ಮಂಗಳೂರು: ನಾನು ದೇವೇಗೌಡ ಕುಟುಂಬ ಖರೀದಿ ಮಾಡುತ್ತೇನೆಂದು ಹೇಳಿಲ್ಲ. ಕುಮಾರಸ್ವಾಮಿ ಮುಸ್ಲಿಮರ ಮತ ನನಗೆ ಬೇಕಾಗಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಿದ್ದು. ಮುಸ್ಲಿಂ ವೋಟ್ ಬೇಡ ಎಂದು ಹೇಳಿ ದುಡ್ಡು ಕೊಟ್ಟು ಖರೀದಿ ಮಾಡುತ್ತಿದ್ದೀರಿ ಅಲ್ವಾ ಎಷ್ಟು ಸರಿ ಎಂದು ಕೇಳಿದ್ದೆ. ಮುಸ್ಲಿಮರು ಪಂಚರ್ ಹಾಕುವವರು, ವೆಲ್ಡಿಂಗ್ ಮಾಡುವರೆಂದು ಲಘವಾಗಿ ಮಾತನಾಡಿದ್ದಾರೆ. ಯಾಕೆ ಅವರ ಬಳಿ ವೋಟ್ ಕೇಳುತ್ತೀರಿ ಎಂದಿದ್ದೆ ಎಂದು ಜಮೀರ್ ಅಹಮದ್ ಖಾನ್ ಹೇಳಿದರು.
ಮಂಗಳೂರಿನಲ್ಲಿ ಶನಿವಾರ (ನ.16) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಂಗಡಿ, ಗುಜರಿಯಂಗಡಿಯಲ್ಲಿ ದುಡಿದು ದೇವೇಗೌಡರನ್ನು ಕೊಂಡುಕೊಳ್ಳುತ್ತಾರಾ ಎಂಬ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಹೌದು ಸ್ವಾಮಿ ನಾವು ಬಡವರು, ಅವರ ಬಳಿ ಯಾಕೆ ವೋಟು ಕೇಳುತ್ತೀರಿ? ಕುಮಾರಸ್ವಾಮಿಗೆ ಅದೇ ಪ್ರಶ್ನೆ ನಂದು. ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ. ಯೂ ಟರ್ನ್ ಕುಮಾರಸ್ವಾಮಿ ಎಂದು ಅವರಿಗೆ ಹೆಸರಿದೆ. ಯಾವಾಗ ಬೇಕಾದರೂ ಹೇಗೆ ಬೇಕಾದರೂ ಟರ್ನ್ ಮಾಡುತ್ತಾರೆ ಅವರು. ವೈಯಕ್ತಿಕವಾಗಿ ಕುಮಾರಸ್ವಾಮಿಗೆ ಹೇಳಿರುವುದು. ಒಕ್ಕಲಿಗರ ಬಗ್ಗೆ ನನಗೆ ಗೌರವ ಇದೆ. ಒಕ್ಕಲಿಗರ ವಿರುದ್ದ ಯಾವ ಹೇಳಿಕೆ ನೀಡಿಲ್ಲ ಎಂದು ಜಮೀರ್ ಹೇಳಿದರು.
ನಾನು ಜನತಾದಳಕ್ಕೆ ಬರಲು ಕಾರಣ ಆದಿ ಚುಂಚನಗಿರಿ ಸ್ವಾಮೀಜಿ. ನಾನು ಮಠದ ಹುಡುಗ, ತಾನು ಕೇವಲ ಕುಮಾರಸ್ವಾಮಿ ವಿಷಯದಲ್ಲಿ ಮಾತಾಡಿದ್ದು, ಒಕ್ಕಲಿಗರ ಪ್ರಶ್ನೆಯೇ ಹುಟ್ಟುವುದಿಲ್ಲ, ತನಗೆ ಒಕ್ಕಲಿಗ ಸಮುದಾಯದ ಬಗ್ಗೆ ಅಪಾರ ಗೌರವವಿದೆ, ಯಾಕೆಂದರೆ ತಾನು ಬೆಳೆದಿದ್ದು ಆದಿಚುಂಚನಗಿರಿ ಮಠದಲ್ಲಿ, ಅಲ್ಲಿಗೆ ದೊಡ್ಡ ಸ್ವಾಮಿಗಳು ಶನಿವಾರದಂದು ಬಂದಾಗ ಅವರು ರಾತ್ರಿ ಮಲಗುವವರೆಗೆ ಅವರೊಂದಿಗಿರುತ್ತಿದ್ದೆ ಎಂದು ಜಮೀರ್ ಹೇಳಿದರು.
ಲೋಕಾಯುಕ್ತ ನೊಟೀಸ್ ಬಂದಿರುವ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ಆ ಕುರಿತು ಬರುತ್ತಿದೆ. ನೊಟೀಸ್ ಕೊಡುವುದು ಸಾಮಾನ್ಯ. ಇಡಿಯವರು ಎಸಿಬಿಗೆ ಪಾವರ್ಡ್ ಮಾಡಿದ್ದಾರೆ, ಕೇಸ್ ಅಲ್ಲಿಂದ ಲೋಕಯುಕ್ತಾಗೆ ಬಂದಿದೆ. ನೋಟಿಸ್ ಬಂದ ಮೇಲೆ ಹೋಗಲೇ ಬೇಕು ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post