ಮುಂಬೈ: ಖ್ಯಾತ ಗಾಯಕಿ ಪಲಕ್ ಮುಚ್ಚಲ್ ಅವರ ಸುಮಧುರ ಕಂಠಕ್ಕೆ ಕೋಟ್ಯಂತರ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಾಲಿವುಡ್‌ನ ಸೂಪರ ಹಿಟ್ ಸಿನಿಮಾ ಆಶಿಕಿ 2 ರ “ತುಮ್ ಹಿ ಹೋ”, ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಅವರ “ಕೌನ್ ತುಜೆ” ಮತ್ತು “ಪ್ರೇಮ್ ರತನ್ ಧನ್ ಪಾಯೋ” ನಂತಹ ಬ್ಲಾಕ್‌ಬಸ್ಟರ್ ಹಿಟ್ ಹಾಡುಗಳ ಮೂಲಕ ಪಲಕ್ ಮುಚ್ಚಲ್ ಎಲ್ಲರ ಮನ ಗೆದ್ದಿದ್ದಾರೆ. ಇದೀಗ ಅವರ ಮತ್ತೊಂದು ಸಾಧನೆ ಮಾಡಿದ್ದು, ಪಲಕ್ ಅವರು 3,800 ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳಿಗೆ ಹಣಕಾಸು ನೆರವು ನೀಡುವ ಮೂಲಕ ಗಿನ್ನಿಸ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಚಿಕ್ಕವಯಸ್ಸಿನಿಂದಲೇ ಸಹಾಯದ ಮನೋಭಾವ ಹೊಂದಿದ್ದ ಗಾಯಕಿ : ಪಲಕ್ ಅವರ ದಾನ ಮಾಡುವ ಈ ಗುಣ ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಗಿತ್ತು ಎನ್ನಲಾಗಿದೆ. ಬಾಲ್ಯದಲ್ಲಿ, ಅವರು ರೈಲು ಪ್ರಯಾಣ ಮಾಡುತ್ತಿದ್ದಾಗ ಕಷ್ಟದಲ್ಲಿ ಇದ್ದ ಮಕ್ಕಳನ್ನ ಭೇಟಿ ಮಾಡಿದ್ದರು. ಆ ಕ್ಷಣ ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಆ ದಿನ ಅವರು ತನಗೆ ತಾನೇ ಒಂದು ಮೌನವಾಗಿ ಪ್ರತಿಜ್ಞೆ ಮಾಡಿಕೊಂಡಿದ್ದರಂತೆ. ನಾನು ಈ ರೀತಿಯ ಜನರಿಗೆ ಒಂದು ದಿನ ಸಹಾಯ ಮಾಡುತ್ತೇನೆ ಎಂದು ನಿರ್ಧಾರ ಮಾಡಿಕೊಂಡಿದ್ದರಂತೆ. ಈ ಒಂದು ಪ್ರತಿಜ್ಞೆಯೆ ಅವರ ಪ್ರತಿಷ್ಠಾನದ ಹಿಂದಿನ ಪ್ರೇರಕ ಶಕ್ತಿಯಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ಅವರು ಪ್ರತಿಯೊಂದು ಸಂಗೀತ ಕಚೇರಿಯ ಗಳಿಕೆ ಮತ್ತು ವೈಯಕ್ತಿಕ ಉಳಿತಾಯವನ್ನು ಜೀವ ಉಳಿಸುವ ವೈದ್ಯಕೀಯ ಸೇವೆಗೆ ನೀಡಲು ಕಾರಣ ಎಂದಿದ್ದಾರೆ. ಇಷ್ಟಕ್ಕೆ ಮಾತ್ರ ಅವರ ಜನಪರ ಕಾರ್ಯಗಳು ಸೀಮಿತವಾಗಿಲ್ಲ. ಕಾರ್ಗಿಲ್ ಹುತಾತ್ಮರ ಕುಟುಂಬಗಳಿಗೆ ಕೂಡ ಅವರು ಸಹಾಯ ಮಾಡಿದ್ದಾರೆ. ಗುಜರಾತ್ ಭೂಕಂಪ ಸಂತ್ರಸ್ತರ ನೆರವಿಗಾಗಿ ಅವರು 10 ಲಕ್ಷ ರೂಪಾಯಿ ನೀಡಿದ್ದರು. ಹಿಂದಿ, ಕನ್ನಡ, ಬೆಂಗಾಲಿ, ತೆಲುಗು, ತಮಿಳು, ಮರಾಠಿ, ಗುಜರಾತಿ ಮುಂತಾದ ಭಾಷೆಗಳ ಚಿತ್ರರಂಗದಲ್ಲಿ ಪಲಕ್ ಮುಚ್ಚಲ್ ಅವರಿಗೆ ಬೇಡಿಕೆ ಇದೆ.
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿಯೂಸ್ಥಾನ ಪಡೆದಿರುವ ಪಲಕ್ : ಇದಲ್ಲದೇ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿಯೂ ದಾಖಲಾಗಿದೆ, ಇದು ಅವರ ವೃತ್ತಿಪರ ಸಾಧನೆಗಳ ಜೊತೆಗೆ ಮಾನವೀಯ ಕಾರ್ಯಗಳಿಗೆ ಅವರ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು. ಅವರ ಪತಿ, ಸಂಗೀತ ಸಂಯೋಜಕ ಮಿಥೂನ್, ಅವರು ಪಾಲಕ್ ಅವರ ಸಾಮಾಜಿಕ ಕಾರ್ಯಗಳಿಗೆ ಬೆನ್ನುಲುಬಾಗಿ ನಿಂತಿದ್ದಾರೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ ಪಲಕ್, ಸಣ್ಣ ವಯಸ್ಸಿನಲ್ಲಿಯೇ ತನ್ನ ಸಂಗೀತ ಪ್ರಯಾಣವನ್ನು ಪ್ರಾರಂಭಿಸಿದರು. ಚಲನಚಿತ್ರಗಳಲ್ಲಿ ಖ್ಯಾತಿಯನ್ನು ಗಳಿಸುವುದರ ಜೊತೆಗೆ, ಅವರು ತಮ್ಮ ದಾನ ಕಾರ್ಯಗಳ ಮೂಲಕ ಸಾವಿರಾರು ಜೀವಗಳನ್ನು ಉಳಿಸಿದ್ದಾರೆ. ಪಲಕ್ ಮುಚ್ಚಲ್ ಹಾರ್ಟ್ ಫೌಂಡೇಶನ್ ಅಗತ್ಯವಿರುವ ಮಕ್ಕಳಿಗೆ 2,200 ಕ್ಕೂ ಹೆಚ್ಚು ಜೀವ ಉಳಿಸುವ ಹೃದಯ ಶಸ್ತ್ರಚಿಕಿತ್ಸೆಗಳಿಗೆ ಹಣಕಾಸು ಸಹಾಯವನ್ನ ಮಾಡುತ್ತದೆ. ಅವರ ಪ್ರತಿಭೆಯನ್ನು ಬದಲಾವಣೆ ತರಲು ಬಳಸಿದ್ದಕ್ಕಾಗಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post