ಮುಂಬೈ: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರದಲ್ಲಿ ಲೀಲಾ ಪಾತ್ರವನ್ನು ನಿರ್ವಹಿಸಿದ್ದ ಸಪ್ತಮಿ ಗೌಡ ಅವರು ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಕಾಶ್ಮೀರ ಫೈಲ್ಸ್ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ದಿ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಸಪ್ತಮಿ ನಟಿಸಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಕಾಂತಾರ ಬೆಡಗಿ ಸೇರ್ಪಡೆ ಹೊಸ ಸುದ್ದಿಯಾಗಿದೆ.
ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕರ ಮುಂದಿನ ಚಿತ್ರದಲ್ಲಿ ಕೆಲಸ ಮಾಡುವ ಕುರಿತು ಮಾತನಾಡಿದ ಸಪ್ತಮಿ, ‘ಮೊದಲಿಗೆ, ಕಾಶ್ಮೀರ್ ಫೈಲ್ಸ್ ಸಿನಿಮಾ ಎಷ್ಟು ದೊಡ್ಡದಾಗಿದೆ ಎಂಬುದು ನಮಗೆ ತಿಳಿದಿದೆ. ವಿವೇಕ್ ಅಗ್ನಿಹೋತ್ರಿ ಸರ್ ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇದು ಹೊಸ ಭಾಷೆ, ಹೊಸ ಉದ್ಯಮ, ಮತ್ತು ಹಲವು ಅಂಶಗಳನ್ನು ಕಲಿತುಕೊಳ್ಳುವ ಅಗತ್ಯವಿರುತ್ತದೆ ಎಂಬುದು ನನಗೆ ಖಚಿತವಾಗಿದೆ. ಚಿತ್ರದ ಭಾಗವಾಗುವುದು ಮತ್ತು ದೊಡ್ಡ ತಾರೆಯರೊಂದಿಗೆ ನಟಿಸುವುದು ಸೇರಿದಂತೆ ಬಹುಭಾಷಾ ಚಿತ್ರದಲ್ಲಿ ಅನ್ವೇಷಿಸಲು ಸಾಕಷ್ಟು ಹೊಸ ಮಾರ್ಗಗಳಿವೆ’ ಎಂದರು. ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದ್ದು, ಜ. 14 ರಂದು ಸಪ್ತಮಿ ಹೈದರಾಬಾದ್ ಶೆಡ್ಯೂಲ್‌ಗೆ ಸೇರಿಕೊಳ್ಳಲಿದ್ದಾರೆ.
‘ದಿ ವ್ಯಾಕ್ಸಿನ್ ವಾರ್’ಚಿತ್ರವು ಕೋವಿಡ್ ಲಸಿಕೆ ಕಂಡುಹಿಡಿಯಲು ಎರಡು ವರ್ಷಗಳ ಕಾಲ ಹಗಲು ರಾತ್ರಿ ದುಡಿದ ಭಾರತೀಯ ವಿಜ್ಞಾನಿಗಳು ಮತ್ತು ಸಿಬ್ಬಂದಿಯ ಕಥಾಹಂದರವನ್ನು ಒಳಗೊಂಡಿದೆ. ವಿವೇಕ್ ಅಗ್ನಿಹೋತ್ರಿ ಅವರ ಪತ್ನಿ, ನಟಿ ಪಲ್ಲವಿ ಜೋಶಿ ಅವರ ‘ಐ ಆ್ಯಮ್ ಬುದ್ಧ ಪ್ರೊಡಕ್ಷನ್ಸ್ ಮತ್ತು ಅಭಿಷೇಕ್ ಅಗರ್‌ವಾಲ್ ಅವರ ‘ಅಭಿಷೇಕ್ ಅಗರ್‌ವಾಲ್ ಆರ್ಟ್ಸ್’ನಿಂದ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಆಗಸ್ಟ್ 15,2023 ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಚಿತ್ರವನ್ನು ಥಿಯೇಟರ್‌ಗಳಿಗೆ ತರಲು ನಿರ್ಮಾಪಕರು ನಿರ್ಧರಿಸಿದ್ದಾರೆ. 11 ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
I’m glad and excited to be a part of this project !
Thank you @vivekagnihotri sir for this opportunity 🙏🏻— Sapthami Gowda (@gowda_sapthami) January 13, 2023
Discover more from Coastal Times Kannada
Subscribe to get the latest posts sent to your email.








Discussion about this post