ನವದೆಹಲಿ, ಎ.11: ಕೊನೆಗೂ ಬಿಜೆಪಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದ್ದು, ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ವೇಳೆ ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದು, ಸಚಿವ ಎಸ್. ಅಂಗಾರ ಅವರನ್ನು ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಕೈ ಬಿಡಲಾಗಿದ್ದು, ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಸುಳ್ಯದಿಂದ ಭಾಗಿರಥಿ ಹಾಗೂ ಪುತ್ತೂರು ಕ್ಷೇತ್ರದಿಂದ ಆಶಾ ತಿಮ್ಮಪ್ಪಗೆ ಮಣೆ ಹಾಕಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.
ಮಂಗಳೂರು ದಕ್ಷಿಣದಲ್ಲಿ ವೇದವ್ಯಾಸ ಕಾಮತ್, ಉತ್ತರದಲ್ಲಿ ಭರತ್ ಶೆಟ್ಟಿ, ಮೂಡುಬಿದ್ರೆ – ಉಮಾನಾಥ ಕೋಟ್ಯಾನ್, ಬೆಳ್ತಂಗಡಿ- ಹರೀಶ್ ಪೂಂಜ, ಉಳ್ಳಾಲದಲ್ಲಿ ಸತೀಶ್ ಕುಂಪಲ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಬಾರಿ ವಿಭಿನ್ನ ರೀತಿಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ರಾಜ್ಯದ 31 ಜಿಲ್ಲೆಗಳಲ್ಲಿ 31 ಸಾವಿರ ಕಾರ್ಯಕರ್ತರಿಂದಲೇ ಮಾಹಿತಿ ಪಡೆದು, ಅದನ್ನು ಆಧರಿಸಿ ಟಿಕೆಟ್ ಹಂಚಿಕೆ ಮಾಡಲಾಗಿದೆ ಎಂದು ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಹೇಳಿದರು. ಈ ಬಾರಿ ಎಂಟು ಮಹಿಳೆಯರು, ಹಿಂದುಳಿದ ವರ್ಗಕ್ಕೆ 32, ಎಸ್ಸಿ 30 ಜನರಿಗೆ ಟಿಕೆಟ್ ನೀಡಲಾಗಿದೆ. ಇದಲ್ಲದೆ, 9 ಮಂದಿ ವೈದ್ಯರಿಗೆ. ನಿವೃತ್ತ ಐಐಎಸ್-1, ನಿವೃತ್ತ ಐಪಿಎಸ್- 1, ನಿವೃತ್ತ ಸರಕಾರಿ ನೌಕರರು3, ಸಮಾಜ ಸೇವಾ ಕಾರ್ಯಕರ್ತರು 8, ವಕೀಲರು 5, ಶಿಕ್ಷಣ ತಜ್ಞರು ಮೂರು ಮಂದಿಗೆ ಟಿಕೆಟ್ ನೀಡಲಾಗಿದೆ.
- ಅಥಣಿ – ಮಹೇಶ್ ಕುಮಟಳ್ಳಿ,
- ಕಾಗವಾಡ- ಶ್ರೀಮಂತ್ ಪಾಟೀಲ್,
- ಕುಡಚಿ – ಪಿ.ರಾಜೀವ್
- ರಾಯಭಾಗ ದುರ್ಯೋಧನ
- ಹುಕ್ಕೇರಿ – ನಿಖಿಲ್ ಕತ್ತಿ
- ಹರಭಾವಿ – ಬಾಲಚಂದ್ರ ಜಾರಕಿಹೊಳಿ
- ಗೋಕಾಕ್ ರಮೇಶ್ ಜಾರಕಿಹೊಳಿ
- ಯಮಕನಮರಡಿ – ಬಸವರಾಜ್
- ಚಿಕ್ಕೋಡಿ ರಮೇಶ್ ಕತ್ತಿ
- ಬೆಳಗಾವಿ ಉತ್ತರ – ರವಿ ಪಾಟೀಲ್
- ಬೆಳಗಾವಿ ದಕ್ಷಿಣ ಅಭಯ ಪಾಟೀಲ್
- ಬೆಳಗಾವಿ ಗ್ರಾಮೀಣ – ನಾಗೇಶ್
- ಸವದತ್ತಿ – ರತ್ನಾ ವಿಶ್ವನಾಥ್ ಮಾಮನಿ
- ಶಿರಸಿ – ವಿಶ್ವೇಶ್ವರ ಹೆಗಡೆ
- ಯಲ್ಲಾಪುರ- ಶಿವರಾಮ ಹೆಬ್ಬಾರಿ
- ಹುಬ್ಬಳ್ಳಿ ಧಾರವಾಡ – ಅರವಿಂದ ಬೆಲ್ಲದ್
- ಹಡಗಲಿ- ಶ್ರೀಕೃಷ್ಣ ನಾಯಕ್
- ವಿಜಯಪುರ ನಗರ – ಬಸವನಗೌಡ ಪಾಟೀಲ್ ಯತ್ನಾಳ್
- ಬಳ್ಳಾರಿ ಗ್ರಾಮೀಣ – ಶ್ರೀರಾಮುಲು
- ಬಳ್ಳಾರಿ ನಗರ- ಗಣಿ ಸೋಮಶೇಖರ ರೆಡ್ಡಿ
- ಸಂಡೂರು – ಶಿಲ್ಪಾ ರಾಘವೇಂದ್ರ
- ಮೊಳಕಾಲ್ಮೂರು – ಎಸ್ ತಿಪ್ಪೇಸ್ವಾಮಿ
- ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
- ಶಿಕಾರಿಪುರ – ವಿಜಯೇಂದ್ರ
- ಸೊರಬ ಕುಮಾರ್ ಬಂಗಾರಪ್ಪ
- ಹರತಾಳು ಹಾಲಪ್ಪ
- ಕುಂದಾಪುರ – ಕಿರಣ್ ಕೊಡ್ಗಿ
- ಸಕಲೇಶ ಪುರ–ಸಿಮೆಂಟ್ ಮಂಜು
- ಬೆಳ್ತಂಗಡಿ–ಹರೀಶ್ ಪೂಂಜ
- ಮೂಡಬಿದರೆ–ಉಮಾನಾಥ ಕೋಟ್ಯಾನ್
- ಮಂಗಳೂರು ಉತ್ತರ–ಭರತ್ ಶೆಟ್ಟಿ
- ಮಂಗಳೂರು ದಕ್ಷಿಣ–ವೇದವ್ಯಾಸ ಕಾಮತ್
- ಮಂಗಳೂರು–ಸತೀಶ್ ಕುಂಪಲ
- ಬಂಟ್ವಾಳ–ರಾಜೇಶ ನಾಯಕ
- ಪುತ್ತೂರು–ಆಶಾ ತಿಮ್ಮಪ್ಪ
- ಸುಳ್ಯ–ಭಾಗೀರಥಿ ಮುರುಲ್ಯ
- ಮಡಿಕೇರಿ–ಅಪ್ಚಚ್ಚು ರಂಜನ್
- ವಿರಾಜಪೇಟೆ–ಕೆ.ಜಿ. ಬೋಪಯ್ಯ
Discover more from Coastal Times Kannada
Subscribe to get the latest posts sent to your email.








Discussion about this post