ಮಂಗಳೂರು: ಕರಾವಳಿ ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳಿಗೂ ಮಿಕ್ಕಿ ಸೇವೆ ನೀಡುತ್ತಿರುವ ರೋಹನ್ ಕಾರ್ಪೋರೇಶನ್ ನ ಮತ್ತೊಂದು ವಸತಿ ಸಮುಚ್ಚಯ “ರೋಹನ್ ಗಾರ್ಡನ್’ ಯೋಜನೆಯ ಭೂಮಿಪೂಜೆ ಎ.12ರಂದು ಸಂಜೆ 5ಕ್ಕೆ ನಡೆಯಲಿದೆ.
ಕದ್ರಿ -ಶಿವಬಾಗ್ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಆಧುನಿಕ ವಸತಿ ಸಮುಚ್ಚಯ ಪ್ರಕೃತಿ ಮತ್ತು ಅನುಕೂಲತೆಗಳ ಸಮ್ಮಿಲನವಾಗಿದೆ. ಈ ಯೋಜನೆಯು 1,105 ರಿಂದ 1,550 ಚದರ ಅಡಿಗಳ 2 ಮತ್ತು 3 ಬಿ.ಎಚ್.ಕೆ. ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. ಪ್ರತಿಯೊಂದು ಅಪಾರ್ಟ್‌ಮೆಂಟ್ ವಿಟ್ರಿಫೆ„ಡ್ ಫ್ಲೋರಿಂಗ್, ಪ್ರೀಮಿಯಂ ಸ್ಯಾನಿಟರಿ ವೇರ್ ಮತ್ತು ಯುಪಿವಿಸಿ/ಅಲ್ಯೂಮಿನಿಯಂ ಕಿಟಕಿಗಳೊಂದಿಗೆ ಉತ್ತಮ ಗುಣಮಟ್ಟದ ನಿರ್ಮಾಣವನ್ನು ಹೊಂದಿದೆ.
ರೋಹನ್ ಗಾರ್ಡನ್ ಐಷಾರಾಮಿ, ಸುರಕ್ಷತೆ ಮತ್ತು ಪರಿಸರ ಸ್ನೇಹಿ ವಾಸ ವ್ಯವಸ್ಥೆಯನ್ನು ಒದಗಿಸುವ ಆಧುನಿಕ ವಸತಿ ಸಮುಚ್ಚಯ. ಐದು ಅಂತಸ್ತುಗಳ ಈ ಕಟ್ಟಡದಲ್ಲಿ 28 ಸುಂದರವಾಗಿ ವಿನ್ಯಾಸಗೊಳಿಸಲಾದ ಅಪಾರ್ಟ್‌ಮೆಂಟ್‌ಗಳು ಇದ್ದು, ಇದು ಆರಾಮ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಜಿಮ್ನೆàಶಿಯಂ, 24/7 ಸಿಸಿಟಿವಿ ಮತ್ತು ಸ್ಮಾರ್ಟ್ ಸೆನ್ಸರ್ ದೀಪಗಳಂತಹ ಪ್ರೀಮಿಯಂ ಸೌಲಭ್ಯಗಳಿವೆ. ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಪಾಯಿಂಟ್ಸ್, ಸಾಕಷ್ಟು ಪಾರ್ಕಿಂಗ್, ಮಕ್ಕಳ ಆಟದ ಸ್ಥಳ ಮತ್ತು ಹಿರಿಯರಿಗಾಗಿ ವಿಶ್ರಾಂತಿ ಸ್ಥಳವಿದೆ. ಅಗ್ನಿಶಾಮಕ ವ್ಯವಸ್ಥೆ, ವೀಡಿಯೋ ಡೋರ್ ಫೋನ್ ಮತ್ತು ಎ.ಆರ್.ಡಿ. ಅಟ್ಯಾಚ್ ಲಿಫ್ಟ್’ಗಳ ಸೌಲಭ್ಯವಿದೆ. ನಗರದ ಪ್ರಮುಖ ಸ್ಥಳಗಳಿಗೆ ಸುಲಭ ಸಂಪರ್ಕವನ್ನು ಹೊಂದಿದ್ದು, ಶಾಂತ ಮತ್ತು ಹಸಿರು ಪರಿಸರದ ಅನುಭವವನ್ನು ನೀಡಲಿದೆ.
ವಿಶಾಲ ಒಳಾಂಗಣ, ಸೊಗಸಾದ ಬಾಲ್ಕನಿಗಳು ಮತ್ತು ಸಮಕಾಲೀನ ವಾಸ್ತುಶಿಲ್ಪವನ್ನು ಹೊಂದಿದೆ. ಕರಾವಳಿ ಕರ್ನಾಟಕದಾದ್ಯಂತ 30ಕ್ಕೂ ಮಿಕ್ಕಿ ಯಶಸ್ವಿ ಯೋಜನೆಗಳನ್ನು ನಿರ್ಮಿಸಿರುವ ರೋಹನ್ ಕಾರ್ಪೋರೇಶನ್, ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಿದೆ. ರೋಹನ್ ಗಾರ್ಡನ್ ಯೋಜನೆಯು – ನಾವೀನ್ಯತೆ, ಗುಣಮಟ್ಟ ಮತ್ತು ಉತ್ತಮ ವಿನ್ಯಾಸವನ್ನು ಹೊಂದಿದ್ದು, ಗ್ರಾಹಕರಿಗ ಅತ್ಯುತ್ತಮ ವಾಸ ಯೋಗ್ಯ ಅನುಭವವನ್ನು ನೀಡಲಿದೆ.
ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿಸಬಹುದು. ವೆಬ್‌ಸೈಟ್:http://www.rohancorporation.in
Discover more from Coastal Times Kannada
Subscribe to get the latest posts sent to your email.
Discussion about this post