• About us
  • Contact us
  • Disclaimer
Friday, February 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಅಂತರರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ ಎಕ್ಸ್‌ಪ್ಲೋರಾ 2025

Coastal Times by Coastal Times
November 15, 2025
in ಕರಾವಳಿ
ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಅಂತರರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ ಎಕ್ಸ್‌ಪ್ಲೋರಾ 2025
11
VIEWS
WhatsappTelegramShare on FacebookShare on Twitter

ಮಂಗಳೂರು; ಫಾದರ್ ಮಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ (FMHMC) ಮತ್ತು ಗ್ಲೋಬಲ್ ಹೋಮಿಯೋಪಥಿ ಫೌಂಡೇಶನ್ (GHF) ಹಾಗೂ ನವದೆಹಲಿಯ ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಹೋಮಿಯೋಪಥಿ (CCRH) ಯ ಸಹಯೋಗದಲ್ಲಿ, ಎಕ್ಸ್‌ಪ್ಲೋರಾ 2025 – ಹೋಮಿಯೋಪಥಿಕ್ ಶಿಕ್ಷಣ, ಅಭ್ಯಾಸ ಮತ್ತು ಸಂಶೋಧನೆಗಳ ಏಕೀಕರಣ ಎಂಬ ಅಂತರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮವು 2025ರ ನವೆಂಬರ್ 14ರಂದು ಬೆಳಿಗ್ಗೆ 11.30ಕ್ಕೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.

ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಶ್ರೀಮತಿ ಕಮಲಾ ಬಾಯಿ ಬಿ, KAS ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದಕ್ಷಿಣ ಆಫ್ರಿಕಾದ ಡರ್ಬನ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಹೋಮಿಯೋಪತಿ ವಿಭಾಗದ ಮುಖ್ಯಸ್ಥ ಡಾ. ಆಶ್ಲೇ ರಾಸ್ ಮತ್ತು U K ಯ ಫಂಕ್ಷನಲ್ ಶಿಫ್ಟ್ ಕನ್ಸಲ್ಟಿಂಗ್ ಲಿಮಿಟೆಡ್ ನಿರ್ದೇಶಕರು ಮತ್ತು ವೈಧ್ಯಕೀಯ ಸಲಹೆಗಾರರಾದ ಡಾ. ಕಿಮ್ ಆಂಥೋನಿ ಜಾಬ್ಸ್ಟ್ ಅವರು ಗೌರವ ಅತಿಥಿಗಳಾಗಿದ್ದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ರೆವರೆಂಡ್ ಫಾದರ್ ಫೌಸ್ಟಿನ್ ಲ್ಯೂಕಾಸ್ ಲೋಬೊ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಔಪಚಾರಿಕ ಉದ್ಘಾಟನಾ ಕಾರ್ಯಕ್ರಮವು ದೇವರ ಆಶೀರ್ವಾದದೊಂದಿಗೆ ಪ್ರಾರ್ಥನಾ ಹಾಡಿನ ರೂಪದಲ್ಲಿ ಆರಂಭವಾಯಿತು. ಆಯೋಜನಾ ಕಾರ್ಯದರ್ಶಿಯಾದ ಡಾ. ಶೀನಾ ಕೆ.ಎನ್. ಅವರು ಗಣ್ಯರನ್ನು ವೇದಿಕೆಗೆ ಬರಮಾಡಿಕೊಂಡರು. FMHMC&H ಸಂಸ್ಥೆಯ ಆಡಳಿತಾಧಿಕಾರಿ ರೆವರೆಂಡ್ ಫಾದರ್ ಡೊನಾಲ್ಡ್ ನಿಲೇಶ್ ಕ್ರಾಸ್ತಾ ಅವರು ಸ್ವಾಗತ ಭಾಷಣ ಮಾಡಿದರು. ಸಮ್ಮೇಳನವನ್ನು ವೇದಿಕೆಯ ಮೇಲಿದ್ದ ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿ ಡಾ. ಆಶ್ಲೇ ರಾಸ್ ಅವರು ಸಂಶೋಧನಾ ಬುಲೆಟಿನ್ (Research Bulletin) 2025 ಅನ್ನು ಮತ್ತು ಡಾ. ಕಿಮ್ ಆಂಥೋನಿ ಜಾಬ್ಸ್ಟ್ ಅವರು ಪಯೋನಿಯರ್ (Pioneer) 2025 ಅನ್ನು ಬಿಡುಗಡೆ ಮಾಡಿದರು. ಪಯೋನಿಯರ್ 2025 ರ ಸಿಬ್ಬಂದಿ ಸಂಪಾದಕಿಯಾದ ಡಾ. ದೀನಾ ಎಂ ಮಾಂತೆರೊ, ಸಂಶೋಧನಾ ಬುಲೆಟಿನ್ 2025ರ ಸಂಪಾದಕರಾದ ಡಾ. ಸಿದ್ಧೇಶ ಮತ್ತು ವಿದ್ಯಾರ್ಥಿ ಸಂಶೋಧನಾ ಕ್ಲಬ್‌ನ ಕಾರ್ಯದರ್ಶಿ ಕುಮಾರಿ ಚೇತನಾ ಅವರು ಬಿಡುಗಡೆ ಸಮಾರಂಭದಲ್ಲಿ ಗಣ್ಯರೊಂದಿಗೆ ಉಪಸ್ಥಿರರಿದ್ದರ.

ಗ್ಲೋಬಲ್ ಹೋಮಿಯೋಪಥಿ ಫೌಂಡೇಶನ್‌ನ ಅಧ್ಯಕ್ಷರಾದ ಡಾ. ಜಯೇಶ್ ಸಾಂಘವಿಯವರು ಜಿಎಚ್‌ಎಫ್(GHF) ಮತ್ತು ಎಫ್‌ಎಂಎಚ್‌ಎಂಸಿ&ಎಚ್(FMHMC&H) ಇವರ ಯಶಸ್ವಿ ಸಹಯೋಗದಿಂದ ಈ ಅಂತರರಾಷ್ಟ್ರೀಯ ಸಮ್ಮೇಳನವನ್ನು ಸಾಕಾರಗೊಳಿಸಿದ ಬಗ್ಗೆ ಸಭಿಕರನ್ನು ಅಭಿನಂದಿಸಿದರು. ಹೋಮಿಯೋಪಥಿಯಲ್ಲಿ ಸಂಶೋಧನೆ ನಡೆಸುವುದು ಇಂದಿನ ಕಾಲದ ಅವಶ್ಯಕತೆಯಾಗಿದ್ದು, ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು ಅತ್ಯಂತ ಮುಖ್ಯ ಎಂದು ಅವರು ಹೇಳಿದರು.

ಎಫ್‌.ಎಂ.ಸಿ.ಐ ನಿರ್ದೇಶಕರಾದ ರೆವರೆಂಡ್ ಫಾದರ್ ಫಾಸ್ಟಿನ್ ಲೂಕಾಸ್ ಲೋಬೋ ಅವರು ವೇದಿಕೆಯ ಮೇಲಿರುವ ಗಣ್ಯರೊಂದಿಗೆ ಗ್ಲೋಬಲ್ ಹೋಮಿಯೋಪತಿ ಫೌಂಡೇಶನ್‌ನ ಟ್ರಸ್ಟಿ ಮತ್ತು ಪೋಷಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಮತ್ತು ಭಾರತ ಸರ್ಕಾರದ ಆಯುಷ್ ಇಲಾಖೆ ಮಾಜಿ ಸಲಹೆಗಾರ (ಹೋಮಿಯೋಪಥಿ)ರಾದ ಡಾ. ಈಶ್ವರದಾಸ್ ಅವರನ್ನು, ಹೋಮಿಯೋಪತಿ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಕಮಲಾ ಬಾಯಿ ಬಿ, ಕ್ರೇನಿಯಂ ಸಾಫ್ಟ್‌ವೇರ್ ಅನ್ನು ಬಿಡುಗಡೆ ಮಾಡಿ ತಮ್ಮ ಉದ್ಘಾಟನಾ ಭಾಷಣದಲ್ಲಿ, ಔಷಧಿಗಳಲ್ಲಿಯೂ ಸಹ ಎಲ್ಲಾ ಅಂಶಗಳಲ್ಲಿ ಕಲಬೆರಕೆಯಿಂದ ಸೇರಿಸಲ್ಪಟ್ಟ ಜೀವನಶೈಲಿಯ ಅಸ್ವಸ್ಥತೆಗಳನ್ನು ಎಲ್ಲರೂ ಹೇಗೆ ಬೆನ್ನಟ್ಟುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಂಡು, ಈ ಹೋಮಿಯೋಪಥಿಯಂತಹ ಪರ್ಯಾಯ ಚಿಕಿತ್ಸಾ ವಿಧಾನಗಳ ಉತ್ತೇಜನವು ಸಮಾಜದ ಆರೋಗ್ಯಮುಖಿ ಭವಿಷ್ಯಕ್ಕೆ ಮಹತ್ವದ್ದು ಎಂದು ಶ್ಲಾಘಿಸಿದರು.

ಎಫ್‌.ಎಂ.ಸಿ.ಐ ನಿರ್ದೇಶಕರಾದ ರೆವರೆಂಡ್ ಫಾದರ್ ಫಾಸ್ಟಿನ್ ಲೂಕಸ್ ಲೋಬೊ ಅವರು ಮುಖ್ಯ ಅತಿಥಿ ಹಾಗೂ ಗೌರವಾನ್ವಿತ ಅತಿಥಿಗಳಿಗೆ ಕೃತಜ್ಞತೆ ಮತ್ತು ಸ್ನೇಹದ ಸಂಕೇತವಾಗಿ ಸ್ಮರಣಿಕೆಗಳನ್ನು ಪ್ರದಾನ ಮಾಡಿದರು. ತಮ್ಮ ಅಧ್ಯಕ್ಷೀಯ ಬಾಷಣದಲ್ಲಿ ರೆವರೆಂಡ್ ಫಾದರ್ ಆಗಸ್ಟಸ್ ಮುಲ್ಲರ್ ರವರು ಹೋಮಿಯೋಪಥಿ ಮೂಲಕ ಎಫ್‌.ಎಂ.ಸಿ.ಐ.ಯ ಬೀಜಗಳನ್ನು ಬಿತ್ತಿದ ರೀತಿಯನ್ನೂ, ಇಂದು ಅದು ಎಷ್ಟು ದೂರ ಬೆಳೆಯಲು ಸಾಧ್ಯವಾಗಿದೆ ಎಂಬುದನ್ನೂ ಸ್ಮರಿಸಿದರು. ಮಾನಸಿಕ, ದೈಹಿಕ ಮತ್ತು ಆತ್ಮೀಯ ಮಟ್ಟದಲ್ಲಿ ಗುಣಪಡಿಸುವುದು ಮತ್ತು ಆರೈಕೆ ನೀಡುವುದು ನಮ್ಮ ಎಫ್‌.ಎಂ.ಸಿ.ಐ.ಯ ಮಂತ್ರವಾಗಿದೆ. ಈ ಅಂತರರಾಷ್ಟ್ರೀಯ ಸಮ್ಮೇಳನವು ಹೋಮಿಯೋಪಥಿಯ ಸಂಶೋಧನಾ ಪ್ರಗತಿಗೆ ಮೂಲ ಕಾರಣವಾಗಿ ಹೊರಹೊಮ್ಮಿದೆ ಎಂದು ಹೇಳಿದರು ಮತ್ತು ಎಲ್ಲಾ ಪ್ರತಿನಿಧಿಗಳನ್ನು “ಪೂರ್ವದ ರೋಮ್” ಎಂದು ಕರೆಯಲಾಗುವ ಮಂಗಳೂರು ನಗರಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು.

ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ಅವರ ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು. ಡಾ ರೆಶೆಲ್ ನೊರೊನ್ಹಾ ಮತ್ತು ಡಾ ನಂದನ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ಫಾದರ್ ಮುಲ್ಲರ್ ಫಾರ್ಮಾಸ್ಯುಟಿಕಲ್ ವಿಭಾಗದ ಆಡಳಿತಾಧಿಕಾರಿ ರೆವರೆಂಡ್ ಫಾದರ್ ನೆಲ್ಸನ್ ಡಿ. ಪೈಸ್, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ರೆವರೆಂಡ್ ಫಾದರ್ ಅಶ್ವಿನ್ ಎಲ್. ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ. ವಿಲ್ಮಾ ಎಂ. ಡಿಸೋಜಾ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಡಾ. ಗಿರೀಶ್ ನವಾಡ ಯು.ಕೆ., ಮತ್ತು ಡಾ. ಶೀನಾ ಕೆ.ಎನ್. ಸಂಘಟನಾ ಕಾರ್ಯದರ್ಶಿ ಎಕ್ಸ್‌ಪ್ಲೋರಾ 2025 ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ಕಿಮ್ ಜಾಬ್ಸ್‌ಟ್ (ಯುನೈಟೆಡ್ ಕಿಂಗ್‌ಡಮ್), ಡಾ. ಅಶ್ಲಿ ರಾಸ್‌ (ದಕ್ಷಿಣ ಆಫ್ರಿಕಾ), ಡಾ. ಆಶಾ ಕಿರಣ್ (ಆಸ್ಟ್ರೇಲಿಯಾ), ಡಾ. ನಿಕೋಲಾ ಕ್ಯೂಟಿನ್ಹೋ (ಜರ್ಮನಿ) ಹಾಗೂ ಭಾರತದೆಲ್ಲೆಡೆಗಿನ ಇನ್ನೂ 24 ಮಂದಿ ತಜ್ಞರು ಉಪಸ್ಥಿತರಿದ್ದಾರೆ. ಇವರು ಸಂಶೋಧನೆ, ಶೈಕ್ಷಣಿಕ ವಿಧಾನ ಮತ್ತು ಹೋಮಿಯೋಪತಿಯಲ್ಲಿನ ಇತ್ತೀಚಿನ ಪ್ರಗತಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ಚರ್ಚಿಸಲಿರುವರು.
ಭಾರತದಾದ್ಯಂತ 1500 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಉಗ್ರರಿಂದ ವಶಪಡಿಸಿಕೊಂಡ ಸ್ಫೋಟಕ ಶ್ರೀನಗರ ಪೊಲೀಸ್‌ ಠಾಣೆಯಲ್ಲಿ ಸ್ಫೋಟ, 7 ಸಾವು, 27 ಮಂದಿಗೆ ಗಾಯ

Next Post

ಪಣಂಬೂರು ಸಿಗ್ನಲ್‌ನಲ್ಲಿ ನಿಂತಿದ್ದಾಗ ಆಟೋಗೆ ಅಪ್ಪಳಿಸಿದ ಟ್ಯಾಂಕರ್: ಮೂವರು ಮೃತ್ಯು

Related Posts

ಎಪಿಕೆ ಫೈಲ್ ಡೌನ್ಲೋಡ್ ಮಾಡಿ ಆನ್‌ಲೈನ್ ಹೂಡಿಕೆ ಮಾಡಿ ಹೆಚ್ಚಿನ ಲಾಭದ ಆಮಿಷ ಮಂಗಳೂರಿನ ಮಹಿಳೆಗೆ 19.06 ಲಕ್ಷ ರೂ. ವಂಚನೆ
ಕರಾವಳಿ

ಎಪಿಕೆ ಫೈಲ್ ಡೌನ್ಲೋಡ್ ಮಾಡಿ ಆನ್‌ಲೈನ್ ಹೂಡಿಕೆ ಮಾಡಿ ಹೆಚ್ಚಿನ ಲಾಭದ ಆಮಿಷ ಮಂಗಳೂರಿನ ಮಹಿಳೆಗೆ 19.06 ಲಕ್ಷ ರೂ. ವಂಚನೆ

February 25, 2026
32
‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ
ಕರಾವಳಿ

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

February 24, 2026
29
Next Post
ಪಣಂಬೂರು ಸಿಗ್ನಲ್‌ನಲ್ಲಿ ನಿಂತಿದ್ದಾಗ ಆಟೋಗೆ ಅಪ್ಪಳಿಸಿದ ಟ್ಯಾಂಕರ್: ಮೂವರು ಮೃತ್ಯು

ಪಣಂಬೂರು ಸಿಗ್ನಲ್‌ನಲ್ಲಿ ನಿಂತಿದ್ದಾಗ ಆಟೋಗೆ ಅಪ್ಪಳಿಸಿದ ಟ್ಯಾಂಕರ್: ಮೂವರು ಮೃತ್ಯು

Discussion about this post

Recent News

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

February 26, 2026
58
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
46
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

February 26, 2026
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
ಮಂಗಳೂರು: ಖಾಸಗಿ ವೀಡಿಯೋ ಮುಂದಿಟ್ಟು ಸ್ಪೀಕಿಂಗ್ ಕೋರ್ಸ್ ಮಾಲೀಕರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಆರೋಪಿ ಅರೆಸ್ಟ್

ಮಂಗಳೂರು: ಖಾಸಗಿ ವೀಡಿಯೋ ಮುಂದಿಟ್ಟು ಸ್ಪೀಕಿಂಗ್ ಕೋರ್ಸ್ ಮಾಲೀಕರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಆರೋಪಿ ಅರೆಸ್ಟ್

February 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d