ಮಂಗಳೂರು: ಮೋಸಕ್ಕೆ ಒಳಗಾದ ವ್ಯಕ್ತಿಯು ಕ್ರಿಪ್ಟೋ ಕರೆನ್ಸಿ ಬಗ್ಗೆ ಆಸಕ್ತಿ ಹೊಂದಿದ್ದರು ಹಾಗಾಗಿ ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿ ಈ ವ್ಯಕ್ತಿಯು ಸಹೋದ್ಯೋಗಿ ಮೂಲಕ 2021ರ ಮಾರ್ಚ್‌ನಲ್ಲಿ ಕೇರಳದ ಜಿಜೊ ಜಾನ್ ಪುತ್ತೆನವೆಟಿಲ್ ಪರಿಚಯವಾಗಿದ್ದು, 2021ರ ಮಾರ್ಚ್‌ನಿಂದ ಈಚೆಗೆ ಒಟ್ಟು ರೂ.1.15 ಕೋಟಿ ವಂಚನೆ ಮಾಡಿದ ಬಗ್ಗೆ ನಗರದ ಸೆನ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಸಹದ್ಯೋಗಿ ಮೂಲಕ ಕೇರಳದ ಜಿಜೊ ಜಾನ್ ಪುತ್ತೆನವೆಟಿಲ್ ಎಂಬಾತ 2021ರ ಮಾರ್ಚ್ ತಿಂಗಳಲ್ಲಿ ಪರಿಚಯವಾಗಿದ್ದ. ತನ್ನನ್ನು ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂದು ಜಿಜೊ ಜಾನ್ ದೂರುರನ್ನು ನಂಬಿಸಿದ್ದ. ಕೋವಿಡ್ ಇರುವುದರಿಂದ ಮುಖಾಮುಖಿ ಭೇಟಿ ಆಗಲು ಸಾಧ್ಯವಿಲ್ಲ ಎಂದು ಹೇಳಿ ದೂರುದಾರರ ಮೊಬೈಲ್‌ಗೆ 2021 ರ ಮಾರ್ಚ್‌ನಲ್ಲಿ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿ ಕ್ರಿಪ್ಟೊ ಆ್ಯಂಡ್ ಕರೆನ್ಸಿ ಬಗ್ಗೆ ಮಾಹಿತಿ ನೀಡಿದ್ದ. ಅದರಲ್ಲಿ ಹಣ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು ಶೇ 10ರಷ್ಟು ಹಣವನ್ನು ಹಿಂತಿರುಗಿಸುವುದಾಗಿ ನಂಬಿಸಿದ್ದ. ಅದರಂತೆ ದೂರುದಾರರು ತಮ್ಮ ಬ್ಯಾಂಕ್ ಖಾತೆಯಿಂದ 2021ರ ಮಾರ್ಚ್ 23ರಿಂದ ಅದೇ ವರ್ಷದ ಜೂನ್ 1ರವರೆಗೆ ರೂ. 41 ಲಕ್ಷವನ್ನು ಐಎಂಪಿಎಸ್ ಹಾಗೂ ಎನ್ಇಎಫ್‌ಟಿ ಮೂಲಕ ಆರೋಪಿಗೆ ಪಾವತಿಸಿದ್ದರು. ಆ ಬಳಿಕ ಸಾಲ ಪಡೆದು 2021ರ ಅ.22ರಿಂದ 26ರವರೆಗೆ ಮತ್ತೆ ರೂ. 60 ಲಕ್ಷವನ್ನು ಐಎಂಪಿಎಸ್ ಹಾಗೂ ಎನ್ಇಎಫ್‌ಟಿ ಮೂಲಕ ನೀಡಿದ್ದರು. ಎಲ್ಲ ಸೇರಿ ಆರೋಪಿಯು, ದೂರುದಾರರಿಂದ ಒಟ್ಟು ರೂ.1.24 ಕೋಟಿ ಹಣವನ್ನು ಪಡೆದಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಆರೋಪಿಯು ತನ್ನ ಉಳಿತಾಯ ಖಾತೆಯಿಂದ ರೂ. 9 ಲಕ್ಷವನ್ನು ದೂರುದಾರರಿಗೆ 2022ರ ಸೆಪ್ಟಂಬರ್‌ನಲ್ಲಿ ಮರು ಪಾವತಿಸಿದ್ದ. ಹಾಗಾಗಿ ಹೂಡಿಕೆ ಮಾಡಿದ ಹಣ ಮರಳಿ ಸಿಗಬಹುದು ಎಂಬ ನಿರೀಕ್ಷೆಯಿಂದ ದೂರುದಾರರು ಕಾದಿದ್ದರು. ಆದರೆ, ಇತ್ತೀಚೆಗೆ ಆರೋಪಿಯು ದೂರವಾಣಿ ಕರೆಯನ್ನು ಸ್ವೀಕರಿಸುತ್ತಿಲ್ಲ. ಹಾಗಾಗಿ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Discover more from Coastal Times Kannada
Subscribe to get the latest posts sent to your email.








Discussion about this post