ಮಂಗಳೂರು ಸೆ. 13, 2025 – ಕೆಎಂಸಿ ಆಸ್ಪತ್ರೆಯ ಗ್ಯಾಸ್ಟ್ರೊಎಂಟರಾಲಾಜಿ ಸೇವೆಗೆ 25 ವರ್ಷ ಸಂದಿದೆ. ಈ ಮಹತ್ವದ ಘಟ್ಟವು ಆಸ್ಪತ್ರೆಯ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಸಹಾನುಭೂತಿಯ ರೋಗಿಯ ಆರೈಕೆಯನ್ನು ಸೂಚಿಸುತ್ತದೆ, 2000ನೇ ಇಸವಿಯಲ್ಲಿ ಆರಂಭವಾದ ಈ ಸೇವೆಯು ಸುಧಾರಿತ ಡೈಯಾಗ್ನೊಸ್ಟಿಕ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಚಿಕಿತ್ಸಕ ಸೇವೆಗಳನ್ನು ನೀಡುವ ಮೂಲಕ ಈಗ ಪ್ರಾದೇಶಿಕ ನಾಯಕನಾಗಿ ಬೆಳೆದು ನಿಂತಿದೆ.
ಈ ಕುರಿತು ಮಾತನಾಡಿದ ಗ್ಯಾಸ್ಟ್ರೊಎಂಟರಾಲಾಜಿ ವಿಭಾಗದ ಮುಖ್ಯಸ್ಥ ಡಾ. ಬಿ ವಿ ತಂತ್ರಿ “ ಕಳೆದ 25 ವರ್ಷಗಳಿಂದ ನಮ್ಮ ವಿಭಾಗವು ಇಆರ್‍ಸಿಪಿ (ERCP), ಮತ್ತು ಇಯುಎಸ್ (EUS) ನಂತಹ ಸುಧಾರಿತ ಎಂಡೊಸ್ಕೊಪಿಕ್ ಕಾರ್ಯವಿಧಾನಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ಇದು ಕಾಂಪ್ಲೆಕ್ಸ್ ಬಿಲಿಯರಿ ( complex biliary ) ಮತ್ತು ಪ್ಯಾನ್‌ಕ್ರಿಯಾಟಿಕ್ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಮಹತ್ವದ ಫಲಿತಾಂಶವನ್ನು ದಾಖಲಿಸಲು ನೆರವಾಗಿದೆ. ನಮ್ಮ ಆಸ್ಪತ್ರೆಗೆ ಬರುವ ರೋಗಿಗಳು ಉತ್ತಮ ಆರೈಕೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ” ಎಂದರು.
ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡಿದ ಕನ್ಸಲ್ಟೆಂಟ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಡಾ. ಸಂದೀಪ್ ಗೋಪಾಲ್ “ ಮಕ್ಕಳು, ಯುವಜನತೆ ಹಾಗೂ ಮಹಿಳೆಯರಲ್ಲಿ ಐಬಿಡಿ ಎಂದು ಕರೆಯಲ್ಪಡುವ ಇನ್‌ಫ್ಲಾಮೆಟರಿ ಬೌವಲ್ ಡಿಸೀಸ್( ಜೀರ್ಣಾಂಗದ ಕ್ಯಾನ್ಸರ್), ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್(ಎನ್‌ಎಎಫ್‌ಎಲ್‌ಡಿ) ಮತ್ತು ಲಿವರ್ ಸಿರೊಸಿಸ್ ಸಮಸ್ಯೆ ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಂಡುಬರುತ್ತಿದೆ. ಇವು ಸಾಮಾನ್ಯವಾಗಿ ಬೊಜ್ಜು ಮತ್ತು ಕಳಪೆ ಆಹಾರ ಪದ್ದತಿಗೆ ಸಂಬಂಧಿಸಿದ್ದಾಗಿರುತ್ತದೆ. ಇಂತಹ ಪ್ರಕರಣಗಳನ್ನು ಶೀಘ್ರ ಚಿಕಿತ್ಸೆಗೆ ಒಳಪಡಿಸಿ ದೀರ್ಘ ಕಾಲದ ಲಿವರ್ ಹಾನಿಗೆ ಒಳಗಾಗದಂತೆ ತಡೆಯುವುದು ಮುಖ್ಯವಾಗುತ್ತದೆ” ಎಂದರು.
ಇನ್ನು ಚಿಕಿತ್ಸೆಗೆ ಲಭ್ಯವಿರುವ ಸಮಗ್ರ ಸೌಲಭ್ಯಗಳ ಕುರಿತು ಮಾತನಾಡಿದ ಕನ್ಸಲ್ಟೆಂಟ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಡಾ. ಅನುರಾಗ್ ಶೆಟ್ಟಿ “ ನಮ್ಮ ವಿಭಾಗ ರೋಗ ನಿರ್ಣಯ (ಡಯಾಗ್ನೊಸ್ಟಿಕ್) ಮತ್ತು ಥೆರೆಪಿಯೊಟಿಕ್ ಚಿಕಿತ್ಸಾ ವಿಧಾನದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಸಾಮಾನ್ಯ ಎಂಡೊಸ್ಕೊಪಿ ಮತ್ತು ಕೊಲೊನೊಸ್ಕೊಪಿಯಿಂದ ಕ್ಲಿಷ್ಟಕರ ಚಿಕಿತ್ಸೆಯವರೆಗೆ ನುರಿತ ತಜ್ಞರು ಹಾಗೂ ಸಿಬ್ಬಂದಿಯ ತಂಡ ಸಮಗ್ರ ಸೇವೆಯನ್ನು ನೀಡುತ್ತಾ ಬಂದಿದೆ. ಈ ಪ್ರದೇಶದಲ್ಲಿ ಸುಧಾರಿತ ಎಂಡೊಸ್ಕೊಪಿಕ್ ಚಿಕಿತ್ಸಾ ವಿಧಾನಗಳಾದ ಇಯುಎಸ್, ಇಆರ್‍ಸಿಪಿ, ಪಿಒಎಮ್, ಮ್ಯಾನೊಮೆಟ್ರಿ ಮತ್ತು ಫೈಬ್ರೊಸ್ಕ್ಯಾನ್ ಚಿಕಿತ್ಸೆಯನ್ನು ಪರಿಚಯಿಸಿದ ಮೊದಲ ಆಸ್ಪತ್ರೆ ನಮ್ಮದು . ಹೆಚ್ಚುತ್ತಿರುವ ಬೊಜ್ಜು ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ನಮ್ಮ ಗ್ಯಾಸ್ಟ್ರೊಎಂಟರಾಲಾಜಿ ವಿಭಾಗವು ತೂಕ ಮತ್ತು ತೂಕ ಸಂಬಂಧಿತ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳಿಗೆ ಪರಿಹಾರ ಒದಗಿಸುವ ಬ್ಯಾರಿಯಾಟ್ರಿಕ್ ಸರ್ಜರಿ ಹಾಗೂ ಸುಧಾರಿತ ಶಸ್ತ್ರಚಿಕಿತ್ಸಾ ಸೇವೆಗಳಾದ ಲಿವರ್ ಟ್ರಾನ್ಸ್‌ಪ್ಲ್ಯಾಂಟ್ ಸೇವೆಯಲ್ಲಿ ಪರಿಣತಿ ಪಡೆದಿದೆ. ಕನ್ಸಲ್ಟೆಂಟ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಡಾ. ವಿದ್ಯಾ ಎಸ್ ಭಟ್, ಸರ್ಜಿಕಲ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಡಾ ಸತ್ಯನಾರಾಯಣ, ಇಂಟರ್ವೆನ್ಶನಲ್ ನ್ಯೂರೊ ರೆಡಿಯಾಲಾಜಿ ತಜ್ಞರಾದ ಡಾ. ಕೀರ್ತಿ ರಾಜ್ ಹಾಗೂ ಸರ್ಜಿಕಲ್ ಗ್ಯಾಸ್ಟ್ರೊಎಂಟರಾಲಾಜಿ ತಜ್ಞರಾದ ಡಾ. ಸ್ವಾತಿ ಕೂಡ ನಮ್ಮ ವಿಭಾಗದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ” ಎಂದು ವಿಭಾದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ 25 ವರ್ಷಗಳ ಗ್ಯಾಸ್ಟ್ರೊಎಂಟರಾಲಾಜಿ ವಿಭಾಗದ ಸೇವೆಯನ್ನು ಸ್ಮರಿಸುವ ವಿಶೇಷ ಲೊಗೊ ಅನಾರಣಗೊಳಿಸಲಾಯಿತು.
ಗ್ಯಾಸ್ಟ್ರೊಎಂಟರಾಲಾಜಿ ಸೇವೆಯ ಮಹತ್ವದ ಘಟ್ಟವನ್ನು ವರ್ಷವಿಡೀ ಆಚರಿಸುವ ಕುರಿತು ಮಾತನಾಡಿದ ಕನ್ಸಲ್ಟೆಂಟ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಡಾ. ಸುರೇಶ್ ಶೆನೊಯ್ “ ನಾವು ಈ ವರ್ಷದುದ್ದಕ್ಕೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆ ನಡೆಸಿದ್ದೇವೆ. ಜೀರ್ಣಾಂಗ ವ್ಯವಸ್ಥೆಯ ಆರೋಗ್ಯದ ಕುರಿತು ಕೂಡ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು , ಜೀರ್ಣಾಂಗಕ್ಕೆ ಆರೋಗ್ಯಕರವಾದ ಆಹಾರಗಳ ಪ್ರದರ್ಶನ ಕೂಡ ಆಯೋಜಿಸಲಾಗಿದೆ. ಹಾಗೆಯೇ ಮುಂಜಾಗ್ರತಾ ತಪಾಸಣೆಯಂತಹ ಆರೋಗ್ಯ ಕಾರ್ಯಕ್ರಮದ ಮೂಲಕ ಆರಂಭಿಕ ಹಂತದಲ್ಲೇ ಸಮಸ್ಯೆ ಪತ್ತೆಹಚ್ಚಿ ಚಿಕಿತ್ಸೆ ನೀಡುವ ಉದ್ದೇಶವನ್ನು ಕಾರ್ಯಕ್ರಮ ಹೊಂದಿದೆ. ಹಾಗೇ ಸಂಸ್ಕರಿತ (ಪ್ರೊಸೆಸ್ಡ್ ಫುಡ್ ) ಮತ್ತು ಕೃತಕ ಬಣ್ಣಹಾಗೂ ರುಚಿ ಬಳಸಿ ತಯಾರಿಸುವ ಆಹಾರಗಳು ಹೇಗೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂಬ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ . ಇದರ ಜೊತೆಗೆ ಕಾಲೇಜು, ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆ ಮತ್ತು ಸ್ವಯಂ ಸೇವಕ ಕ್ಲಬ್‌ಗಳಲ್ಲಿ ಆರೋಗ್ಯಕರ ಜೀವನಕ್ರಮದ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಕಾರ್ಯಕ್ರಮದ ಭಾಗವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ. ಉನ್ನಿಕೃಷ್ಣನ್ “ ಕೆಎಂಸಿ ಆಸ್ಪತ್ರೆಯ ಗ್ಯಾಸ್ಟ್ರೊಎಂಟರಾಲಾಜಿ ವಿಭಾಗವೂ ವರ್ಷಗಳ ಸಂಶೋಧನೆ , ಜೀರ್ಣಾಂಗ ಮತ್ತು ಲಿವರ್ ಆರೈಕೆ ಯಲ್ಲಿ ಹೊಸ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸುವ ಮೂಲಕ ಹಾಗೂ ಡಿಎನ್‌ಬಿ ಕಾರ್ಯಕ್ರಮದ ಮೂಲಕ ಹೊಸ ಪೀಳಿಗೆಯ ವೈದ್ಯರನ್ನು ಸಿದ್ಧಪಡಿಸುವ ಮೂಲಕ, ಇಲ್ಲಿಯವರೆಗೆ 27 ವೈದ್ಯರಿಗೆ ತರಬೇತಿ ನೀಡುವ ಮೂಲಕ , ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೆಗಳಿಗೆ ಕೊಡುಗೆ ನೀಡುವ ಮೂಲಕ ಉನ್ನತಿ ಕಾಣುತ್ತಾ ಬಂದಿದೆ. ಎನ್‌ಎಬಿಎಲ್ ಪ್ರಮಾಣಿತ (NABL) ಪ್ರದೇಶದ ಅತಿ ದೊಡ್ಡ ಲ್ಯಾಬ್ ಹಾಗೂ ಸುಧಾರಿತ ರೆಡಿಯೊಲಾಜಿ ಸೇವೆಯು 24 ಗಂಟೆಗಳ ನಿರಂತರ ಸೇವೆಯನ್ನು ನೀಡುವಲ್ಲಿ ಸಮರ್ಥವಾಗಿದೆ. ಹಾಗೇ ಗುಣಮಟ್ಟದ ಚಿಕಿತ್ಸೆ ಮತ್ತು ರೋಗಿಯ ತ್ವರಿತ ಚೇತರಿಕೆಯನ್ನು ಸಾಧಿಸಲು ನಿರಂತರ ಕೆಲಸ ಮಾಡಲು ನುರಿತ ತಜ್ಞರ ಬೆಂಬಲಿತ ಆಪರೇಷನ್ ಥಿಯೇಟರ್ ಮತ್ತು ಇಂಟೆನ್ಸಿವ್ ಕೇರ್ ಕೇಂದ್ರಗಳು ಸೇವಯಲ್ಲಿ ಇವೆ “ ಎಂದು ವಿಭಾಗದ ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸಾಘೀರ್ ಸಿದ್ದಿಕಿ ಸಂಸ್ಥೆಯ ಇತಿಹಾಸ ಮತ್ತು ರೋಗಿಯ ಆರೈಕೆಯಲ್ಲಿನ ಬದ್ದತೆಯ ಕುರಿತು ಮಾತನಾಡಿದರು. “ನಮ್ಮಗ್ಯಾಸ್ಟ್ರೋಎಂಟರಾಲಜಿ ವಿಭಾಗದ 25 ವರ್ಷಗಳ ಪ್ರಯಾಣವು ನಮ್ಮ ತಜ್ಞರತಂಡದ ಸಮರ್ಪಣೆ ಮತ್ತು ಒಂದೇ ಸೂರಿನಡಿ ನಾವು ಒದಗಿಸುವ ಉನ್ನತಮಟ್ಟದ ಸೌಲಭ್ಯಗಳಿಗೆ ಸಾಕ್ಷಿಯಾಗಿದೆ. ರೋಗಿಗಳುಸಮಗ್ರ, ಸಹಾನುಭೂತಿಯುಳ್ಳ ಮತ್ತು ಉತ್ತಮಗುಣಮಟ್ಟದ ಆರೈಕೆಗಾಗಿ ಅವಲಂಬಿಸಬಹುದಾದ ಆಸ್ಪತ್ರೆಯಾಗಿ ಗುರುತು ಪಡೆದಿರುವುದಕ್ಕೆ ನಾವುಹೆಮ್ಮೆಪಡುತ್ತೇವೆ. ವುದೇಶದ ಅತಿದೊಡ್ಡ ಖಾಸಗಿ ಆರೋಗ್ಯರಕ್ಷಣಾಜಾಲವಾಗಿದ್ದು, ಇದರ ಪ್ರಯೋಜನವೆಂದರೆ ರೋಗಿಗೆ ಉತ್ತಮ ಆರೈಕೆಯನ್ನು ಸಜ್ಜುಗೊಳಿಸುವ ಮತ್ತು ದೊಡ್ಡನಗರಗಳಲ್ಲಿ ನಡೆಯುವಂತೆ ಮಂಗಳೂರಿನಲ್ಲಿ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮ ಆರೈಕೆ ಒದಗಿಸುವುದು” ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post