ಮಂಗಳೂರು: ಎಂಸಿ.ಸಿ.ಬ್ಯಾoಕಿನ 113ನೇ ಸಂಸ್ಥಾಪಕರ ದಿನಾಚರಣೆಯನ್ನುದಿನಾಂಕ 10.05.2025ರಂದು ಎಂ.ಸಿ.ಸಿ.ಬ್ಯಾoಕಿನ ಆಡಳಿತ ಕಛೇರಿಯಅವರಣದಲ್ಲಿಆಚರಿಸಲಾಯಿತು.ಈ ಆಚರಣೆಯು ಬ್ಯಾಂಕಿನ ಸಂಸ್ಥಾಪಕ ಶ್ರೀ ಪಿ.ಎಫ್.ಎಕ್ಸ್.ಸಲ್ಡಾನ್ಹಾಅವರ ಪರಂಪರೆಗೆಗೌರವ ಸಲ್ಲಿಸಿ ಸಹಕಾರಿ ವಲಯದಲ್ಲಿ ಬ್ಯಾಂಕಿನ ನಿರಂತರ ಪ್ರಗತಿಯನ್ನು ಗುರುತಿಸಿತು.
ಪ್ರಾರ್ಥನಾಗೀತೆಯೊಂದಿಗೆಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಬ್ಯಾಂಕಿನಇತಿಹಾಸ ಮತ್ತು ಪ್ರಗತಿಯಕುರಿತಾದ ಸಾಕ್ಷಚಿತ್ರವನ್ನು ಈ ಸಂದರ್ಭದಲ್ಲಿ ಪ್ರಸ್ತುತಪಡಿಸಲಾಯಿತು. ಬ್ಯಾಂಕಿನಅಧ್ಯಕ್ಷರಾದ ಸಹಕಾರರತ್ನ ಶ್ರೀ ಅನಿಲ್ ಲೋಬೊ ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಪಿಆರ್‌ಒ ವಂ.ಫಾ| ಡೆನಿಸ್ ಡೆಸಾ, ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಪ್ರಾಂತಿಯ ಸುಪಿರೀಯರ್ ವಂ.ಸಿ| ಕ್ಲಾರ ಮಿನೇಜಸ್, ಯುಎಫ್‌ಸಿ, ಪ್ರಜ್ಞಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್, ಮಂಗಳೂರು ಕೊಂಕಣ್ಸ್ದುಬಾಯ್, ಅಧ್ಯಕ್ಷ ಶ್ರೀ ಸ್ಟೇಫನ್ ಮಿನೇಜಸ್ ಮತ್ತುಬ್ಯಾಂಕಿನ ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜಸ್ ಹಾಜರಿದ್ದರು.
ಸ್ವಾಗತ ಭಾಷಣದಲ್ಲಿ ಶ್ರೀ ಅನಿಲ್ ಲೋಬೊ ಅವರು, ಗಣ್ಯರು, ಆಡಳಿತ ಮಂಡಳಿ ಸದಸ್ಯರು.ಸಿಬ್ಬಂದಿ ಹಾಗೂ ಅತಿಥಿಗಳನ್ನು ಸ್ವಾತಿಸಿದರು.ಅವರು ಎಂ.ಸಿ.ಸಿ. ಬ್ಯಾಂಕಿನರೂಪಾoತರ, ಸೇವೆ ಮತ್ತುಕಾರ್ಯಕ್ಷಮತೆಯಲ್ಲಿ ರಾಷ್ಟಿಕೃತ ಬ್ಯಾಂಕುಗಳೊoದಿಗೆ ಬ್ಯಾಂಕಿನಸಮಾನತೆಯನ್ನುಎತ್ತಿ ತೋರಿಸಿದರು.ವಂ.ಫಾ| ಡೆನಿಸ್ ಡೆಸಾಅವರ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರನ್ನೂ ಸ್ಪೂರ್ತಿಯ ಮೂಲ ಮತ್ತು ವೃತ್ತಿಪರತೆಯ ಸಂಕೇತವೆoದು ಶ್ಲಾಘಿಸಿದರು. ಬ್ಯಾಂಕಿನ ಪ್ರಗತಿ, ಸಾದನೆಯನ್ನು ವಿವರಿಸಿ ಸಂಸ್ಥಾಪಕರ ದಿನಾಚರಣೆಯ ಮಹತ್ವವನ್ನು ವಿವರಿಸಿದರು.
ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆಯಪ್ರಯುಕ್ತಸಂಸ್ಥಾಪಕ ಶ್ರೀ ಪಿ.ಎಫ್.ಎಕ್ಸ್ ಸಲ್ಡಾನ್ಹಾರವರಕುಟುಂಬದ ಸದಸ್ಯರು ಮತ್ತು ವೇದಿಕೆಯಲ್ಲಿರುವ ಗಣ್ಯರುಭಾವಚಿತ್ರಕ್ಕೆಪುಷ್ಪ ನಮನ ಸಲ್ಲಿಸಿದರು.
ವಂ.ಫಾ| ಡೆನಿಸ್ ಡೆಸಾ ಮಾತನಾಡಿ ಪ್ರಗತಿಯತ್ತ ಮುನ್ನುಗ್ಗುತ್ತಿರುವ ಬ್ಯಾಂಕಿನಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಮೂರು ಪ್ರಮುಖ ತತ್ವಗಳಲ್ಲಿ ಬೇರೂರಿರುವ ಸ್ಪೂರ್ತಿದಾಯಕ ಸಂದೇಶವನ್ನುಅವರು ಈ ಸಂದರ್ಭದಲ್ಲಿ ನೀಡಿದರು.1)ಕ್ರತಜ್ಞತೆಯಿoದ ಹಿಂದಿರುಗಿ ನೋಡುವುದು, ಸಂಸ್ಥೆಯ ಪರಂಪರೆ ಮತ್ತುಅಡಿಪಾಯದ ಮೌಲ್ಯಗಳನ್ನು ಆಚರಿಸುವುದು. 2) ಸ್ವಯಂ ಮೌಲ್ಯಮಾಪನವನ್ನು ಮಾಡುವುದು, ವಿಶ್ಲೇಷಣೆ ಮತ್ತು ಅಪಾಯಗಳನ್ನು ತೆಗೆದುಕೊಳ್ಳುವ ದೈರ್ಯದ ಮೂಲಕ ಅತ್ಮಾವಲೋಕನವನ್ನು ಪ್ರೊತ್ಸಾಹಿಸುವುದು. 3)ದೇವರಲ್ಲಿ ನಂಬಿಕೆಯಿಟ್ಟು ಮುಂದೆ ಸಾಗುವುದು.
ಬ್ಯಾಂಕಿನ ಸಿಬ್ಬಂದಿಗಳು ಶ್ರದ್ದೆಯಿಂದ ಇರಲು, ಸಹಾನುಭೂತಿಯಿಂದ ಸೇವೆ ಸಲ್ಲಿಸಲು ಮತ್ತುಗ್ರಾಹಕರನ್ನು ನಗುವಿನೊಂದಿಗೆ ಸಂಪರ್ಕಿಸಲುಅವರುಒತ್ತಾಯಿಸಿದರು.
ಪಾನೀರ್‌ನ ದಿ ಮರ್ಸಿಡ್ ಅನಾಥಾಶ್ರಮ ಮತ್ತುಕಂಕನಾಡಿಯ ಶಾಲೋಮ್‌ಟ್ರಸ್ಟ್ಗೆ ಈ ಸಂದರ್ಭದಲ್ಲಿದೇಣಿಗೆಯನ್ನು ವಿತರಿಸಲಾಯಿತು.ವಂ.ಸಿ| ಕ್ಲಾರಾ ಮಿನೇಜಸ್‌ರವರು ಬ್ಯಾಂಕಿನ ಪ್ರಗತಿಯನ್ನುತೋರಿಸುವ ಬುಲೆಟಿನ್‌ಅನ್ನು ಬಿಡುಗಡೆ ಮಾಡಿ ಬ್ಯಾಂಕಿನ ಪ್ರಗತಿಯನ್ನು ಶ್ಲಾಘಿಸಿದರು.ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವಲ್ಲಿ ಅವಕಾಶ, ತಾಳ್ಮೆ, ವೃತ್ತಿಪರತೆ ಮತ್ತುಕಠಿಣ ಪರಿಶ್ರಮದ ಮಹತ್ವವನ್ನುಒತ್ತಿ ಹೇಳಿದರು.
ಹೊಸದಾಗಿ ಸಿಎ ಪರೀಕ್ಷೇಯಲ್ಲಿಉತ್ತೀರ್ಣರಾದಗ್ರಾಹಕರ ಮಕ್ಕಳಾದ ಚಾರ್ಟರ್ಡ್ ಅಕೌಂಟೆoಟ್‌ಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂತ ಅಲೋಶಿಯಸ್ ಕಾಲೇಜಿನ ಪ್ರೊಫೆಸರ್ ಮತ್ತುಎಂಸಿಸಿ ಬ್ಯಾಂಕಿನ ಮಾಜಿಉಪಾಧ್ಯಕ್ಷರಾದಡಾ| ಎಡ್ಮಂಡ್‌ಜೆ.ಬಿ. ಫ್ರಾಂಕ್ ಮತ್ತುಎಂ.ಸಿ.ಸಿ.ಬ್ಯಾoಕಿನ ಮಾಜಿ ನಿರ್ದೇಶಕರು ಮತ್ತು ಬರಹಗಾರ ಶ್ರೀ ಮಾರ್ಸೆಲ್ ಎಂ.ಡಿಸೋಜ, ಮಂಗಳೂರು ಕೊಂಕಣ್ಸ್ದುಬೈನ ಹೊಸದಾಗಿಆಯ್ಕೆಯಾದ ಶ್ರೀ ಸ್ಟೀಫನ್ ಮಿನೇಜಸ್‌ಇವರು ಸಮುದಾಯಕ್ಕೆ ನೀಡಿದ ಶ್ಘಾಘನೀಯ ಸೇವೆಗಾಗಿ ಸನ್ಮಾನಿಸಲಾಯಿತು.
ಸಿಎ ಲಯ್ನಾಲ್ ನೋರೊನ್ಹಾರವರು ಬ್ಯಾಂಕಿನಇತಿಹಾಸ, ಪ್ರಗತಿಯನ್ನು ವಿವರಿಸಿ, ಅಧ್ಯಕ್ಷರು ಮತ್ತು ಆಡಳಿತ ಮಂಡಳಿಗೆ ಅಭಿನಂದಿಸಿದರು. ಗ್ರಾಹಕರು ಬ್ಯಾಂಕಿನ ಮೇಲೆ ಇಟ್ಟ ವಿಸ್ವಾಸದಿಂದ ಬ್ಯಾಂಕ್ ಮುನ್ನಡೆಯುತ್ತಿದೆಎಂದರು.ಯಶಸ್ಸು ಕೇವಲ ಫಲಿತಾಂಶಗಳ ಬಗ್ಗೆ ಅಲ್ಲ, ಅದರೆಅದನ್ನು ಸಾಧಿಸುವಲ್ಲಿ, ಸಮಗ್ರತೆ ಮತ್ತು ತತ್ವಗಳ ಬಗ್ಗೆ ನೆನಪಿಸಿದರು.
ಕಳೆದ 50 ವರ್ಷಗಳಿಂದ ಸಾರ್ವಜನಿಕ ಸೇವೆ ಸಲ್ಲಿಸುತ್ತಿರುವ ಪ್ರಜ್ಞಕೌನ್ಸೆಲಿಂಗ್ ಸೆಂಟರ್‌ನ ನಿರ್ದೇಶಕಿ ಪ್ರೊ.ಹಿಲ್ಡಾ ರಾಯಪ್ಪನ್‌ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದಅವರು ಬ್ಯಾಂಕಿಗೆಧನ್ಯವಾದ ಸಲ್ಲಿಸಿ ಸೇವೆಯಲ್ಲಿ ಸಹಾನೂಭೂತಿಯ ಮಹತ್ವವನ್ನುಒತ್ತಿ ಹೇಳಿದರು.
ಬ್ಯಾಂಕಿನ ನಿರ್ದೇಶಕರಾದಶ್ರೀ ಅನಿಲ್ ಪತ್ರಾವೊ, ಶ್ರೀ ಅಂಡ್ರು÷್ಯಡಿಸೋಜ,ಶ್ರೀ ಹೆರಾಲ್ಡ್ ಮೊಂತೇರೊ, ಶ್ರೀ ರೋಶನ್‌ಡಿಸೋಜ, ಡಾ| ಜೆರಾಲ್ಡ್ ಪಿಂಟೊ, ಶ್ರೀ ಮೆಲ್ವಿನ್ ವಾಸ್, ಶ್ರೀ ಸಿ.ಜಿ.ಪಿಂಟೊ, ಶ್ರೀಮತಿಐರಿನ್‌ರೆಬೆಲ್ಲೊ,ಡಾ| ಫ್ರೀಡಾಡಿಸೋಜ.ಶ್ರೀಮತಿಶರ್ಮಿಳಾ ಮಿನೇಜಸ್, ಶ್ರೀ ಫೆಲಿಕ್ಸ್ಡಿಕ್ರುಜ್‌ಮತ್ತುಶ್ರೀ ಆಲ್ವಿನ್ ಪಿ. ಮೊಂತೇರೊಹಾಜರಿದ್ದರು, ಬ್ಯಾoಕಿನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿ, ಗ್ರೀಶ್ಮಾ ಸಲ್ಡಾನ್ಹಾ, ನೀರ್‌ಮಾರ್ಗನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post