ಮಂಗಳೂರು: ಇದೇ ಮೊದಲ ಬಾರಿಗೆ ಈ ಮಾದರಿಯ ಕ್ರೈಮ್ ಎಪಿಸೋಡ್ ರೆಡಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬೆಂಗಳೂರು ನಗರದಲ್ಲಿ ಪೊಲೀಸರು ಹೇಗೆ ಕೆಲಸ ಮಾಡುತ್ತಾರೆ, ಕ್ರೈಮ್ ಆದಾಗ ಎಷ್ಟು ಅಲರ್ಟ್ ಆಗಿ ಕಾರ್ಯಾಚರಣೆಗೆ ಇಳಿಯುತ್ತಾರೆ ಎಂಬುದನ್ನು ಹಿಡಿದು ಇಡೀ ಪ್ರಕರಣದ ವೃತ್ತಾಂತವನ್ನು ಕಟ್ಟಿಕೊಡಲು ತಂಡವೊಂದು ಮುಂದಾಗಿದೆ.
ವಿಶ್ವದ ಒಟಿಟಿ ದೈತ್ಯ ಕಂಪನಿ ನೆಟ್ಫ್ಲಿಕ್ಸ್ ಹಲವಾರು ಡಾಕ್ಯುಮೆಂಟರಿ ಹಾಗೂ ವೆಬ್ ಸಿರೀಸ್ ಗಳನ್ನು ಹೊರತರುತ್ತಿದೆ. ಇದೀಗ ಹೊಸ ವೆಬ್ ಸರಣಿಯ ಮುಖಾಂತರ ಕ್ರೈಂ ಲೋಕದ ನೈಜ ಕಥೆಯನ್ನು ಪ್ರೇಕ್ಷಕರ ಮುಂದಿಡಲು ತಯಾರಾಗಿದೆ. ಕರ್ನಾಟಕದಲ್ಲಿ ನಡೆದ ಅಪರಾಧ ಜಗತ್ತಿನ 4 ವಿಶೇಷ ಪ್ರಕರಣಗಳನ್ನು ತೆರೆಯ ಮೇಲೆ ತರಲು ನೆಟ್ಫ್ಲಿಕ್ಸ್ ಸಿದ್ಧಗೊಂಡಿದೆ. ಈ ಚಿತ್ರಕ್ಕೆ ‘ಕ್ರೈಂ ಸ್ಟೋರೀಸ್, ಇಂಡಿಯಾ ಡಿಟೆಕ್ಟಿವ್ಸ್’ಎಂದು ಹೆಸರಿಡಲಾಗಿದ್ದು, ಸೆಪ್ಟೆಂಬರ್ 22ಕ್ಕೆ ಬಿಡುಗಡೆಗೊಳ್ಳಲಿದ್ದು, ನೆಟ್ಫ್ಲಿಕ್ಸ್ನಲ್ಲಿ ತನ್ನ ಬಳಕೆದಾರರಿಗೆ ವೀಕ್ಷಿಸಲು ಲಭ್ಯವಾಗಲಿದೆ.
ವೆಬ್ ಸರಣಿ ಕುರಿತಾಗಿ ಮಾತನಾಡಿರುವ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ಚಿತ್ರೀಕರಣಕ್ಕಾಗಿ ಲಂಡನ್ ನ ಕ್ಲಾರಾ ಮತ್ತು ಜಾನ್ ಬಂದಿದ್ದು ಇವರೊಂದಿಗೆ ರಿಚಾ, ನವೀನ್ ಸೇರಿ ಐದಾರು ಜನರು ಬಂದಿದ್ದರು. ಆ ಸಂದರ್ಭ ನಾನು ಬೆಂಗಳೂರು ವಿಭಾಗದಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ನಾನು ಮಾತ್ರವಲ್ಲದೆ ವೈಟ್ ಫೀಲ್ಡ್ ಡಿಸಿಪಿ ಅನುಚೇತ್, ನಂದಿನಿ ಲೇಔಟ್ ಇನ್ಸ್‌ಪೆಕ್ಟರ್ ಲೋಹಿತ್, ಸುಬ್ರಹ್ಮಣ್ಯ ನಗರದ ಸಬ್ ಇನ್ಸ್‌ಪೆಕ್ಟರ್ ಲತಾ, ಸಂಜಯ್ ನಗರ ಸಬ್ ಇನ್ಸ್‌ಪೆಕ್ಟರ್ ರೂಪಾ ಸೇರಿದಂತೆ ಪೊಲೀಸ್ ತಂಡ ಜತೆಯಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಸಿರೀಸ್ ರೂಪದಲ್ಲಿ ಚಿತ್ರೀಕರಿಸಲಾಗಿದೆ.
ಈ ವೆಬ್ ಸರಣಿಗಾಗಿ ರಿಯಲ್ ಟೈಮ್ ಬೇಸಿಸ್ ನಲ್ಲಿ ಶೂಟಿಂಗ್ ನಡೆದಿದ್ದು, ಯಾವುದೇ ಫಿಕ್ಷನ್ ಅಥವಾ ಇದಕ್ಕಾಗಿ ಸೀನ್ ಕ್ರಿಯೇಟ್ ಮಾಡಲಾಗಿಲ್ಲ. ಒಂದು ಅಪರಾಧ ಕೃತ್ಯ ನಡೆದಾಗ ಪೊಲೀಸರ ತಂಡ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬ ಘಟನಾವಳಿಯನ್ನು ಒಳಗೊಂಡು ಚಿತ್ರೀಕರಣ ನಡೆಸಲಾಗಿದೆ. ಸುಮಾರು 6ರಿಂದ 8 ತಿಂಗಳ ಕಾಲ ಆ ತಂಡ ರಾತ್ರಿ ಹಗಲು ಬಿಡದೆ ದಿನದ 24 ಗಂಟೆ ಕೂಡ ನಮ್ಮ ಜೊತೆ ಕ್ರೈಂ ನಡೆದ ಜಾಗಗಳಿಗೆ ಬರುತ್ತಿದ್ದರು. ಪ್ರೀ ಪ್ರೋಡಕ್ಷನ್ ಗೆ ಇಷ್ಟು ಸಮಯ ತೆಗೆದುಕೊಂಡವರು ಪೋಸ್ಟ್ ಪ್ರೊಡಕ್ಷನ್ ಗೆ ಒಂದೂವರೆ ವರ್ಷ ತೆಗೆದುಕೊಂಡಿದ್ದಾರೆ. ಅವರು ಆಗ ಏನು ಮಾಡುತ್ತಿದ್ದರು ಎಂದು ತಿಳಿಯುತ್ತಿರಲಿಲ್ಲ. ಆದರೆ, ಟ್ರೈಲರ್ ನೋಡಿದಾಗ ರಿಯಲ್ ಟೈಮ್ ಶೂಟಿಂಗ್ ಗಾಗಿ ಅವರು ಪಟ್ಟ ಕಷ್ಟ ಈಗ ಔಟ್ಪುಟ್ ನಲ್ಲಿ ತಿಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post