ಆಂಧ್ರಪ್ರದೇಶ, ತೆನಾಲಿ: ಸೈನೈಡ್ ಮಲ್ಲಿಕಾ, ಜಾಲಿ ಜೋಸೆಫ್ ಮುಂತಾದ ಮಹಿಳಾ ಸರಣಿ ಹಂತಕರ ಎದೆನಡುಗಿಸುವ ಕ್ರೌರ್ಯದ ಕಥೆಗಳನ್ನು ಕೇಳಿರುತ್ತೀರಿ. ಆದರೆ ಆಂಧ್ರ ಪ್ರದೇಶದಲ್ಲಿ ಮೂವರು ಮಹಿಳೆಯರು ಗ್ಯಾಂಗ್ ಕಟ್ಟಿಕೊಂಡು ಈ ರೀತಿ ಸರಣಿ ಹತ್ಯೆಗಳನ್ನು ಮಾಡಿದ್ದಾರೆ. ಈ ಮೂವರು ಸೀರಿಯಲ್ ಕಿಲ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಸರಣಿ ಹಂತಕರ ಕಥೆಗಳನ್ನು ಸಾಕಷ್ಟು ನೋಡಿರುತ್ತೀರಿ. ಇವರ ಕತೆಗಳನ್ನು ಆಧರಿಸಿದ ಸಿನಿಮಾ ಹಾಗೂ ವೆಬ್‌ಸೀರೀಸ್‌ಗಳೂ ಬಂದಿವೆ. ಸೈನೈಡ್ ಮಲ್ಲಿಕಾಳಂತಹ ಕೆಲವು ವ್ಯಕ್ತಿಗಳನ್ನು ಹೊರತುಪಡಿಸಿ ಮಹಿಳಾ ಸರಣಿ ಹಂತಕರು ಬಹಳ ವಿರಳ. ಆದರೆ ಆಂಧ್ರಪ್ರದೇಶದಲ್ಲಿ ಸರಣಿ ಹಂತಕಿಯರ ಗುಂಪೊಂದು ಜನರಲ್ಲಿ ನಡುಕು ಹುಟ್ಟಿಸಿದೆ.
ಅಪರಿಚಿತರೊಂದಿಗೆ ಸ್ನೇಹ ಬೆಳೆಸಿಕೊಂಡು, ಅವರಿಗೆ ಸೈನೈಡ್ ಬೆರೆಸಿದ ಪಾನೀಯ ನೀಡಿದ ಬಳಿಕ ಅವರ ಬಳಿಯಿಂದ ಚಿನ್ನ, ನಗದು ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಮೂವರು ಮಹಿಳೆಯರನ್ನು ಆಂಧ್ರಪ್ರದೇಶದ ತೆನಾಲಿಯಲ್ಲಿ ಬಂಧಿಸಲಾಗಿದೆ. ತೆನಾಲಿಯ “ಸರಣಿ ಹಂತಕಿಯರು”, ಮೂವರು ಮಹಿಳೆಯರು ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ್ದಾರೆ ಎಂದು ಆಂಧ್ರ ಪೊಲೀಸರು ತಿಳಿಸಿದ್ದಾರೆ. ಸೀರಿಯಲ್ ಕೊಲೆಗಳಿಗೆ ಸಂಬಂಧಿಸಿದಂತೆ ಮುನಗಪ್ಪ ರಜಿನಿ, ಮಡಿಯಾಲ ವೆಂಕಟೇಶ್ವರಿ ಮತ್ತು ಗುಲ್ರ ರಮಣಮ್ಮ ಎಂಬುವವರನ್ನು ಆಂಧ್ರಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಸಂತ್ರಸ್ತರು ಸೈನೈಡ್ ಮಿಶ್ರಿತ ಪಾನೀಯಗಳನ್ನು ಸೇವಿಸಿದ ನಂತರ ಸಾಯುತ್ತಿದ್ದರು. ಬಳಿಕ ಹಂತಕಿಯರು ಅವರ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಸರಣಿ ಹಂತಕಿಯರು” ಈ ವರ್ಷ ಜೂನ್‌ನಲ್ಲಿ ನಾಗೂರ್ ಬಿ ಎಂಬ ಮಹಿಳೆಯನ್ನು ಹತ್ಯೆಗೈದ ನಂತರ ಸರಣಿ ಕೊಲೆಗಳು ನಡೆದಿವೆ. ಈ ಘಟನೆ ಬಳಿಕ ಅವರು ಇನ್ನೂ ಇಬ್ಬರನ್ನು ಕೊಲ್ಲಲು ಪ್ರಯತ್ನಿಸಿದ್ದರು. ಆದರೆ ಅದೃಷ್ಟವಶಾತ್ ಅವರು ಬದುಕುಳಿದರು ಎಂದು ಪೊಲೀಸರು ಹೇಳಿದ್ದಾರೆ. ಅಪರಾಧ ಜಗತ್ತು ಮಡಿಯಾಲ ವೆಂಕಟೇಶ್ವರಿಗೆ ಹೊಸತೇನಲ್ಲ. 32 ವರ್ಷದ ವೆಂಕಟೇಶ್ವರಿ, ತೆನಾಲಿಯಲ್ಲಿ ಸ್ವಯಂ ಕಾರ್ಯಕರ್ತೆಯಾಗಿ ಈ ಹಿಂದೆ ಕೆಲಸ ಮಾಡುತ್ತಿದ್ದರು. ನಾಲ್ಕು ವರ್ಷ ಅಲ್ಲಿ ದುಡಿದ ಆಕೆ, ಬಳಿಕ ಕಾಂಬೋಡಿಯಾಕ್ಕೆ ತೆರಳಿದ್ದಳು. ಅಲ್ಲಿ ಸೈಬರ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post