ಮುಂಬಯಿ: ವಯಸ್ಕ ಚಲನಚಿತ್ರ ತಾರೆ ಮಿಯಾ ಖಲೀಫಾ ತಮ್ಮ ಸಿನಿಮಾಗಳ ಮೂಲಕ ಜಗತ್ತಿಗೆ ಪರಿಚಯವಾಗಿದ್ದಾರೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿಯೂ ಸಹ ಉತ್ತಮ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದೀಗ ಮಿಯಾ ಈ ಬಾರಿಯ ಬಿಗ್ ಬಾಸ್ ಒಟಿಟಿ 2 ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಓಟಿಟಿ ಸೀಸನ್ ಸ್ಟ್ರೀಮ್ ಆಗಲು ಕ್ಷಣಗಣನೆ ಭಾಕಿ ಉಳಿದಿದೆ. ಹಿಂದಿಯಲ್ಲಿ ಇದು ಎರಡನೇ ಓಟಿಟಿ ಸೀಸನ್ ಆಗಿದ್ದು, ವಿಶೇಷವೆಂದರೆ ಈ ಬಾರಿ ಉಚಿತವಾಗಿ ಜಿಯೋ ಸಿನಿಮಾದಲ್ಲಿ ಶೋ ಸ್ಟ್ರೀಮ್ ಆಗಲಿದೆ.
ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಸದ್ದು ಮಾಡಿತ್ತು. ಅದನ್ನು ಕರಣ್ ಜೋಹರ್ ನಡೆಸಿಕೊಟ್ಟಿದ್ದರು. ಈ ಬಾರಿ ಬಹುತೇಕ ಟಿವಿಯಲ್ಲಿ ಬರುವ ಬಿಗ್ ಬಾಸ್ ನ ಎಲ್ಲಾ ಸೀಸನ್ ಗಳನ್ನು ನಿರೂಪಣೆ ಮಾಡಿದ ಸಲ್ಮಾನ್ ಖಾನ್ ಮೊದಲ ಬಾರಿ ಓಟಿಟಿ ವರ್ಷನ್ ನ ಬಿಗ್ ಬಾಸ್ ನ್ನು ನಡೆಸಿಕೊಡಲಿದ್ದಾರೆ.
ಈಗಾಗಲೇ ಬಿಗ್ ಬಾಸ್ ಓಟಿಟಿಯಲ್ಲಿ ಭಾಗಿಯಾಗುವ ಸ್ಪರ್ಧಿಗಳ ಪಟ್ಟಿ ಹೊರಬಿದ್ದಿದೆ. ಇದರಲ್ಲಿ ವಿವಾದದಿಂದ ಸುದ್ದಿಯಾದ ವ್ಯಕ್ತಿಗಳೂ ಸೇರಿದಂತೆ ಇತರರು ಇದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಬಿಗ್ ಬಾಸ್ ಓಟಿಟಿ -2 ನಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಒಂದು ಸ್ಪರ್ಧಿಯ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಒಂದು ಕಾಲದಲ್ಲಿ ಅಡಲ್ಟ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದ್ದ ಮಿಯಾ ಖಲೀಫಾ ಈ ಬಾರಿ ಬಿಗ್ ಬಾಸ್ ಓಟಿಟಿ-2 ನಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ವರದಿಯೊಂದು ವೈರಲ್ ಆಗಿದೆ. ʼಹಿಂದೂಸ್ತಾನ್ ಟೈಮ್ಸ್ʼ ವರದಿ ಪ್ರಕಾರ ನೀಲಿ ಚಿತ್ರ ನಿರ್ಮಾಣದ ಪ್ರಕರಣದಲ್ಲಿ ಬಂಧನವಾಗಿದ್ದ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಹಾಗೂ ಮಾಜಿ ನೀಲಿ ಚಿತ್ರತಾರೆ ಮಿಯಾ ಖಲೀಫಾ ಅವರನ್ನು ಬಿಗ್ ಬಾಸ್ ತಂಡ ಸಂಪರ್ಕ ಮಾಡಿದೆ ಎಂದು ವರದಿ ತಿಳಿಸಿದೆ.
ಆದರೆ ಇದುವರೆಗೆ ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿ ಹೊರಬಿದ್ದಿಲ್ಲ. ಈ ಹಿಂದೆ ಮಾಜಿ ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಅವರು ಬಿಗ್ ಬಾಸ್ ಸೀಸನ್ 5 ನಲ್ಲಿ ಭಾಗಿಯಾಗಿದ್ದರು. ಕೆಲವೊಂದು ವರದಿಗಳ ಪ್ರಕಾರ ಮಿಯಾ ಖಲೀಫಾ ಬಿಗ್ ಬಾಸ್ ಓಟಿಟಿ-2 ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬರಲಿದ್ದಾರೆ ಎನ್ನಲಾಗಿದೆ.
ಆಲಿಯಾ ಸಿದ್ದಿಕಿ, ಫಾಲಕ್ ನಾಜ್, ಆಕಾಂಕ್ಷಾ ಪುರಿ, ಅಂಜಲಿ ಅರೋರಾ, ಅವಿನಾಶ್ ಸಚ್‌ದೇವ್, ಪಾಲಕ್ ಪುರಸ್ವಾನಿ, ಜಿಯಾ ಶಂಕರ್, ಪುನೀತ್ ಸೂಪರ್‌ಸ್ಟಾರ್ ಮತ್ತು ಬೇಬಿಕಾ ಧುರ್ವೆ ಇವರುಗಳು ಸ್ಪರ್ಧಿಗಳಾಗಿ ಅಧಿಕೃತಗೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post