ಉಡುಪಿ ಜು12: ಉಡುಪಿಯಲ್ಲಿ ಗರುಡ ಗ್ಯಾಂಗ್ ಅಟ್ಟಹಾಸ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಬಂಧನವಾಗಿದೆ. ಹೆದ್ದಾರಿಯಲ್ಲಿ ತಲ್ವಾರ್ ಹಿಡಿದು ಅಟ್ಟಹಾಸ ತೋರಿದ್ದಲ್ಲದೇ ಯುವಕನ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದ ಯುವತಿಯೊಬ್ಬಳನ್ನು ಉಡುಪಿ ಪೋಲಿಸರು ಬಂಧಿಸಿದ್ದಾರೆ. ಆರೋಪಿ ಇಸಾಕ್ ಎಂಬ ಯುವಕನ ಗೆಳತಿ, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ಸಫರಾ ಎಚ್ ಅಲಿಯಾಸ್ ಸಾಜಿದಾ (21) ಬಂಧಿತ ಯುವತಿ.
ಬ್ಯಾಂಕ್ ಅಕೌಂಟ್ ಮೂಲಕ ಹಣ ರವಾನೆ ಮಾಡಿರುವ ವಿಚಾರದಲ್ಲಿ ಬಂಧಿಸಲಾಗಿದ್ದು, ಮೊಬೈಲ್ ಫೋನ್ ನೀಡಿ ತಲೆಮರೆಸಿಕೊಳ್ಳಲು ಸಫರಾ ಸಹಾಯ ಮಾಡಿದ್ದಾಳೆ ಎನ್ನಲಾಗಿದೆ. ಉಡುಪಿ ನಗರ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಆರೋಪಿ ಸಫರಾ ಬಂಧಿಸಲಾಗಿದೆ ಎಂದು ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post