ಬೆಂಗಳೂರು: ತನ್ನ ಪಾಡಿಗೇ ವಿಡಿಯೋ ವ್ಲಾಗ್ ಮಾಡುತ್ತಿದ್ದ ವಿದೇಶಿ ಯೂಟ್ಯೂಬರ್ ಗೆ ಸ್ಥಳೀಯ ವ್ಯಾಪಾರಿಯೊಬ್ಬರು ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಸಂಡೇ ಬಜಾರ್ ನಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಬೆಂಗಳೂರು ನಗರದ ಚಿಕ್ಕಪಟೇಟೆಯಲ್ಲಿ ವ್ಯಾಪ್ತಿಯಲ್ಲಿ ನಡೆಯುವ ಸಂಡೇಬಜಾರ್ ನಲ್ಲಿ ಈ ಘಟನೆ ನಡೆದಿದ್ದು, ವಿದೇಶಿ ಯೂಟ್ಯೂಬರ್ ಮೇಲೆ ವ್ಯಾಪಾರಿಯೊಬ್ಬರು ಹಲ್ಲೆ ಯತ್ನ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ವೈರಲ್ ವಿಡಿಯೋದಲ್ಲಿ ಉತ್ಸಾಹದಿಂದಲೇ ನೆದರ್ಲ್ಯಾಂಡ್ನ ಪೆಡ್ರೋ ಮೊಟಾ ಎಂಬ ವ್ಯಕ್ತಿ ವಿಡಿಯೋ ಮಾಡುತ್ತಿದ್ದ. ಈ ವೇಳೆ ತಾನ್ನು ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ತಾನು ಏನಾದರೂ ಖರೀದಿ ಮಾಡಿಯೇ ತೀರುತ್ತೇನೆ ಎಂದು ಹೇಳುವಾಗಲೇ ಸ್ಥಳೀಯ ವ್ಯಾಪಾರಿಯೋರ್ವ ಆತನ ಕೈ ಹಿಡಿದು ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಅಗ್ರಹಿಸಿದ್ದಾನೆ.
ಆದರೆ ಆತನ ಮಾತು ಅರ್ಥವಾಗದ ವಿದೇಶಿ ಯೂಟ್ಯೂಬರ್ ಅಲ್ಲಿಂದ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾನೆ. ಆದರೂ ಆತನನ್ನು ಆ ವ್ಯಾಪಾರಿ ಮತ್ತು ಇತರರು ಅಟ್ಟಾಡಿಸಿದ್ದಾರೆ. ಆದರೆ ಕೆಲವೇ ಕ್ಷಣಗಳ ಅಂತರದಲ್ಲಿ ವಿದೇಶಿ ಯೂಟ್ಯೂಬರ್ ಪಾರಾಗಿದ್ದಾನೆ. ಈ ಕೃತ್ಯಕ್ಕೆ ಭಾರೀ ಖಂಡನೆ ವ್ಯಕ್ತವಾಗುತ್ತಿದ್ದು, ಪಶ್ಚಿಮ ವಿಭಾಗದ ಡಿಸಿಪಿ ಗಮನಕ್ಕೂ ತರಲಾಗಿದೆ.
ಪೂರ್ಣ ವಿಡಿಯೊವನ್ನು ಯುಟ್ಯೂಬ್ ನಲ್ಲಿ ಮ್ಯಾಡ್ಲಿ ರೋವರ್ ಹಂಚಿಕೊಂಡಿದ್ದು ಇಂಡಿಯಾದ ಕಳ್ಳರ ಮಾರುಕಟ್ಟೆಯಲ್ಲಿ ನನ್ನ ಮೇಲೆ ಹಲ್ಲೆಯಾಗಿದೆ ಎಂದಷ್ಟೇ ಅವರು 18.14 ನಿಮಿಷದ ವಿಡಿಯೊ ಹಂಚಿಕೊಂಡಿದ್ದಾರೆ. ಇದೇ ವಿಡಿಯೊದಲ್ಲಿ ಮುಸ್ಲಿಂ ವ್ಯಾಪಾರಿಯಿಂದಾದ ಹಲ್ಲೆ ಹಾಗೂ ಹಿಂದೂಗಳೆಂದು ಹೇಳಲಾದ ವ್ಯಕ್ತಿಗಳು ದಾರಿ ತೋರಿಸುತ್ತಿರುವ ದೃಶ್ಯಗಳನ್ನು ಎಡಿಟ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡಲಾಗುತ್ತಿದೆ.
ಇನ್ನೂ ಹಲವರು ಈ ವಿಡಿಯೊ ಹಂಚಿಕೊಂಡು ಬೆಂಗಳೂರು ಪೊಲೀಸರು ಮ್ಯಾಡ್ಲಿ ರೋವರ್‌ಗೆ ಸೂಕ್ತ ರಕ್ಷಣೆ ನೀಡಿ, ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ. ಆ ಮೂಲಕ ವಿದೇಶಿ ಪ್ರಜೆಗಳಿಗೆ ಭದ್ರತೆ ಭಾವ ಮೂಡಿಸಿ ಎಂದು ಹೇಳಿದ್ದಾರೆ. ಹಲ್ಲೆ ಆರೋಪದಡಿ ಬಟ್ಟೆ ವ್ಯಾಪಾರಿ ನವಾಬ್‌ನನ್ನು (58) ಕಾಟನ್‌ಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ಆರೋಪಿ ನವಾಬ್, ಹಳೇ ಗುಡ್ಡದಹಳ್ಳಿ ನಿವಾಸಿ. ವೃತ್ತಿಯಲ್ಲಿ ಆಟೊ ಚಾಲಕ. ಪ್ರತಿ ಭಾನುವಾರ ಚಿಕ್ಕಪೇಟೆಯ ಮಾರುಕಟ್ಟೆಯಲ್ಲಿ ಹಳೇ ಬಟ್ಟೆ ಮಾರಾಟ ಮಾಡುತ್ತಿದ್ದ. ವಿದೇಶಿ ಪ್ರಜೆ ಮೇಲೆ ಹಲ್ಲೆ ನಡೆಸಿದ್ದ ವಿಡಿಯೊ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.
@BlrCityPolice Dutch tourist/Youtuber attacked in Chicpet, Bengaluru without any reason.https://t.co/DzofarcZT0 pic.twitter.com/EaablNuzoU
— Jaspal Singh (@jaspal811982) June 11, 2023
Discover more from Coastal Times Kannada
Subscribe to get the latest posts sent to your email.
Discussion about this post