ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಹೈದರಾಬಾದ್‌ನಲ್ಲಿ 125 ಅಡಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿದರು. ಅಂಬೆಡ್ಕರ್ ಜಯಂತಿ ಅಂಗವಾಗಿ ಪುತ್ಥಳಿಯನ್ನು ಅನಾವರಣಗೊಳಿಸಲಾಗಿದೆ. ಇದು ಭಾರತದ ಅತಿ ಎತ್ತರದ ಪ್ರತಿಮೆಯಾಗಿದ್ದು, ಹೈದರಾಬಾದ್‌ನ ಹುಸೇನ್ ಸಾಗರ್ ಸರೋವರದ ದಡದಲ್ಲಿ ನಿರ್ಮಿಸಲಾಗಿದೆ. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಅಂಬೇಡ್ಕರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
‘ತೆಲಂಗಾಣ ರಾಜ್ಯ ಸಚಿವಾಲಯದ ಪಕ್ಕ ಸ್ಥಾಪಿಸಲಾಗುವ ಭಾರತದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಪ್ರತಿದಿನ ಜನರಿಗೆ ಹಾಗೂ ಆಡಳಿತ ವರ್ಗಕ್ಕೆ ಸ್ಪೂರ್ತಿ ನೀಡುತ್ತದೆ’ ಎಂದು ಎಂದು ಚಂದ್ರಶೇಖರ್ ಅವರು ಹೇಳಿದ್ದಾರೆ. ಅಂಬೇಡ್ಕರ್ ಪ್ರತಿಮೆಯ ತಾಂತ್ರಿಕ ಮತ್ತು ಉತ್ಪಾದನಾ ಕ್ರಮದ ನಿರ್ಧಾರಕ್ಕೆ ಕನಿಷ್ಠ ಎರಡು ವರ್ಷ ಸಮಯ ಹಿಡಿದಿದೆ. ‘98 ವರ್ಷದ ಶಿಲ್ಪಿ ರಾಮ್ ವಾಂಜಿ ಸುತಾರ್ ಈ ಪ್ರಯತ್ನ ಮಾಡಿದ್ದಾರೆ’ ಎಂದು ಚಂದ್ರಶೇಖರ್ ಅವರು ಪ್ರಶಂಸಿದ್ದಾರೆ.
ಈ ಸಂದರ್ಭ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಿದ 98 ವರ್ಷದ ಶಿಲ್ಪಿ ರಾಮ ವಾಂಜಿ ಸುತಾರ್ ಅವರನ್ನು ಚಂದ್ರಶೇಖರ್ ಅವರು ಶ್ಲಾಘಿಸಿದರು. ಅಲ್ಲದೆ, ಪದ್ಮಭೂಷಣ ಪ್ರಶಸ್ತಿ ಪುರಷ್ಕೃತರಾದ ಸುತಾರ್ ಅವರನ್ನು ತೆಲಂಗಾಣ ಸರಕಾರದ ಪರವಾಗಿ ಗೌರವಿಸಿದರು.
ಪ್ರತಿಮೆಯ ಅನಾವರಣ ಕಾರ್ಯಕ್ರಮದಲ್ಲಿ 35 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಲು ಹಾಗೂ ಅಲ್ಲಿಂದ ನಿರ್ಗಮಿಸಲು ಸಾರ್ವಜನಿಕರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 750ಕ್ಕೂ ಅಧಿಕ ಬಸ್‌ಗಳ ಸಂಚಾರ ವ್ಯವಸ್ಥೆ ಮಾಡಲಾಗಿತ್ತು.
Telangana CM K Chandrashekar Rao unveils the 125 ft-tall statue of Dr BR Ambedkar in Hyderabad.
Dr BR Ambedkar's grandson and Vanchit Bahujan Aaghadi president Prakash Ambedkar also present here. pic.twitter.com/TvqoMfeOn0
— ANI (@ANI) April 14, 2023
Discover more from Coastal Times Kannada
Subscribe to get the latest posts sent to your email.
Discussion about this post