ಮಂಗಳೂರು ಅ.17 : ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ಬಾಲಕ ಕೆಳ ಬಿದ್ದು ಬಸ್ ಚಕ್ರ ಹರಿದು ಮೃತಪಟ್ಟ ಘಟನೆ ನಗರದ ಲಾಲ್ ಭಾಗ್ ಸಿಗ್ನಲ್ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಪಡೀಲ್ ಕಣ್ಣೂರಿನ 13 ವರ್ಷದ ಪ್ರಾಯದ ರಕ್ಷಣ್ ಮೃತಪಟ್ಟ ಬಾಲಕ. ಈತ ತನ್ನ ಸಂಬಂಧಿ ಜತೆ ಸ್ಕೂಟರ್ ನಲ್ಲಿ ಸಹ ಸವಾರನಾಗಿ ಹೋಗುತ್ತಿದ್ದಾಗ ಖಾಸಗಿ ಸರ್ವಿಸ್ ಬಸ್ ಢಿಕ್ಕಿ ಹೊಡೆಯಿತು. ಬಾಲಕನ ಮೇಲೆ ಬಸ್ ನ ಚಕ್ರ ಹಾದು ಹೋಗಿ ಮೃತಪಟ್ಟರು. ಬಸ್ ಚಾಲಕನ ನಿರ್ಲಕ್ಷ್ಯ ಕಾರಣ ಎಂದು ತಿಳಿದು ಬಂದಿದೆ.


ಯಾವುದೋ ಕಾರ್ಯ ನಿಮಿತ್ತ ಅವರು ಬೆಳಗ್ಗೆ ಚಿಕ್ಕಪ್ಪ ಪಡು ಬೊಂಡಂತಿಲ ನಿವಾಸಿ ನಾರಾಯಣ ಎಂಬವರ ಜೊತೆಗೆ ಪೂಜೆಯ ಸಾಮಾನು ತರಲೆಂದು ಬೈಕಿನಲ್ಲಿ ಮಂಗಳೂರಿಗೆ ಬಂದಿದ್ದ. ಇವರು ಸಾಮಾನು ಖರೀದಿಸಿ ವಾಪಸ್ ಬರುವ ವೇಳೆ ಉರ್ವಾ- ಲೇಡಿಹಿಲ್ ಕಡೆಯಿಂದ ಲಾಲ್ ಬಾಗಿನತ್ತ ಬರುತ್ತಿದ್ದಾಗ, ಹಿಂದಿನಿಂದ ಯಮದೂತನಂತೆ ಧಾವಿಸಿ ಬಂದ ಖಾಸಗಿ ಬಸ್ (KA-19-C-6157) ಪಬ್ಬಾಸ್ ಎದುರಿನ ಅಶ್ವತ್ಧ ಕಟ್ಟೆಯ ಬಳಿ ಬೈಕಿಗೆ ಡಿಕ್ಕಿಯಾಗಿದೆ. ಬೈಕಿಗೆ ಡಿಕ್ಕಿಯಾದ ರಭಸಕ್ಕೆ ಹಿಂದೆ ಕುಳಿತಿದ್ದ ರಕ್ಷಣ್ ರಸ್ತೆಗೆ ಎಸೆಯಲ್ಪಟ್ಟಿದ್ದು ಆತನ ಮೇಲಿಂದಲೇ ಬಸ್ ಹರಿದಿದೆ. ಬೈಕ್ ಸವಾರ ನಾರಾಯಣ ಎಡದ ಭಾಗಕ್ಕೆ ವಾಲಿ ಬಿದ್ದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ರಕ್ಷಣ್ ಸ್ಥಳದಲ್ಲೇ ದುರಂತ ಸಾವು ಕಂಡಿದ್ದಾನೆ. ಮಂಗಳೂರು – ಕಿನ್ನಿಗೋಳಿ – ಕಟೀಲು ನಡುವೆ ಸಂಚರಿಸುವ ಖಾಸಗಿ ಬಸ್ಸು ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಬಂದು ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದಿದೆ. ಸಂಚಾರಿ ವಿಭಾಗದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post