ಮಂಗಳೂರು, ಆ.10: ಕ್ವಿಟ್ ಇಂಡಿಯಾ ದಿನದ ಪ್ರಯುಕ್ತ ಶನಿವಾರ ಜಿಲ್ಲಾಡಳಿತದ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿಯವರನ್ನು ಗೌರವಿಸಲಾಯಿತು. ನಗರದ ಕುದ್ರೋಳಿ ಅಳಕೆಯಲ್ಲಿರುವ ವಿಠಲ ಕಿಣಿಯವರ ಮನೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ ನೀಡಿ ಗೌರವಿಸಿದರು. ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ತಹಶೀಲ್ದಾರ್ ರಮೇಶ್ ಬಾಬು, ಕಸಬಾ ಕಂದಾಯ ನಿರೀಕ್ಷಿಕ ಚೇತನ್ ಉಪಸ್ಥಿತರಿದ್ದರು.
1942ರಲ್ಲಿ ಭಾರತ ಛೋಡೋ ಚಳವಳಿ ನಡೆದಾಗ ಕಾಸರಗೋಡಿನಲ್ಲಿ ವಿದ್ಯಾರ್ಥಿಗಳ ಜೊತೆ ಸೇರಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಮಟ್ಟಾರು ವಿಠಲ ಕಿಣಿ, 1954ರಲ್ಲಿ ಸರ್ವ ಪಕ್ಷ ಗೋವಾ ವಿಮೋಚನಾ ಸಮಿತಿ ಆರಂಭಿಸಿ ಕೋಶಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. 1955ರ ಆಗಸ್ಟ್ 15ರಂದು ಗೋವಾ ವಿಮೋಚನೆಗಾಗಿ ಉಡುಪಿಯ ಮಾಜಿ ಪುರಸಭಾಧ್ಯಕ್ಷ ಹಾಗೂ ಸ್ವಾತಂತ್ರ ಹೋರಾಟಗಾರ ದಿ. ಯು.ಎಸ್. ನಾಯಕರ ನೇತೃತ್ವದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post