ಉಡುಪಿ, ಡಿ.13: ಉಡುಪಿ ಮೂಲದ ಮಧುಮೇಹ ತಜ್ಞೆ ಡಾ.ಶ್ರುತಿ ಬಳ್ಳಾಲ್ ಅವರು ಫಿಲಿಪೈನ್ಸ್ ನಲ್ಲಿ ನಡೆದ ಗ್ರಾಂಡ್ ಫೆಸ್ಟಿವಲ್ ನಲ್ಲಿ ಮಿಸೆಸ್ ಅರ್ಥ್ ಇಂಟರ್ನ್ಯಾಶನಲ್ ಟೂರಿಸಂ-2024 ಆಗಿ ಆಯ್ಕೆಯಾಗಿದ್ದಾರೆ.
ಮಣಿಲಾದಲ್ಲಿ ನಡೆದ ಹತ್ತು ದಿನಗಳ ಕಾರ್ಯಕ್ರಮದಲ್ಲಿ ಶ್ರುತಿ ಬಳ್ಳಾಲ್ ಅವರು ಭಾರತೀಯ ನಾರಿಯರ ಪರವಾಗಿ ಪಾಲ್ಗೊಂಡಿದ್ದರು. ಭಾರತದ ಮಹಿಳೆಯರು ಮತ್ತು ಭೂಮಿಯ ಜೊತೆಗಿನ ಸಂಬಂಧ ಕುರಿತಾಗಿ ಶ್ರುತಿ ಬಳ್ಳಾಲ್ ಉಪನ್ಯಾಸ ನೀಡಿ ಗಮನಸೆಳೆದಿದ್ದಾರೆ. ಶ್ರುತಿ ಬಳ್ಳಾಲ್ ಅವರನ್ನು ಅರ್ಥ್ ಇಂಟರ್ನ್ಯಾಶನಲ್ ಟೂರಿಸಂ-2024 ಇದರ ಅಂಬಾಸಿಡರ್ ಆಗಿಯೂ ಆಯ್ಕೆ ಮಾಡಲಾಗಿದೆ.
10-ದಿನದ ಈವೆಂಟ್ ಅವರ ಬುದ್ಧಿವಂತಿಕೆ, ಪರಿಸರದ ಬಗೆಗಿನ ಸಹಾನುಭೂತಿ ಕಾರಣಗಳಿಗಾಗಿ ಗುರುತಿಸಿದೆ. ಇದು ಭಾರತೀಯ ಮಹಿಳಾ ಸಬಲೀಕರಣಕ್ಕೆ ಮಹತ್ವದ ಮೈಲಿಗಲ್ಲು. ಡಾ. ಬಲ್ಲಾಳ್ ಅವರು ತಮ್ಮ ವೃತ್ತಿಜೀವನದಲ್ಲಿ ಮಧುಮೇಹ ತಜ್ಞರಾಗಿದ್ದಾರೆ. ಇವರು 100 ಕ್ಕೂ ಹೆಚ್ಚು ಉಚಿತ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.
ಶ್ರುತಿ ಬಳ್ಳಾಲ್ ಅವರು ಮಧುಮೇಹ ರೋಗದ ಬಗ್ಗೆ ಜಾಗೃತಿ ಮೂಡಿಸುವುದು, ಶೀಘ್ರದಲ್ಲಿ ಪತ್ತೆ ಹಚ್ಚುವುದು ಸೇರಿದಂತೆ ರೋಗ ಬರದಂತೆ ತಡೆಯುವುದಕ್ಕಾಗಿ ನೂರಕ್ಕೂ ಹೆಚ್ಚು ಮಾಹಿತಿ ಶಿಬಿರಗಳನ್ನು ಆಯೋಜಿಸಿದ್ದಾರೆ. ಸಾಂಪ್ರದಾಯಿಕ, ಆರೋಗ್ಯಕರ ಸ್ಥಳೀಯ ಆಹಾರ ಮಾದರಿಗಳಿಂದ ಮತ್ತು ಉತ್ತಮ ಆರೋಗ್ಯ ಶೈಲಿಯಿಂದ ಮಧುಮೇಹ ತಡೆಗಟ್ಟಬಹುದು ಎಂಬುದನ್ನು ಹೇಳುತ್ತಿದ್ದಾರೆ. ಯೋಗ, ವ್ಯಾಯಾಮ, ಇನ್ನಿತರ ದೈಹಿಕ ಚಟುವಟಿಕೆಯಿಂದ ಹಾಗೂ ಪ್ರಕೃತಿ ಜೊತೆಗಿನ ಆರೋಗ್ಯ ಶೈಲಿಯಿಂದ ರೋಗದಿಂದ ದೂರವಿರಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post