ಬೆಂಗಳೂರು: ಟೆಲಿಗ್ರಾಂ ಮೂಲಕ ಯುವಕರನ್ನ ಬಲೆಗೆ ಬೀಳಿಸಿಕೊಂಡು, ಮತಾಂತರಗೊಳ್ಳುವಂತೆ ಯುವಕರಿಗೆ ಬೆದರಿಕೆ ಹಾಕುತ್ತಿದ್ದ ಹನಿಟ್ರ್ಯಾಪ್ ಸುಂದರಿಯೋರ್ವಳನ್ನು ಪುಟ್ಟೇನಹಳ್ಳಿ ಪೊಲೀಸರು ಕೊನೆಗೂ ಬಂಧನಕ್ಕೊಳಪಡಿಸಿದ್ದಾರೆ.
ಬಳಿಕ ಮೊಬೈಲ್ನ ಕಾಂಟಾಕ್ಟ್ ಲಿಸ್ಟ್ ಪಟ್ಟಿ ಮಾಡಿಕೊಂಡು, ಕೇಳಿದಷ್ಟು ಹಣ ಕೊಡದಿದ್ದರೆ, ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದಿದ್ದರೆ ಕುಟುಂಬಸ್ಥರಿಗೆ ಕಳುಹಿಸಿ ಮಾನ ಮಾರ್ಯಾದೆ ಹರಾಜು ಮಾಡಲಾಗುವುದು ಎಂದು ಬೆದರಿಕೆ ಹಾಕುತ್ತಿದ್ದರು. ಆಕೆಯೊಂದಿಗೆ ಸಂಪ್ರದಾಯದಂತೆ ಮದುವೆಯಾಗಬೇಕು ಎಂದು ಧಮಕಿ ಹಾಕುತ್ತಿದ್ದರು. ಮಾರ್ಯಾದೆಗೆ ಅಂಜಿ ನೊಂದ ಯುವಕರು ಆರೋಪಿತರ ಬ್ಯಾಂಕ್ ಅಕೌಂಟ್ಗೆ ದುಡ್ಡು ಹಾಕಿದ್ದರು. ಹಣ ಜಮಾ ಆಗುತ್ತಿದ್ದಂತೆ ಗ್ಯಾಂಗ್ ಎಸ್ಕೇಪ್ ಆಗುತ್ತಿತ್ತು. ಆರೋಪಿಗಳು 12 ಮಂದಿಯನ್ನು ಸುಲಿಗೆ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಯುವಕನೋರ್ವ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಈ ಹಿಂದೆ ಬಂಧನಕ್ಕೊಶಪಡಿಸಿತ್ತು. ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್ ಹಾಗೂ ಯಾಸೀನ್ ಎಂಬುವವರನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಇದೀಗ ರೂಪದರ್ಶಿಯನ್ನೂ ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದೆ. ಮತ್ತೋರ್ವ ಆರೋಪಿ ನದೀಮ್‌ಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post