• About us
  • Contact us
  • Disclaimer
Saturday, March 21, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ತಯಾರಿಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ಕೊಡಿಸುತ್ತಿದ್ದ ಗ್ಯಾಂಗ್ ಬಂಧನ

Coastal Times by Coastal Times
September 13, 2025
in ಕ್ರೈಮ್ ನ್ಯೂಸ್
ಮಂಗಳೂರು: ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ತಯಾರಿಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ಕೊಡಿಸುತ್ತಿದ್ದ ಗ್ಯಾಂಗ್ ಬಂಧನ
95
VIEWS
WhatsappTelegramShare on FacebookShare on Twitter

ಮಂಗಳೂರು: ನಕಲಿ ದಾಖಲೆಗಳ ಆಧಾರದ ಮೇಲೆ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಜಾಮೀನು ಕೊಡಿಸುತ್ತಿದ್ದ ಸಂಘಟಿತ ವಂಚನಾ ಜಾಲವೊಂದು ಸಿಸಿಬಿ (ಸಿಸಿಟಿ ಕ್ರೈಂ ಬ್ರಾಂಚ್) ಪೊಲೀಸರು ಕಾರ್ಯಾಚರಣೆಯಲ್ಲಿ ಬಯಲಾಗಿದ್ದು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಕೆಲವರು ನಕಲಿ ಆಧಾರ್ ಕಾರ್ಡ್ ಹಾಗೂ ಪಹಣಿ ಪತ್ರಗಳನ್ನು ತಯಾರಿಸಿ, ನೈಜ ದಾಖಲೆಗಳೆಂದು ನಂಬಿಸಿ ನ್ಯಾಯಾಲಯಗಳ ಮುಂದೆ ಜಾಮೀನುದಾರರಾಗಿ ಹಾಜರಾಗಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದರು ಎಂಬ ಮಾಹಿತಿ ಸೆ.9 ರಂದು ಸಿಸಿಬಿ ಪೊಲೀಸರಿಗೆ ಬಂದಿತ್ತು. ಈ ಕುರಿತು ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಬ್ದುಲ್ ರೆಹಮಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವನು ನಕಲಿ ದಾಖಲೆಗಳನ್ನು ಬಳಸಿ ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ನೀಡಲು ಸಹಾಯ ಮಾಡಿದ್ದ ವಿಚಾರವು ದೃಢಪಟ್ಟಿದೆ. ಈ ಪ್ರಕರಣದ ಅನ್ವಯ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 81/2025ರಲ್ಲಿ ವಿವಿಧ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಅಬ್ದುಲ್ ರೆಹಮಾನ್ ನೀಡಿದ ಮಾಹಿತಿಯಂತೆ, ನಕಲಿ ದಾಖಲೆ ತಯಾರಿಕೆಯಲ್ಲಿ ಸಹಕರಿಸುತ್ತಿದ್ದ ನಿಶಾಂತ್ ಕುಮಾರ್ ಎಂಬಾತನನ್ನು ಸಹ ಪೊಲೀಸರು ಬಂಧಿಸಿ ಕಸ್ಟಡಿಗೆ ಪಡೆದಿದ್ದಾರೆ.

ಇಬ್ಬರೂ ಆರೋಪಿಗಳು ನಕಲಿ ಆಧಾರ್ ಕಾರ್ಡ್‌ನಲ್ಲಿ ತಮ್ಮ ಫೋಟೋಗಳನ್ನು ಬಳಸಿ ಅಸಲಿ ವ್ಯಕ್ತಿಗಳಂತೆ ನ್ಯಾಯಾಲಯದ ಮುಂದೆ ಹಾಜರಾಗಿ, ಎರಡು ಪ್ರಮುಖ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಜಾಮೀನು ಕೊಡಿಸಿದ್ದನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆಯಲ್ಲಿ ಮತ್ತಿಬ್ಬರು ಪ್ರಮುಖ ಆರೋಪಿಗಳು ಪತ್ತೆಯಾಗಿದ್ದಾರೆ.

ಬಂಧಿತ ಆರೋಪಿಗಳ ವಿವರ: ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಬ್ದುಲ್ ರೆಹಮಾನ್ (46), ನಿಶಾಂತ್ ಕುಮಾರ್ (28), ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿತಿನ್ ಕುಮಾರ್ (31), ಹಸನ್ ರಿಯಾಝ್ (46), ಮಹಮ್ಮದ್ ಹನೀಫ್ (39) ಬಂಧಿತರು.

ಇವರಲ್ಲಿ ನಿತಿನ್ ಕುಮಾರ್ ಎಂಬಾತ ಗಣೇಶ್ ಕೆ. ಸಾಲ್ಯಾನ್ ಎಂಬ ನಕಲಿ ಹೆಸರಿನಲ್ಲಿ, ಹಸನ್ ರಿಯಾಝ್ ಎ.ಎಂ. ಎಂಬಾತ ಹಮೀದ್ ಎಂಬ ಹೆಸರಿನಲ್ಲಿ ಜಾಮೀನು ನೀಡಿದ್ದರೆ, ಹನೀಫ್ ಸಹ ನಕಲಿ ದಾಖಲೆಗಳ ಸಹಾಯದಿಂದ ನ್ಯಾಯಾಲಯದಲ್ಲಿ ವಂಚನೆ ನಡೆಸಿದ್ದನು. ಈ ವಂಚನಾ ಜಾಲದಲ್ಲಿ ಇನ್ನೂ ಹಲವಾರು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.

ಈ ಮಹತ್ವದ ಕಾರ್ಯಾಚರಣೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ, ಉಪ ಆಯುಕ್ತರು (ಕಾನೂನು ಹಾಗೂ ಸುವ್ಯವಸ್ಥೆ) ಮಿಥುನ್ ಹೆಚ್.ಎನ್ ಹಾಗೂ ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ) ಕೆ. ರವಿಶಂಕರ್, ಕೆಎಸ್‌ಪಿಎಸ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಉಳ್ಳಾಲ: ಮಗುವಿನ ಕುತ್ತಿಗೆಯಿಂದ ಸರ ಕಳ್ಳತನ ಮಾಡಿದ್ದ ಮಹಿಳೆ ಬಂಧನ

Next Post

ಕುಂದಾಪುರ ; ಚಲಿಸುತ್ತಿದ್ದ ಬೈಕ್ ಮೇಲೆ ಹಾರಿದ ಕಡವೆ ; 22 ವರ್ಷದ ಯುವಕ ಬಲಿ

Related Posts

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ
ಕ್ರೈಮ್ ನ್ಯೂಸ್

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ

March 21, 2026
14
ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು
ಕ್ರೈಮ್ ನ್ಯೂಸ್

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

March 19, 2026
31
Next Post
ಕುಂದಾಪುರ ; ಚಲಿಸುತ್ತಿದ್ದ ಬೈಕ್ ಮೇಲೆ ಹಾರಿದ ಕಡವೆ ; 22 ವರ್ಷದ ಯುವಕ ಬಲಿ

ಕುಂದಾಪುರ ; ಚಲಿಸುತ್ತಿದ್ದ ಬೈಕ್ ಮೇಲೆ ಹಾರಿದ ಕಡವೆ ; 22 ವರ್ಷದ ಯುವಕ ಬಲಿ

Discussion about this post

Recent News

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ

March 21, 2026
14
ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

March 19, 2026
31
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ

ಕೋರ್ಟಿಗೆ ವಂಚಿಸಿ ತಲೆಮರೆಸಿಕೊಂಡಿದ್ದ ನಟೋರಿಯಸ್ ಕ್ರಿಮಿನಲ್ ಉಳ್ಳಾಲದ ರೌಡಿಶೀಟರ್ ಸಿಸಿಬಿ ಪೊಲೀಸರ ಬಲೆಗೆ

March 21, 2026
ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

March 19, 2026
ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

March 19, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d