• About us
  • Contact us
  • Disclaimer
Wednesday, March 4, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಾರ್ಕಳ: ಎರಡು ಮನೆಗೆ ದಾಳಿ 15 ಲಕ್ಷ ರೂ. ಮೌಲ್ಯದ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಗೋವಾ ಮದ್ಯ ವಶ

Coastal Times by Coastal Times
November 14, 2024
in ಕ್ರೈಮ್ ನ್ಯೂಸ್
ಕಾರ್ಕಳ: ಎರಡು ಮನೆಗೆ ದಾಳಿ 15 ಲಕ್ಷ ರೂ. ಮೌಲ್ಯದ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಗೋವಾ ಮದ್ಯ ವಶ
330
VIEWS
WhatsappTelegramShare on FacebookShare on Twitter

ಕಾರ್ಕಳ, ನ.14: ಬೋಳ ಗ್ರಾಮದ ಅಬ್ಯನಡ್ಕ ಎಂಬಲ್ಲಿ ಇಂದು ಬೆಳಗಿನ ಜಾವ 4.50ರ ಸುಮಾರಿಗೆ ಎರಡು ಮನೆಗಳಲ್ಲಿ ದಾಳಿ ನಡೆಸಿದ ಉಡುಪಿ ಅಬಕಾರಿ ಪೊಲೀಸರು ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಗೋವಾ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಅವಿನಾಶ್ ಮಲ್ಲಿ ಎಂಬವರಿಗೆ ಸೇರಿದ ಅವನಿ ನಿಲಯ ಎಂಬ ಮನೆಗೆ ಹಾಗೂ ಅದೇ ಗ್ರಾಮದ ಮರಿಮಾರು ಗುತ್ತು ಎಂಬ ಮನೆಗೆ ಏಕಕಾಲದಲ್ಲಿ ದಾಳಿ ನಡೆಸಿದ ಅಬಕಾರಿ ಪೊಲೀಸರು, ಅಕ್ರಮವಾಗಿ ದಾಸ್ತಾನು ಇರಿಸಿದ 272 ಪೆಟ್ಟಿಗೆಗಳಲ್ಲಿ ಒಟ್ಟು 2360.850 ಲೀಟರ್ ವಿವಿಧ ಬ್ರಾಂಡ್ಗಳ ಗೋವಾ ಮದ್ಯ ಪತ್ತೆ ಹಚ್ಚಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ವೇಳೆ ಆರೋಪಿಗಳಾದ ಆದಿ ಉಡುಪಿಯ ಪ್ರಶಾಂತ್ ಸುವರ್ಣ ಮತ್ತು ಅಬ್ಯನಡ್ಕದ ಅವಿನಾಶ್ ಮಲ್ಲಿ ಓಡಿ ತಲೆ ಮರೆಸಿಕೊಂಡಿದ್ದಾರೆ. ಇವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ವಶಪಡಿಸಿಕೊಂಡ ಗೋವಾ ಮದ್ಯದ ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಜಾರಿ ಮತ್ತು ತನಿಖೆ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ.ಸಿ.ಎಚ್.ಬಾಲಕೃಷ್ಣ ನಿರ್ದೇಶನದ ಮೇರೆಗೆ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಮಾರ್ಗದರ್ಶನದಂತೆ ನಡೆದ ಕಾರ್ಯಾಚರಣೆಯ ನೇತೃತ್ವವನ್ನು ಉಡುಪಿ ಜಿಲ್ಲಾ ಅಬಕಾರಿ ಅಧೀಕ್ಷಕ ಶಿವಪ್ರಸಾದ್ ವಹಿಸಿದ್ದರು. ಪ್ರಕರಣವನ್ನು ಕ್ರಮವಾಗಿ ಉಡುಪಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಗುರುಮೂರ್ತಿ ಡಿ.ಪಾಲೇಕರ್ ಹಾಗೂ ಉಡುಪಿ ಜಿಲ್ಲಾ ತಂಡದ ಅಬಕಾರಿ ಉಪ ನಿರೀಕ್ಷಕ ರಾಘವೇಂದ್ರ ದಾಖಲಿಸಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಜ್ಯೋತಿ, ಮಿಲ್ಲರ್ ಡಿಸೋಜ, ಉಪ ನಿರೀಕ್ಷಕರಾದ ಕೃಷ್ಣ ನಿತ್ಯಾನಂದ, ಶಿವಶಂಕರ, ದಿವಾಕರ, ಚಂದ್ರ ಮೊಗವೀರ ಹಾಗೂ ಸಿಬ್ಬಂದಿ ಚಂದ್ರಶೇಖರ ಪಾಟೀಲ, ನಿರ್ಮಲ ನಾಯಕ್, ಶಂಕರಾ ನಂದ, ನಂಜುಂಡಸ್ವಾಮಿ, ಪ್ರಹ್ಲಾದ, ರಾಜಶೇಖರ, ಖಾಜ ಮೈನುಸಾಬ್, ತಿಪ್ಪಣ್ಣ ಹೊಸಮನಿ, ಕೃಷ್ಣ ಆಚಾರಿ, ಮಹಾಂತೇಶ್ ಹಾಗೂ ವಾಹನ ಚಾಲಕರಾದ ದಿನೇಶ್, ವೆಂಕಟರಮಣ ಗೊಲ್ಲ, ಪುದೀಪ, ಸುಧಾಕರ ಭಾಗವಹಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

TV9 Property Expo: ದಿನಾಂಕ : 15-17ರಂದು ಬೆಂಗಳೂರಿನಲ್ಲಿ ಟಿವಿ9 ಎಕ್ಸ್​ಪೋ

Next Post

ಅಂಕಪಟ್ಟಿ ಸಮಸ್ಯೆ,‌ ಪರೀಕ್ಷಾ ಶುಲ್ಕ ಹೆಚ್ಚಳ ವಿರುದ್ಧ ಎಬಿವಿಪಿಯಿಂದ ಮಂಗಳೂರು ವಿವಿ ಆಡಳಿತ ಸೌಧಕ್ಕೆ ಮುತ್ತಿಗೆ ಗಾಜಿನ ಬಾಗಿಲು ಪುಡಿ

Related Posts

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ
ಕ್ರೈಮ್ ನ್ಯೂಸ್

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

March 3, 2026
72
ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ: ಎಫ್‌ಐಆರ್ ದಾಖಲು
ಕ್ರೈಮ್ ನ್ಯೂಸ್

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ: ಎಫ್‌ಐಆರ್ ದಾಖಲು

March 3, 2026
70
Next Post
ಅಂಕಪಟ್ಟಿ ಸಮಸ್ಯೆ,‌ ಪರೀಕ್ಷಾ ಶುಲ್ಕ ಹೆಚ್ಚಳ ವಿರುದ್ಧ ಎಬಿವಿಪಿಯಿಂದ ಮಂಗಳೂರು ವಿವಿ ಆಡಳಿತ ಸೌಧಕ್ಕೆ ಮುತ್ತಿಗೆ ಗಾಜಿನ ಬಾಗಿಲು ಪುಡಿ

ಅಂಕಪಟ್ಟಿ ಸಮಸ್ಯೆ,‌ ಪರೀಕ್ಷಾ ಶುಲ್ಕ ಹೆಚ್ಚಳ ವಿರುದ್ಧ ಎಬಿವಿಪಿಯಿಂದ ಮಂಗಳೂರು ವಿವಿ ಆಡಳಿತ ಸೌಧಕ್ಕೆ ಮುತ್ತಿಗೆ ಗಾಜಿನ ಬಾಗಿಲು ಪುಡಿ

Discussion about this post

Recent News

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

March 3, 2026
72
ಮಂಗಳೂರು: ಮುಲ್ಲಕಾಡ್ ಸರ್ಕಾರಿ ಶಾಲೆಯ ಮೇಲ್ಛಾವಣಿ ಉದ್ಘಾಟನೆ

ಮಂಗಳೂರು: ಮುಲ್ಲಕಾಡ್ ಸರ್ಕಾರಿ ಶಾಲೆಯ ಮೇಲ್ಛಾವಣಿ ಉದ್ಘಾಟನೆ

March 3, 2026
3
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

March 3, 2026
ಮಂಗಳೂರು: ಮುಲ್ಲಕಾಡ್ ಸರ್ಕಾರಿ ಶಾಲೆಯ ಮೇಲ್ಛಾವಣಿ ಉದ್ಘಾಟನೆ

ಮಂಗಳೂರು: ಮುಲ್ಲಕಾಡ್ ಸರ್ಕಾರಿ ಶಾಲೆಯ ಮೇಲ್ಛಾವಣಿ ಉದ್ಘಾಟನೆ

March 3, 2026
ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ: ಎಫ್‌ಐಆರ್ ದಾಖಲು

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ: ಎಫ್‌ಐಆರ್ ದಾಖಲು

March 3, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d