ಮಂಗಳೂರು: ಕರಾವಳಿಯಲ್ಲಿ ಬಂಡವಾಳ ಹೂಡಲು ಹಲವರು ಮುಂದೆ ಬಂದಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಯಾರೆಲ್ಲಾ ಮುಂದೆ ಬರುತ್ತಾರೋ ಅವರಿಗೆ ನಮ್ಮ ಸರಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ. ಪ್ರವಾಸೋದ್ಯಮಕ್ಕೆ ನಮ್ಮ ಸರಕಾರ ಬೆಂಬಲ ಕೊಟ್ಟೇ ಕೊಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮಂಗಳೂರು ಅತ್ತಾವರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೆಚ್ಚು ಪೂರಕವಾಗಿರುವ ಜಿಲ್ಲೆಗಳು. ಕರ್ನಾಟಕದಲ್ಲಿ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು 2024ರಲ್ಲಿ 5 ವರ್ಷಗಳ ನೀತಿಯನ್ನು ಘೋಷಣೆ ಮಾಡಿ ಜಾರಿಗೆ ತರುವ ಕೆಲಸ ಮಾಡಿದ್ದೇವೆ. ಇದರಲ್ಲಿ ಸರಕಾರ ಅನೇಕ ಸೌಕರ್ಯ, ಬೆಂಬಲ, ಸಹಕಾರ ನೀಡಿದೆ ಎಂದರು.


ಇಲ್ಲೆ ಉದ್ಯಮ ಸ್ಥಾಪಿಸಿ, ಕರಾವಳಿ ಯುವಕರಿಗೆ ಸಿಎಂ ಕರೆ: ಕರಾವಳಿ ಕ್ರಿಸ್ತ ಪೂರ್ವದಲ್ಲೇ ಪ್ರಸಿದ್ಧವಾಗಿತ್ತು. ಶಿಕ್ಷಣ ಆರೋಗ್ಯ, ಬ್ಯಾಂಕಿಂಗ್‌ನಲ್ಲಿ ಅಭಿವೃದ್ಧಿಯಾಗಿದೆ. ತೆರಿಗೆ ಕೊಡುವುದರಲ್ಲಿಯೂ ಮುಂದೆ ಇದೆ ಎಂದು ನುಡಿದರು. ದೇಶವಿದೇಶಗಳಿಂದ ಶಿಕ್ಷಣ ಪಡೆಯಲು ಕರಾವಳಿಗೆ ಬರುತ್ತಾರೆ. ಆದರೆ ಕೆಲಸಕ್ಕೆ ವಿದೇಶಕ್ಕೆ ಹೋಗುತ್ತಾರೆ. ಇದರಿಂದ ತಂದೆ ತಾಯಿಗಳನ್ನು ನೋಡುವರಿಲ್ಲ ಎಂದು ಹೇಳಿದರು. ಮಂಗಳೂರಿನಲ್ಲಿ ಫೈವ್ ಸ್ಟಾರ್ ಹೋಟೆಲ್ ಇಲ್ಲ: ಮಂಗಳೂರು ಎಲ್ಲದರಲ್ಲೂ ಮುಂದುವರಿದರೂ ಒಂದು ಫೈವ್ ಸ್ಟಾರ್ ಹೋಟೆಲ್ ಇಲ್ಲ. ಉಡುಪಿ ಮತ್ತು ಉತ್ತರ ಕನ್ನಡದಲ್ಲೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇದೀಗ ಮುಂದೆ ಬಂದಿದ್ದಾರೆ. ಇಲ್ಲಿನ ಸ್ಥಳೀಯರು ಸಾಹಸ ಸ್ವರೂಪಿಗಳು. ದುಬೈ, ಪೂನಾ,ಲಂಡನ್ ಗೆ ಹೋಗಿ ಉದ್ದಿಮೆ ಸ್ಥಾಪನೆ ಮಾಡಿದವರು. ಅಲ್ಲಿ ಮಾಡುವ ಉದ್ದಿಮೆಯನ್ನು ಇಲ್ಲಿಯೇ ಮಾಡಿ ಎಂದರು.

ಪ್ರವಾಸೋದ್ಯಮ ಬೆಳೆಯಬೇಕಾದರೆ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕು. ಸದ್ಯ ಈಗ ಶಾಂತ ವಾತಾವರಣ ಇರುವುದು ಅತ್ಯಂತ ಸ್ವಾಗತಾರ್ಹ. ಇದೇ ರೀತಿ ಮುಂದುವರಿಯಬೇಕು. ಕಾನೂನು ಕೈಗೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಸಮಾಜ ಒಡೆಯುವ ಕೆಲಸ ಮಾಡಬಾರದು. ದೇಶಭಕ್ತಿ ಸಮಾಜ ಒಡೆಯುವುದರಿಂದ, ಇನ್ನೊಂದು ಧರ್ಮದವರಿಗೆ ತೊಂದರೆ ಕೊಡುವುದರಿಂದ ಬರುವುದಿಲ್ಲ. ಎಲ್ಲಾ ಧರ್ಮಗಳು ದ್ವೇಷ ಬಿತ್ತುವ ಕೆಲಸ ಮಾಡಲ್ಲ ಎಂದರು. ಪ್ರವಾಸೋದ್ಯಮದ ಅಭಿವೃದ್ಧಿಗೆ ಹೂಡಿಕೆ ಮಾಡಲು ಮುಂದೆ ಬರುವವರಿಗೆ ನಮ್ಮ ಸರಕಾರ ಸಹಕಾರ ನೀಡುತ್ತದೆ. ಇದು ಬರೀ ಭರವಸೆಯಲ್ಲ. ನಮ್ಮದು ನುಡಿದಂತೆ ನಡೆದ ಸರಕಾರ ಹೇಳಿದ್ದನ್ನು ಮಾಡಿಯೇ ಮಾಡುತ್ತೇವೆ ಎಂದು ವಾಗ್ದಾನ ಮಾಡಿದರು, ಇದೇ ರೀತಿ ಮುಂದುವರಿಯಲಿ ಎನ್ನುವ ಮೂಲಕ ಮಂಗಳೂರಿನಲ್ಲಿ ಕಮಿಷನರ್ ಮತ್ತು ಎಸ್ಪಿ ವರ್ಗಾವಣೆ ಆಗುತ್ತದೆ ಎಂಬ ವದಂತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಗಳೆದರು.
ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಕೆ ಪಾಟೀಲ್, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಅಶೋಕ ರೈ, ಐವಾನ್ ಡಿಸೋಜ ಮತ್ತಿತರರು ಇದ್ದರು.
Discover more from Coastal Times Kannada
Subscribe to get the latest posts sent to your email.








Discussion about this post