• About us
  • Contact us
  • Disclaimer
Sunday, February 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೇ ನನ್ನ ಮೇಲೆ ಹೆಚ್ಚು ಕೇಸ್ ದಾಖಲಾಗಿದ್ದು – ಪ್ರಮೋದ್ ಮುತಾಲಿಕ್

Coastal Times by Coastal Times
February 13, 2023
in ಕರಾವಳಿ
ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೇ ನನ್ನ ಮೇಲೆ ಹೆಚ್ಚು ಕೇಸ್ ದಾಖಲಾಗಿದ್ದು – ಪ್ರಮೋದ್ ಮುತಾಲಿಕ್
50
VIEWS
WhatsappTelegramShare on FacebookShare on Twitter

ಮಂಗಳೂರು, ಫೆ.12: ನನ್ನ ಮೇಲೆ ಈ ತನಕ 109 ಕೇಸ್ ಹಾಕಲಾಗಿದೆ. ಇದರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೇ ನನ್ನ ಮೇಲೆ ಹೆಚ್ಚು ಕೇಸ್ ದಾಖಲಾಗಿದೆ. ಗಡಿಪಾರು ನಿರ್ಬಂಧನೆ , ಹಿಂದುತ್ವದ ವಿಚಾರದಲ್ಲಿ ನಮ್ಮವರಿಂದಲೇ ಹೆಚ್ಚು ತೊಂದರೆ ಅನುಭವಿಸಿದ್ದೇನೆ ಎಂದು ಶ್ರೀರಾಮ ಸೇನಾ ಕರ್ನಾಟಕ ಇದರ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಕಾರ್ಕಳದಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ, ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಾರ್ಕಳದ ಶಾಸಕರು ಮೊದಲ ಬಾರಿ 2004ರಲ್ಲಿ ಶಾಸಕರಾದ ವೇಳೆ ಎಷ್ಟು ಆಸ್ತಿ ಹೊಂದಿದ್ದರು. ಮೂರನೇ ಬಾರಿ ಗೆದ್ದು ಈಗ ಸಚಿವರಾಗಿರುವ ಅವರ ಬಳಿ ಎಷ್ಟು ಆಸ್ತಿ ಇದೆಯೆಂದು ಲೆಕ್ಕ ಹಾಕಿ. ಇವರ ಭ್ರಷ್ಟಾಚಾರಕ್ಕೆ ಬೇರೆ ದಾಖಲೆ ಬೇಕಿಲ್ಲ. ಮೂರು ಬಾರಿ ಶಾಸಕರಾಗಿ ಎಷ್ಟು ಲೂಟಿ ಹೊಡೆದಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಹೇಳುತ್ತದೆ. ಹಿಂದುತ್ವ, ಪ್ರಾಮಾಣಿಕತೆಗೆ ಅಲ್ಲಿ ಗೆಲುವಾಗುತ್ತದೆ. ಇವರನ್ನು ಸೋಲಿಸಬೇಕೆಂದು ಹಲವರು ಮುಂದೆ ಬಂದಿದ್ದಾರೆ. ಇಲ್ಲಿ ವರೆಗೂ ಯಾವುದೇ ರೀತಿಯ ಸಹಾಯ ಪಡೆದಿಲ್ಲ. ಯಾವ ರೂಪದಲ್ಲಿ ಸಹಾಯ ಮಾಡುತ್ತಾರೆಂದು ನೋಡುತ್ತೇನೆ ಎಂದು ಹೇಳಿದ್ದಾರೆ.

ನನಗೆ ರಾಜಕೀಯ ಗೊತ್ತಿಲ್ಲ. ಪ್ರಾಮಾಣಿಕತೆ ಮತ್ತು ನೇರ ಮಾತು ಇದೇ ನನಗೆ ಮುಳ್ಳಾಯಿತು. ನಾನು ಕೂಡಾ ಬಕೆಟ್ ಹಿಡಿದಿದ್ದರೆ, ಅವರ ಬಾಲ ಹಿಡಿಕೊಂಡಿದ್ದರೆ, ಬಿಜೆಪಿಯವರ ಡೋಂಗಿ ಹಿಂದುತ್ವ, ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದರೆ ಎಲ್ಲೊ ಇರುತ್ತಿದ್ದೆ ಎಂದು ಅಭಿಪ್ರಾಯಪಟ್ಟರು.

ಧಾರ್ಮಿಕ ದತ್ತಿ ಇಲಾಖೆಯಡಿ ರಾಜ್ಯದಲ್ಲಿ 34500 ದೇವಸ್ಥಾನಗಳು ಇವೆ. ಆ ಪೈಕಿ 325 ದೇವಸ್ಥಾನಗಳು ಎ ಕೆಟಗರಿಯಲ್ಲಿದ್ದು 25 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುತ್ತಿವೆ. ಕುಕ್ಕೆಯಲ್ಲಿ 100 ಕೋಟಿ, ಕೊಲ್ಲೂರಿನಲ್ಲಿ 50 ಕೋಟಿ, ಮೈಸೂರು ಚಾಮುಂಡೇಶ್ವರಿಯಲ್ಲಿ 50 ಕೋಟಿಗೂ ಹೆಚ್ಚು ಆದಾಯ ಬರುತ್ತದೆ. ವಾರ್ಷಿಕ 1500 ಕೋಟಿ ಆದಾಯ ಇದೆ. ಆದರೆ ಈ ಹಣವನ್ನು ಇವರು ಏನು ಮಾಡುತ್ತಾರೆಂದು ಯಾರಿಗೂ ಗೊತ್ತಿಲ್ಲ. ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಗೋಶಾಲೆ ಮಾಡಬೇಕೆಂಬ ನಿಯಮ ಇದ್ದರೂ, ಅದನ್ನು ಮಾಡಿಲ್ಲ. ಈ ಹಣವನ್ನು ದುರುಪಯೋಗ ಮಾಡಿದ್ದೇ ಹೆಚ್ಚು ಎಂದು ಹೇಳಿದರು.

ವ್ಯಾಲೆಂಟೈನ್ಸ್ ಡೇ ಬಗ್ಗೆ ಕೇಳಿದ ಪ್ರಶ್ನೆಗೆ, ವ್ಯಾಲೆಂಟೈನ್ಸ್ ಡೇಯನ್ನು ಈ ಬಾರಿಯೂ ವಿರೋಧವಿದೆ. ಪೊಲೀಸರ ಜತೆ ಸೇರಿ ಕಾನೂನು ಬದ್ದವಾಗಿ ತಡಯುತ್ತೇವೆ. ಪ್ರೇಮಿಗಳ ದಿನ ಆಚರಣೆ ನೆಪದಲ್ಲಿ ಅನೈತಿಕತೆ, ಡ್ರಗ್ಸ್ ಮಾಫಿಯಾ ಸೆಕ್ಸ್ ಮಾಫಿಯಾಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುತಾಲಿಕ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನಾ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಮಂಗಳೂರು ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು ಉಪಸ್ಥಿತರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಬಾವಿಗೆ ಬಿದ್ದ ಚಿರತೆಯನ್ನು ಬಾವಿಗಿಳಿದು ರಕ್ಷಣೆ ಮಾಡಿದ ಪಶುವೈದ್ಯೆ – ಡಾ. ಮೇಘನಾ

Next Post

ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟೆಯವರ ಪತಿ ಜಾಫರ್ ಫೀರ್ಜಾದೆ ಆತ್ಮಹತ್ಯೆ

Related Posts

ಮಂಗಳೂರು: ಎಂ ಎಸ್ ಈ ಝೆಡ್ ಕೈಗಾರಿಕಾ ಪ್ರದೇಶದಲ್ಲಿ ಇಟಲಿಯ ಎಂಐಆರ್ ಗ್ರೂಪ್‌ನ ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ
ಕರಾವಳಿ

ಮಂಗಳೂರು: ಎಂ ಎಸ್ ಈ ಝೆಡ್ ಕೈಗಾರಿಕಾ ಪ್ರದೇಶದಲ್ಲಿ ಇಟಲಿಯ ಎಂಐಆರ್ ಗ್ರೂಪ್‌ನ ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ

February 21, 2026
19
ಮಂಗಳೂರು: ಫೆ. 24ರಂದು ‘ಸಹಕಾರ ರತ್ನ” ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ
ಕರಾವಳಿ

ಮಂಗಳೂರು: ಫೆ. 24ರಂದು ‘ಸಹಕಾರ ರತ್ನ” ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

February 21, 2026
9
Next Post
ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟೆಯವರ ಪತಿ ಜಾಫರ್ ಫೀರ್ಜಾದೆ ಆತ್ಮಹತ್ಯೆ

ಕೆಎಎಸ್ ಅಧಿಕಾರಿ ರೇಷ್ಮಾ ತಾಳಿಕೋಟೆಯವರ ಪತಿ ಜಾಫರ್ ಫೀರ್ಜಾದೆ ಆತ್ಮಹತ್ಯೆ

Discussion about this post

Recent News

ಫೆ.27: “ಬಿರ್ದ್ ದ ಕಂಬುಲ” ಹಾಗೂ “ವೀರಕಂಬಳ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಫೆ.27: “ಬಿರ್ದ್ ದ ಕಂಬುಲ” ಹಾಗೂ “ವೀರಕಂಬಳ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

February 22, 2026
6
ಮಂಗಳೂರು: ಎಂ ಎಸ್ ಈ ಝೆಡ್ ಕೈಗಾರಿಕಾ ಪ್ರದೇಶದಲ್ಲಿ ಇಟಲಿಯ ಎಂಐಆರ್ ಗ್ರೂಪ್‌ನ ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ

ಮಂಗಳೂರು: ಎಂ ಎಸ್ ಈ ಝೆಡ್ ಕೈಗಾರಿಕಾ ಪ್ರದೇಶದಲ್ಲಿ ಇಟಲಿಯ ಎಂಐಆರ್ ಗ್ರೂಪ್‌ನ ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ

February 21, 2026
19
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಫೆ.27: “ಬಿರ್ದ್ ದ ಕಂಬುಲ” ಹಾಗೂ “ವೀರಕಂಬಳ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಫೆ.27: “ಬಿರ್ದ್ ದ ಕಂಬುಲ” ಹಾಗೂ “ವೀರಕಂಬಳ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

February 22, 2026
ಮಂಗಳೂರು: ಎಂ ಎಸ್ ಈ ಝೆಡ್ ಕೈಗಾರಿಕಾ ಪ್ರದೇಶದಲ್ಲಿ ಇಟಲಿಯ ಎಂಐಆರ್ ಗ್ರೂಪ್‌ನ ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ

ಮಂಗಳೂರು: ಎಂ ಎಸ್ ಈ ಝೆಡ್ ಕೈಗಾರಿಕಾ ಪ್ರದೇಶದಲ್ಲಿ ಇಟಲಿಯ ಎಂಐಆರ್ ಗ್ರೂಪ್‌ನ ಉತ್ಪಾದನಾ ಘಟಕಕ್ಕೆ ಭೂಮಿ ಪೂಜೆ

February 21, 2026
ಭಾರತ ಸೇರಿದಂತೆ ಅನೇಕ ದೇಶಗಳ ಮೇಲೆ ಟ್ರಂಪ್​ ಜಾರಿಗೆ ತಂದಿದ್ದ ಸುಂಕಗಳನ್ನು ರದ್ದುಗೊಳಿಸಿದ ಅಮೆರಿಕದ ಸುಪ್ರೀಂಕೋರ್ಟ್

ಭಾರತ ಸೇರಿದಂತೆ ಅನೇಕ ದೇಶಗಳ ಮೇಲೆ ಟ್ರಂಪ್​ ಜಾರಿಗೆ ತಂದಿದ್ದ ಸುಂಕಗಳನ್ನು ರದ್ದುಗೊಳಿಸಿದ ಅಮೆರಿಕದ ಸುಪ್ರೀಂಕೋರ್ಟ್

February 21, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d