ಬೆಳ್ತಂಗಡಿ: 13 ವರ್ಷದ, ಬಾಲ ಪ್ರತಿಭೆ, “ಗಣನಾಯಕಾಯ ಗಣದೈವತಾಯ”; “ನೀಡು ಶಿವ, ನೀಡದಿರು ಶಿವಾ”; “ನೀನೇ ರಾಮ, ನೀನೇ ಶ್ಯಾಮ” -ಶ್ರೇಷ್ಠ ಹಿಂದೂ ಗೀತೆಗಳನ್ನು ಹಾಡುವ ಮತ್ತು ನುಡಿಸುವ ಮೂಲಕ 8ನೇ ತರಗತಿಯ ವಿದ್ಯಾರ್ಥಿ ಅರ್ಮಾನ್ ರಿಯಾಝ್ ಆ ಧ್ವನಿಗೆ ಮಂತ್ರಮುಗ್ಧರಾಗಿ ತಲೆದೂಗುತ್ತಿದ್ದರು. ಇತ್ತೀಚೆಗೆ ಬೆಳ್ತಂಗಡಿಯಲ್ಲಿ ನಡೆದಿದ್ದ ಸರಕಾರಿ ಪ್ರೌಢಶಾಲಾ ಶಿಕ್ಷಕರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಮಾವೇಶದಲ್ಲಿ ಜಯಂತ ಕಾಯ್ಕಿಣಿ ರಚನೆಯ “ಗುರುವೆ ನಿಮಗೆ ಶರಣು ನಾವು ಭಾವಪೂರ್ಣ ವಂದನೆ.” ಅಂತ ಅರ್ಮಾನ್ ಹಾಡುವಾಗ ವೇದಿಕೆಯಲ್ಲಿದ್ದವರೇ ತಲೆದೂಗುತ್ತಿದ್ದರು. ಆರಂಭದಲ್ಲಿ ಅರ್ಮಾನ್ 6 ವರ್ಷದವನಿರುವಾಗ, ಬಾಬಣ್ಣ ಪುತ್ತೂರು ಅವರು ಬೆಳ್ತಂಗಡಿಯಲ್ಲಿ ಆರಂಭಿಸಿದ್ದ ನಿನಾದ ಕಲಾ ಕೇಂದ್ರದಲ್ಲಿ ಪ್ರತಿ ಭಾನುವಾರ ಕೀಬೋರ್ಡ್ ತರಗತಿಗೆ ಸೇರಿಕೊಂಡಿದ್ದ. ಹುಡುಗನ ಪ್ರತಿಭೆಯನ್ನು ನೋಡಿ ಬಾಬಣ್ಣ ಅವರ ಪುತ್ರಿ ಸವಿತಾ ಅವರೇ ಅರ್ಮಾನ್‌ಗೆ ಸುಗಮ ಸಂಗೀತ ಹಾಡುಗಾರಿಕೆಯನ್ನು ಹೇಳಿಕೊಡಲಾರಂಭಿಸಿದ್ದರು. ಅರ್ಮಾನ್ ಕೀಬೋರ್ಡ್, ಗಿಟಾರ್‌ಗಳಲ್ಲಿ ರೋಜಾ ಚಿತ್ರದ ಪ್ರಸಿದ್ಧ ‘ಭಾರತ್ ಹಮ್ ಕೋ ಜಾನ್ ಸೇ ಪ್ಯಾರಾ ಹೈ ’ ನುಡಿಸಲಾರಂಭಿಸಿದ್ದ. ವಲಯ, ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗಝಲ್ ಹಾಡಿ ಬಹುಮಾನ ಗೆದ್ದುಕೊಂಡಿದ್ದಾನೆ.
ಈಗಾಗಲೇ ಝೀ ಕನ್ನಡದಿಂದ ನಡೆಯುವ ಹಾಡುವ ರಿಯಾಲಿಟಿ ಶೋ (ಸರಿಗಮಪ ಲಿಟ್ಲ್ ಚಾಂಪ್ಸ್) ಆಡಿಶನ್‌ಗೂ ಆಯ್ಕೆಯಾಗಿರುವ ಈ ಹುಡುಗ ತನ್ನ ಸಾಧನೆಯ ಪಥದಲ್ಲಿ ಇದೇ ರೀತಿ ಪರಿಶ್ರಮದೊಂದಿಗೆ ಮುಂದುವರಿದರೆ ಉಜ್ವಲ ಭವಿಷ್ಯವಿದೆ
Discover more from Coastal Times Kannada
Subscribe to get the latest posts sent to your email.
Discussion about this post