ಬೆಳ್ತಂಗಡಿ: ಒಂಟಿ ಮಹಿಳೆಯ ಮನೆಗೆ ನುಗ್ಗಿದ ಕಳ್ಳರು, ಮಹಿಳೆಯ ಕೈ ಕಾಲು ಕಟ್ಟಿ ಹಾಕಿ, ಚಿನ್ನಾಭರಣ ದೋಚಿದ ಘಟನೆ ತಾಲ್ಲೂಕಿನ ನಾರಾವಿ ಗ್ರಾಮದ ಅರಸಿಕಟ್ಟೆ ಬಳಿ ನಡೆದಿದೆ.
ನಾರಾವಿ ಬಳಿಯ ಅರಸಿಕಟ್ಟೆ ಎಂಬಲ್ಲಿ ಪ್ರಭಾವತಿ ನಾಯ್ಕ(67) ಎಂಬ ಮಹಿಳೆಯ ಮನೆಗೆ ನುಗ್ಗಿ ದರೋಡೆ ನಡೆಸಲಾಗಿದೆ. ನ.12ರಂದು ರಾತ್ರಿ ಏಳು ಗಂಟೆಗೆ ನುಗ್ಗಿದ ನಾಲ್ವರು ಮುಸುಕುಧಾರಿಗಳು ಸುತ್ತುವರಿದು, ಬಂಗಾರವನ್ನು ತಂದು ಕೊಡುವಂತೆ ಹೇಳಿ ಧಮ್ಕಿ ಹಾಕಿದ್ದಾರೆ. ಬೊಬ್ಬೆ ಹೊಡೆದ ಮಹಿಳೆಯ ಕೈಕಾಲನ್ನು ಹಗ್ಗದಿಂದ ಕಟ್ಟಿ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕಿವಿಯಲ್ಲಿದ್ದ ಬೆಂಡೋಲೆ, ಮನೆಯೊಳಗಿದ್ದ 3 ಚಿನ್ನದ ಬಳೆಗಳು, 3 ಚಿನ್ನದ ಉಂಗುರಗಳು, ಚಿನ್ನದ ಚೈನ್ ಹಾಗೂ ಒಂದು ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
ಆರೋಪಿತರು ದೋಚಿದ ಚಿನ್ನದ ಮೌಲ್ಯ ₹4.60 ಲಕ್ಷ ಆಗಬಹುದು ಅಂದಾಜಿಸಲಾಗಿದೆ. ವೇಣೂರು ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸೌಮ್ಯ ಜೆ. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Like this:
Like Loading...
Related
Discover more from Coastal Times Kannada
Subscribe to get the latest posts sent to your email.
Discussion about this post