ಉಳ್ಳಾಲ : ಶೃಂಗೇರಿ ಸೇರಿದಂತೆ ಕರಾವಳಿಯ ಪುಣ್ಯಕ್ಷೇತ್ರಗಳಿಗೆ ಬಂದಾಗ ಮನಸ್ಸಿಗೆ ತುಂಬಾನೇ ನೆಮ್ಮದಿ ಸಿಗುತ್ತದೆ. ನಂಬಿಕೆ ಇರುವುದರಿಂದ ಮಂಗಳೂರು ವ್ಯಾಪ್ತಿಗೆ ಬಂದಾಗ ಈ ಭಾಗಕ್ಕೆ ಭೇಟಿ ನೀಡುತ್ತಿರುತ್ತೇನೆ” ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ತಿಳಿಸಿದ್ದಾರೆ. ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ಪತ್ನಿ ಗೀತಾ ಜೊತೆ ಭೇಟಿ ನೀಡಿದ ಕನ್ನಡದ ಖ್ಯಾತ ನಟ ಬಳಿಕ ಮಾಧ್ಯಮದವರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಈ ವೇಳೆ ಮಾಧ್ಯಮದವರ ಜತೆ ಮಾತನಾಡಿದ ನಟ ಶಿವರಾಜ್ ಕುಮಾರ್ ಅವರು ಶೃಂಗೇರಿ ಮಠ ಸೇರಿದಂತೆ ಕರಾವಳಿಯ ಉಡುಪಿ ಶ್ರೀ ಕೃಷ್ಣ ಮಠ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ, ವನದೇವತೆ, ಕೊರಗಜ್ಜನ ಕ್ಷೇತ್ರಗಳನ್ನ ಸಂದರ್ಶಿಸುತ್ತಾ ಬಂದಿದ್ದೇನೆ. ಎಲ್ಲಾ ಸಾನಿಧ್ಯಗಳಿಗೂ ಭೇಟಿ ಕೊಟ್ಟಾಗ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ. ಸದೃಢ ನಂಬಿಕೆ ಜೊತೆ ಜೀವನ ಚೆನ್ನಾಗಿರಲಿ ಎಂದು ಭಕ್ತಿಯಿಂದ ಪ್ರಾರ್ಥಿಸಲು ಕೊರಗಜ್ಜನ ಕ್ಷೇತ್ರಕ್ಕೆ ಬಂದಿದ್ದೇನೆ. ನ.15ರ ಆಸುಪಾಸಿನಲ್ಲಿ ಅರ್ಜುನ್ ಜನ್ಯ ನಿರ್ದೇಶಿಸಿರುವ ರಿಯಲ್ ಸ್ಟಾರ್ ಉಪೇಂದ್ರ, ರಾಜ್ ಬಿ. ಶೆಟ್ಟಿ ಜತೆ ತಾನು ನಟಿಸಿರುವ ಫಾರ್ಟಿ ಫೈವ್ ಚಿತ್ರ ತೆರೆ ಕಾಣಲಿದೆ. ಮತ್ತೊಂದು ಚಿತ್ರ ನಿರ್ಮಾಣದ ಬಗ್ಗೆಯೂ ಸಿದ್ಧತೆ ನಡೆದಿದ್ದು ಶೀಘ್ರವೇ ಪ್ರಾಜೆಕ್ಟ್ ಆರಂಭವಾಗಲಿದೆ ಎಂದರು.
ಈ ವೇಳೆ ಚಿತ್ರ ನಿರ್ಮಾಪಕರಾದ ಶ್ರೀಕಾಂತ್, ರಾಜೇಶ್ ಭಟ್, ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್ ನ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದು ಶಿವರಾಜ್ ಕುಮಾರ್ ದಂಪತಿಯನ್ನ ಕ್ಷೇತ್ರದ ಪರವಾಗಿ ಅಭಿನಂದಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post