ಪುತ್ತೂರು, ಸೆ.16: ಪಾದರಕ್ಷೆ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರ ತಂಡವೊಂದು ಪಾದರಕ್ಷೆಗಳ ಅಂಗಡಿಯೊಂದರಿಂದ 14,74,500 ರೂಪಾಯಿ ನಗದು ಹಾಗೂ ಸಿಸಿಟಿವಿ ಡಿವಿಆರ್ ಅನ್ನು ದೋಚಿ ಪರಾರಿಯಾಗಿರುವ ಘಟನೆ ಪುತ್ತೂರಿನ ಕಸಬಾ ಗ್ರಾಮದಲ್ಲಿ ನಡೆದಿದೆ. ಪುತ್ತೂರು ಬಸ್ ನಿಲ್ದಾಣದ ಬಳಿಯಿರುವ ‘ಪ್ರಕಾಶ್ ಫುಟ್‌ವೇರ್ ಕಂಪನಿ’ಯಲ್ಲಿ ಕಳ್ಳತನ ನಡೆದಿದೆ. ಅಂಗಡಿ ಮಹಮ್ಮದ್ ಶಮೀರ್ ಎಂಬುವರಿಗೆ ಸೇರಿದ್ದು. ಅವರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುವ ಅಂಗಡಿಯನ್ನು ಸಹ ಹೊಂದಿದ್ದಾರೆ. ಕಾರು ವ್ಯಾಪಾರದಿಂದ ಬಂದ 8 ಲಕ್ಷ ರೂ. ಹಾಗೂ ತನ್ನ ಸ್ನೇಹಿತ ಸಿದ್ದಿಕ್‌ನಿಂದ ತೆಗೆದ 7,00,000 ರೂ.ಗಳನ್ನು ಮಾಲೀಕ ತನ್ನ ಪಾದರಕ್ಷೆ ಅಂಗಡಿಯ ನಗದು ಡ್ರಾಯರ್‌ನ ಹಿಂಭಾಗದ ಮರದ ಪೆಟ್ಟಿಗೆಯಲ್ಲಿ ಇಟ್ಟುಕೊಂಡಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಬೆಳಗ್ಗೆ ಅಂಗಡಿ ಬಾಗಿಲು ತೆಗೆದಾಗ, ಮೇಲ್ಭಾಗದ ಹಂಚನ್ನು ತೆಗೆದು ಕಳ್ಳರು ನುಗ್ಗಿರುವುದು ಕಂಡುಬಂದಿತ್ತು.
ಪಿರ್ಯಾದಿದಾರರು ಪುತ್ತೂರಿನ ಅಂಗಡಿಗೆ ಆಗಮಿಸಿದಾಗ, ಯಾರೋ ಅಂಗಡಿಯ ಮೇಲ್ಛಾವಣಿಯ ಹೆಂಚುಗಳನ್ನು ತೆಗೆದು ಸೀಲಿಂಗ್ ಮುರಿದು ಒಳಗೆ ಪ್ರವೇಶಿಸಿರುವುದು ಗಮನಕ್ಕೆ ಬಂದಿದೆ. ಅಂಗಡಿಯ ನಗದು ಡ್ರಾಯರ್‌ನಲ್ಲಿದ್ದ 24,500 ರೂ. ಮತ್ತು ಅಂಗಡಿಯ ನಗದು ಡ್ರಾಯರ್‌ನ ಹಿಂದಿನ ಮರದ ಪೆಟ್ಟಿಗೆಯಿಂದ 14,50,000 ರೂ. ಅಂಗಡಿಯಲ್ಲಿದ್ದ 10,000 ರೂಪಾಯಿ ಮೌಲ್ಯದ ಸಿಸಿಟಿವಿ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ಕಳವು ಮಾಡಿದ್ದಾರೆ. ಸೆಪ್ಟೆಂಬರ್ 15 ರ ರಾತ್ರಿ 9 ರಿಂದ ಸೆಪ್ಟೆಂಬರ್ 16 ರ ಬೆಳಿಗ್ಗೆ 9 ರ ನಡುವೆ ಕಳ್ಳತನ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸರು ಐಪಿಸಿ 454, 457, 380 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post