ಸುಳ್ಯ: ರಾಷ್ಟ್ರ ಮಟ್ಟದಲ್ಲೇ ಸಂಚಲನ ಸೃಷ್ಟಿಸಿದ್ದ ಬೆಳ್ಳಾರೆಯ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಅರೋಪಿಗಳ ಬಂಧನವಾಗಿದೆ. ಈ ಆರೋಪಿಗಳೊಂದಿಗೆ ಇಂದು ಪೊಲೀಸರು ಸ್ಥಳ ಮಹಜರು ಮಾಡಿದರು. ಹತ್ಯೆಯ ಪ್ರಮುಖ ಆರೋಪಿಗಳಾದ ಶಿಯಾಬ್, ರಿಯಾಜ್, ಬಶೀರ್‌ನನ್ನು ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ಕೊಲೆಯಾದ ಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ. ಗುರುವಾರ ಬಂಧಿತರಾದ ಪ್ರಮುಖ ಆರೋಪಿಗಳಾದ ಶಿಯಾಬುದ್ದೀನ್, ರಿಯಾಝ್ ಹಾಗು ಬಶೀರ್ ಎಂಬುವರನ್ನು ಕರೆತಂದು, ಬೆಳ್ಳಾರೆಯಲ್ಲಿ ಹತ್ಯೆ ನಡೆದ ಸ್ಥಳ ಮತ್ತಿತರ ತನಿಖೆ ಪೂರಕ ಸ್ಥಳಗಳಿಗೆ ಕರೆದೊಯ್ಯಲಾಯಿತು. ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸುಳ್ಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆ.16ರವರೆಗೆ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.
ಪ್ರವೀಣ್ ಅವರ ಬೆಳ್ಳಾರೆ ಸಮೀಪದ ಮಾಸ್ತಿಕಟ್ಟೆಯಲ್ಲಿರುವ ಅಕ್ಷಯ ಚಿಕನ್ ಸೆಂಟರ್ ಮುಂದೆಯೇ ಕೊಲೆ ನಡೆದಿತ್ತು. ಪುತ್ತೂರು ಡಿವೈಎಸ್ಪಿ ಗಾನಾ.ಪಿ ಕುಮಾರ್ ಅವರ ನೇತೃತ್ವದ ಪೋಲಿಸರ ತಂಡದಿಂದ ಸ್ಥಳ ಮಹಜರು ಕಾರ್ಯ ಜರುಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post