ್ನು ಗಳಿಸುತ್ತಿದ್ದಾರೆ ಈ ಬಗ್ಗೆ ಸಂಬಂದ ಪಟ್ಟ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಸಾರ್ವಜನಿಕರಿಗೆ ಟೋಪಿ ಹಾಕುವುದು ಖಂಡಿತ ಈ ಸ್ಕೀಮ್ ನ ವ್ಯವಹಾರಕ್ಕೆ ಯಾವುದೇ ದಾಖಲೆಗಳು ಇರುವುದಿಲ್ಲ.
Discover more from Coastal Times Kannada
Subscribe to get the latest posts sent to your email.
Discussion about this post