ಕಾಸರಗೋಡು : ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ವಿವಾಹಿತ ಮಹಿಳೆಯನ್ನು ಆಕೆಯ ಪ್ರಿಯಕರ ವಸತಿಗ್ರಹಕ್ಕೆ ಕರೆಸಿ ಕೊಲೆಗೈದ ಘಟನೆ ಕೇರಳದ ಕಾಞ೦ಗಾಡ್ ಸಮೀಪ ಮಂಗಳವಾರ ಸಂಜೆ ನಡೆದಿದೆ. ಉದುಮ ಮಾಂಗಾಡ್ ನ ದೇವಿಕಾ(34) ಹತ್ಯೆಗೀಡಾದವರು.
ಕೊಲೆ ನಡೆಸಿದ ಬಳಿಕ ಈಕೆಯ ಪ್ರಿಯಕರ ಕೃತ್ಯ ನಡೆದ ಸ್ಥಳದಿಂದ ಸುಮಾರು 500 ಮೀ ದೂರದಲ್ಲಿರುವ ಹೊಸದುರ್ಗ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಬೋವಿಕ್ಕಾನ ದ ಸತೀಶ್ ಭಾಸ್ಕರ್(36) ಶರಣಾದ ಆರೋಪಿ. ಈತ ಕಾಞ೦ಗಾಡ್ ನ ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದ. ಆರೋಪಿ ಸತೀಶ್ ಭಾಸ್ಕರನ್ ವಿವಾಹಿತನಾಗಿದ್ದು ಆತನಿಗೆ ಒಂದು ಮಗುವಿದೆ. ಹತ್ಯೆಯಾದ ದೇವಿಕಾರಿಗೂ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಬಳಿಕ ಪರಸ್ಪರ ಉಂಟಾದ ವೈಮನಸ್ಸು ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಕೃತ್ಯ ನಡೆಸುವುದಕ್ಕೆ ವಾರ ಮೊದಲೇ ಸತೀಶ್ ವಸತಿಗೃಹದಲ್ಲಿ ರೂಮ್ ಪಡೆದು ವಾಸಿಸುತ್ತಿದ್ದ. ಮಂಗಳವಾರ ಮಧ್ಯಾಹ್ನ ಆತ ದೇವಿಕಾಳನ್ನು ತಾನು ತಂಗಿದ್ದ ಲಾಡ್ಜ್ ನ ರೂಮ್ ಗೆ ಕರೆದುಕೊಂಡು ಬಂದು ಮಧ್ಯಾಹ್ನ 1.30ರ ಸುಮಾರಿಗೆ ಆಕೆಯ ಹತ್ಯೆ ಮಾಡಿದ ಆತ ರೂಮ್ ನ ಬಾಗಿಲಿಗೆ ಲಾಕ್ ಹಾಕಿ ಅಲ್ಲಿಂದ ಹೊರ ಹೋಗಿದ್ದ.
ಬಳಿಕ ಸಂಜೆ 5 ಗಂಟೆಯ ಸುಮಾರಿಗೆ ಕೃತ್ಯ ನಡೆದ ಸ್ಥಳದಿಂದ 500 ಮೀ ದೂರದಲ್ಲಿರುವ ಠಾಣೆಗೆ ಬಂದ ಆರೋಪಿ ಪೊಲೀಸರ ಮುಂದೆ ಕೊಲೆ ಮಾಡಿರುವುದನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ತಕ್ಷಣ ಪೊಲೀಸರು ವಸತಿ ಗೃಹಕ್ಕೆ ಪೊಲೀಸರು ಧಾವಿಸಿದ್ದು, ಈ ವೇಳೆ ದೇವಿಕಾ ಮೃತಪಟ್ಟಿಯ ಆಕೆಯ ಕತ್ತನ್ನು ಸೀಳಲಾಗಿತ್ತು ಎಂದು ಕಾಞ೦ಗಾಡ್ ಡಿವೈಎಸ್ಪಿ ಭಾಲಕೃಷ್ಣನ್ ನಾಯರ್ ಮಾಹಿತಿ ನೀಡಿದ್ದಾರೆ.
ದೇವಿಕಾ ಆರೋಪಿ ಬಳಿ ಪತ್ನಿಗೆ ವಿಚ್ಚೇಧನ ನೀಡಿ ತನ್ನನೂ ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದಳು. ಹೀಗಾಗಿ ತಾನು ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಸತೀಶ್ ಹೇಳಿಕೊಂಡಿದ್ದು ಈ ಬಗ್ಗೆ ತನಿಖೆ ಮುಂದುವರಿದಿದೆ. ಸಿಐಟಿಯು ಅಂಗಸಂಸ್ಥೆಯಾದ ಕೇರಳ ಸ್ಟೇಟ್ ಬಾರ್ಬರ್-ಬ್ಯೂಟಿಷಿಯನ್ ವರ್ಕರ್ಸ್ ಯೂನಿಯನ್ ಜಿಲ್ಲಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮಂಗಳವಾರ ದೇವಿಕಾ ತನ್ನ ಮನೆಯಿಂದ 20 ಕಿ.ಮೀ ದೂರದಲ್ಲಿರುವ ಕಾಞಂಗಾಡ್‌ಗೆ ಬಂದಿದ್ದರು. ಸಭೆಯ ನಂತರ ಸತೀಶ್ ಆಕೆಯನ್ನು ಲಾಡ್ಜ್‌ಗೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post