ಮಂಗಳೂರು, ಜೂ.12: ನೆತ್ತಿಲಪದವು ಎಂಬಲ್ಲಿ ಮೆಥಾಂಫೆಟಾಮೈನ್ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕೊಣಾಜೆ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಕೆ.ಸಿ.ರೋಡ್ ನಿವಾಸಿ ಅಬ್ದುರ್ರಶೀದ್(41) ಮತ್ತು ದೇರಳಕಟ್ಟೆಯ ಪಿ.ಆರಿಫ್(40) ಬಂಧಿತ ಆರೋಪಿಗಳು. ಜೂನ್ 11 ರಂದು ನೆತ್ತಿಲಪದವಿನಲ್ಲಿ ಅಕ್ರಮವಾಗಿ ಮೆಥಾಂಫೆಟಾಮೈನ್ ಮಾರಾಟ ಮಾಡಲಾಗುತ್ತಿದೆ ಎಂಬ ದೊರೆತ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸ್ ಪಿಎಸ್‌ಐ ಅಶೋಕ್ ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆಸಿದರು.
ಕಾರ್ಯಾಚರಣೆಯಲ್ಲಿ ಆರೋಪಿಗಳ ಬಳಿಯಿಂದ 20 ಗ್ರಾಮ್ ಮೆಥಾಂಪೆಟಾಮೈನ್ ಡ್ರಗ್ಸ್ ಮತ್ತು ಸುಜುಕಿ ಆ್ಯಕ್ಸೆಸ್ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಮೌಲ್ಯ 106,500 ರೂ. ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್, ಡಿಸಿಪಿಗಳಾದ ಅಂಶು ಕುಮಾರ್ ಮತ್ತು ದಿನೇಶ್ ಕುಮಾರ್, ಎಸಿಪಿ ಪರಮೇಶ್ವರ ಹೆಗಡೆ ನಿರ್ದೇಶನದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ನಾಗರಾಜ್ ಎಸ್. ಮತ್ತು ಪಿಎಸ್ಐ ಅಶೋಕ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ನವೀನ್, ಮಂಜಪ್ಪ, ಶಿವಕುಮಾರ್, ಪುರುಷೋತ್ತಮ, ಚಂದ್ರಕಾಂತ್, ಅನಿಲ್ ಕುಮಾರ್, ಬರಂ ಬಡಿಗೇರ, ಹೇಮಂತ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post