ಮಂಗಳೂರು, ಜೂ 17 : ಚಿನ್ನಾಭರಣ ಮತ್ತು ಮೊಬೈಲ್ ಫೋನ್ ಅನ್ನು ಯುವಕನೋರ್ವನಿಂದ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಬಾಲಾಪರಾಧಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ಯಾಂಡ್ ಪಿಟ್ ಬೆಂಗ್ರೆ ನಿವಾಸಿ ನಿಹಾಲ್ ಸುವರ್ಣ(19) ಮತ್ತು ಆತನಿಗೆ ಕೃತ್ಯಕ್ಕೆ ಸಹಕರಿಸಿದ ಅಪ್ರಾಪ್ತ ಬಾಲಕನನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಜೂನ್ 16ರಂದು ನಿಹಾಲ್ ಮತ್ತು ಆತನ ಸ್ನೇಹಿತ ತಮ್ಮ ಪರಿಚಿತ ಯುವಕನನ್ನು ಬೈಕಂಪಾಡಿ ರೈಲ್ವೇ ಟ್ರಾಕ್ ಬಳಿಗೆ ಫೋನ್ ಮಾಡಿ ಕರೆಸಿಕೊಂಡಿದ್ದರು. ಅಲ್ಲಿಗೆ ಬಂದ ಯುವಕನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಕುತ್ತಿಗೆಯಲ್ಲಿದ್ದ 5.90 ಗ್ರಾಂ ತೂಕದ ಚಿನ್ನದ ಸರ ಮತ್ತು ಹತ್ತು ಸಾವಿರ ಮೌಲ್ಯದ ಮೊಬೈಲ್ ಫೋನನ್ನು ದೋಚಿದ್ದರು. ಈ ಬಗ್ಗೆ ಪಣಂಬೂರು ಠಾಣೆಗೆ ಯುವಕನ ತಂದೆ ದೂರು ನೀಡಿದ್ದರು.
ಇನ್ಸ್ ಪೆಕ್ಟರ್ ಸೋಮಶೇಖರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಚಿನ್ನದ ಸರ ಮತ್ತು ಮೊಬೈಲ್ ಫೋನ್ ಕಳವು ಮಾಡಿದ್ದವರನ್ನು ಬಂಧಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post