ಮಂಗಳೂರು, ಜ.15: ಐವರು ಸಾಧಕರಿಗೆ ರಚನಾ ಕೆಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ವತಿಯಿಂದ ನೀಡಲಾಗುವ ರಚನಾ ಪ್ರಶಸ್ತಿಯನ್ನು ರವಿವಾರ ಪ್ರದಾನ ಮಾಡಲಾಯಿತು. ಇಲ್ಲಿನ ಮಿಲಾಗ್ರಿಸ್ ಜ್ಯುಬಿಲಿ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರಿನ ಬಿಷಪ್ ವಂ.ಡಾ. ಪೀಟರ್ ಪೌಲ್ ಸಲ್ದಾನ ಪ್ರಶಸ್ತಿ ಪ್ರದಾನ ಮಾಡಿದರು. ರಚನಾ ಉದ್ಯಮಿ- ಜೆರಿ ವಿನ್ಸೆಂಟ್ ಡಯಾಸ್ ಉಡುಪಿ, ರಚನಾ ಕೃಷಿಕ- ಲಿಯೊ ಫೆರ್ನಾಂಡಿಸ್ ಅಲ್ಲಿಪಾದೆ, ರಚನಾ ವೃತ್ತಿಪರ- ಡಾ.ಗ್ಯಾಡಿಸ್ ಮಿನೇಜಸ್ ಕುಂದಾಪುರ, ರಚನಾ ಎನ್‌ಆರ್‌ಐ ಉದ್ಯಮಿ- ಮೈಕೆಲ್ ಡಿಸೋಜ ದುಬೈ ಮತ್ತು ರಚನಾ ವರ್ಷದ ಮಹಿಳಾ ಸಾಧಕಿ ಪ್ರಶಸ್ತಿಯನ್ನು ಡಾ.ಲವಿನಾ ಎಂ. ನೊರೊನ್ದಾರಿಗೆ ನೀಡಿ ಗೌರವಿಸಲಾಯಿತು.





ಬಿಷಪ್ ಡಾ. ಪೀಟರ್ ಪಾಲ್ ಸಲ್ದಾನ ಮಾತನಾಡಿ ಒಬ್ಬ ವ್ಯಕ್ತಿಯ ದಯಾಳುತನ ಕಿವಿ ಕೇಳ ದವರಿಗೆ ಕಣ್ಣು ಇಲ್ಲವರಿಗೆ ತಿಳಿಯುತ್ತದೆ. ಸಮಾಜದ ಬಗ್ಗೆ ಕಾಳಜಿ ಇರುವ ಅರ್ಹರನ್ನೇ ರಚನಾ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹಿರಿಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಎಂ.ಸಂಜಯ್ ಡಿಸೋಜ ಉದ್ಯಮಿಗಳಿಗೆ ದೊಡ್ಡ ಬದಲಾವಣೆ ಮಾಡುವ ಸಾಮರ್ಥ್ಯ ಇದೆ. ಆರ್ಥಿಕ ಸಂಪನ್ಮೂಲದ ಕೊರತೆ ಎದುರಿಸುವವರಿಗೆ ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಸೌಲಭ್ಯ ಗಳನ್ನು ದೊರಕಿಸಿಕೊಡಲು ರಚನಾದಂತಹ ಸಂಸ್ಥೆಗಳು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಅಭಿಪ್ರಾಯಪಟ್ಟರು.



ರಚನಾ ಸಂಸ್ಥೆಯ ಮಾಜಿ ಅಧ್ಯಕ್ಷರುಗಳನ್ನು ಮತ್ತು ರಚನಾ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಲವಿನಾ ಎಸ್.ಮೊಂತೆರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಚನಾ ಅಧ್ಯಕ್ಷ ವಿನ್ಸೆಂಟ್ ಕುಟಿನ್ಹಾ ಸ್ವಾಗತಿಸಿದರು. ಸಂಚಾಲಕ ಸಿಎ ರುಡಾಲ್ಫ್ ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೆಸ್ಲಿ ರೇಗೊ ಕಾರ್ಯಕ್ರಮ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.








Discussion about this post