ಭಾರತ ಮೂಲದ ಬ್ರಿಟಿಷ್ ಚೆಸ್ ಆಟಗಾರ್ತಿ ಬೋಧನಾ ಶಿವಾನಂದನ್ ಬ್ರಿಟಿಷ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಗ್ರ್ಯಾಂಡ್‌ಮಾಸ್ಟರ್ ವಿರುದ್ಧ ಗೆದ್ದ ಅತ್ಯಂತ ಕಿರಿಯ ಚೆಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಲಿವರ್‌ಪೂಲ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನ ಅಂತಿಮ ಸುತ್ತಿನಲ್ಲಿ 60 ವರ್ಷದ ಗ್ರ್ಯಾಂಡ್‌ಮಾಸ್ಟರ್ ಪೀಟರ್ ವೆಲ್ಸ್ ಅವರನ್ನು ಸೋಲಿಸುವ ಮೂಲಕ 10 ವರ್ಷದ ಬೋಧನಾ ಈ ಸಾಧನೆ ಮಾಡಿದರು.
ಇದರೊಂದಿಗೆ ಬೋಧನಾ ಶಿವಾನಂದನ್ ಅಮೆರಿಕದ ಆಟಗಾರ್ತಿಯ ದಾಖಲೆ ಮುರಿದರು. ಇದಕ್ಕೂ ಮೊದಲು ಈ ದಾಖಲೆ ಅಮೆರಿಕದ ಕ್ಯಾರಿಸ್ಸಾ ಯಿಪ್ ಹೆಸರಿನಲ್ಲಿತ್ತು. ಇವರು 2019ರಲ್ಲಿ 10 ವರ್ಷ, 11 ತಿಂಗಳು ಮತ್ತು 20 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.
ಲಾಕ್ ಡೌನ್ ಸಮಯದಲ್ಲಿ ಬೋಧನಾ ಐದನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದರು. ತಂದೆಯ ಸ್ನೇಹಿತರಲ್ಲಿ ಒಬ್ಬರು ಗ್ಯಾರೇಜ್ ಸ್ವಚ್ಛಗೊಳಿಸುವಾಗ ಚೆಸ್ ಸೆಟ್ ಅನ್ನು ಎಸೆಯುವ ಬಗ್ಗೆ ಯೋಚಿಸುತ್ತಿದ್ದರು. ಆದರೆ ಬೋಧನಾ ಅವರ ತಂದೆ ಶಿವನಂದ ಅದನ್ನು ತಮಗೆ ನೀಡವಂತೆ ಕೇಳಿದರು. ನಂತರ ಅದನ್ನು ತಮ್ಮ ಮಗಳಿಗೆ ನೀಡಿದ್ದಾರೆ. ಇದನ್ನು ನೋಡಿ ಆಕರ್ಷಿತರಾದ ಬೋಧನಾ ಯೂಟ್ಯೂಬ್ ವೀಡಿಯೊಗಳನ್ನು ನೋಡುತ್ತಾ ಚೆಸ್ ಆಡುವುದನ್ನು ಕಲಿತುಕೊಂಡರು. ಇದಾದ ಬಳಿಕ ಆನ್‌ಲೈನ್‌ನಲ್ಲಿ ಚೆಸ್ ಆಡಲು ಪ್ರಾರಂಭಿಸಿ ಗೆಲುವು ಸಾಧಿಸತೊಡಗಿದರು.
ಚೆಸ್ ದಂತಕಥೆ ಸುಸಾನ್ ಪೋಲ್ಗರ್ ಕೂಡ ಬೋಧನಾ ಸಾಧನೆಯನ್ನು ಶ್ಲಾಘಿಸಿದ್ದಾರೆ. ‘ಬೋಧನಾ ಶಿವಾನಂದನ್ ಕೇವಲ 10 ವರ್ಷ ವಯಸ್ಸಿನಲ್ಲಿ ಬ್ರಿಟಿಷ್ ಚೆಸ್ ಚಾಂಪಿಯನ್‌ಶಿಪ್‌ನ ಅಂತಿಮ ಸುತ್ತಿನಲ್ಲಿ ಗ್ರ್ಯಾಂಡ್‌ಮಾಸ್ಟರ್ ಸೋಲಿಸಿ ದಾಖಲೆ ಬರೆದಿದ್ದಾರೆ. ಇದಲ್ಲದೆ ಐಎಂ ಕ್ಯಾರಿಸ್ಸಾ ಅವರ ದಾಖಲೆಯನ್ನೂ ಮುರಿದಿದ್ದಾರೆ’ ಎಂದು ತಿಳಿಸಿದ್ದಾರೆ.
ಬೋಧನಾ ಅವರ ಪೋಷಕರು ತಮಿಳುನಾಡಿನವರು: ಬೋಧನಾ ಅವರು ತಂದೆ, ತಾಯಿ ಮೂಲತಃ ತಮಿಳುನಾಡಿನ ತಿರುಚ್ಚಿಯವರಾಗಿದ್ದಾರೆ. 2007ರವರೆಗೆ ತಮಿಳುನಾಡಿನಲ್ಲಿ ವಾಸಿಸುತ್ತಿದ್ದ ಶಿವಾನಂದನ್ ಐಟಿ ವೃತ್ತಿಪರರಾಗಿದ್ದು, ಲಂಡನ್‌ನಲ್ಲಿ ಉದ್ಯೋಗ ಸಿಕ್ಕ ಕಾರಣ ಅಲ್ಲಿಗೆ ತೆರಳಿದ್ದರು. ಈ ವೇಳೆ ಬೋಧನಾ ಜನಿಸಿದ್ದರು. ಇದೀಗ ಬ್ರಿಟಿಷ್ ಚೆಸ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post