ಮಂಗಳೂರು: ನಗರದ ರಸ್ತೆಗಳಲ್ಲಿ, ವಾಹನ ಸಂಚಾರದ ಒತ್ತಡ ಅತೀ ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಂತೂ ಸುಗಮ ಸಂಚಾರ ನಿರ್ವಹಣೆ ಪೊಲೀಸ್ ಸಿಬ್ಬಂದಿಯ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ರಸ್ತೆಗಳಲ್ಲಿ ವಾಹನ ಸಂಚಾರಕ್ಕೆಅಡ್ಡಿ ಉಂಟಾಗುವ ಕಡೆ ತ್ವರಿತವಾಗಿ ತೆರಳಿ ದಟ್ಟಣೆ ನಿವಾರಿಸಲು ಪೊಲೀಸ್ ಇಲಾಖೆ ‘ಕೋಬ್ರಾ’ ಬೈಕ್ ಗಳನ್ನು ಸಂಚಾರ ಪೂರ್ವ ಮತ್ತು ಪಶ್ಚಿಮ ಠಾಣೆಗಳಿಗೆ ಮಂಗಳವಾರ ಹಸ್ತಾಂತರಿಸಲಾಯಿತು.
‘ಎಷ್ಟೇ ಆಧುನಿಕ ತಂತ್ರಜ್ಞಾನಗಳನ್ನು ಬಳಸಿದರೂ ನಗರದಲ್ಲಿ ವಾಹನ ಸಂಚಾರ ಸುಗಮವಾಗಿರುವಂತೆ ವ್ಯವಸ್ಥೆ ಮಾಡಲು ಸಂಚಾರ ಪೊಲೀಸರು ಸ್ಥಳದಲ್ಲಿ ಖುದ್ದು ಹಾಜರಾಗುವುದು ಅನಿವಾರ್ಯ. ಕೆಲವೊಮ್ಮೆ ಸಣ್ಣ ಪುಟ್ಟ ಅಪಘಾತ ಸಂಭವಿಸಿದಾಗ, ವಾಹನ ಸವಾರರು ಜಗಳವಾಡಿಕೊಂಡು ವಾಹನಗಳನ್ನು, ರಸ್ತೆಯ ಮಧ್ಯದಲ್ಲೇ ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಆ ಸ್ಥಳಕ್ಕೆ ತುರ್ತಾಗಿ ಧಾವಿಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಕೋಬ್ರಾ ಸಹಕಾರಿ’ ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ. ‘ನಗರದ ಸಂಚಾರ ಪೂರ್ವ ಮತ್ತು ಸಂಚಾರ ಪಶ್ಚಿಮ ಠಾಣೆಗಳಿಗೆ ನಾಲ್ಕು ‘ಕೋಬ್ರಾ’ ದ್ವಿಚಕ್ರ ವಾಹನಗಳನ್ನು ಮಂಗಳವಾರ ಹಸ್ತಾಂತರಿಸಲಾಗಿದೆ. ಈ ದ್ವಿಚಕ್ರ ವಾಹನಗಳನ್ನು ಠಾಣಾ ವ್ಯಾಪ್ತಿಯಲ್ಲಿ ಉಪಯೋಗಿಸಿಕೊಂಡು ಸಂಚಾರ ಸುವ್ಯವಸ್ಥೆ ಕಾಪಾಡಬಹುದು. ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು.
‘ಕೋಬ್ರಾ’ ದ್ವಿಚಕ್ರ ವಾಹನಗಳನ್ನು ಠಾಣಾ ಸರಹದ್ದಿನಲ್ಲಿ ಉಪಯೋಗಿಸಿಕೊಂಡು ಸಂಚಾರ ಸುವ್ಯವಸ್ಥೆ ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟಲು ಹಾಗೂ ನೊಂದವರಿಗೆ ಸಹಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post