ಬಂಟ್ವಾಳ, ಅ.17: ಪುಂಜಾಲಕಟ್ಟೆಯ ಶ್ರೀ ರಾಮ ನಗರ ಪ್ರಗತಿ ಹಾರ್ಡ್ ವೇರ್ ಮುಂಭಾಗ ಲಾರಿ ಮತ್ತು ಪಿಕಪ್ ವಾಹನಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆಯಲ್ಲಿ ಸೋಮವಾರ ನಡೆದಿದೆ. ಪಾಂಡವರಕಲ್ಲು ನಿವಾಸಿಗಳಾದ ಧನರಾಜ್ (27), ಶಾಹಿಲ್ (21), ಅವಿನಾಶ್ (18) ಗಾಯಗೊಂಡವರು.


ಮಂಗಳೂರು ಭಾಗದಿಂದ ಕಬ್ಬಿಣದ ರಾಡ್ ಹೇರಿಕೊಂಡು ಬರುತ್ತಿದ್ದ ಗೂಡ್ಸ್ ಟೆಂಪೋವು ಪುಂಜಾಲಕಟ್ಟೆಯಿಂದ ಬಂಟ್ವಾಳ ಕಡೆಗೆ ಸಂಚರಿಸುತ್ತಿದ್ದ ಪಿಕಪ್‌ಗೆ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗೂಡ್ಸ್ ಟೆಂಪೋದ ಚಾಲಕನ ಕೈ, ಕಾಲು ತುಂಡಾಗಿದೆ. ಇತರ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, ಮಿನಿ ಲಾರಿಯ ಮುಂಭಾಗ ಮತ್ತು ಹಿಂಭಾಗ ಪ್ರತ್ಯೇಕಗೊಂಡಿದ್ದು, ಪಿಕಪ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಗಾಯಾಳುಗಳನ್ನು ಕೂಡಲೇ ಚಿಕಿತ್ಸೆಗಾಗಿ 108 ಅಂಬ್ಯುಲೆನ್ಸ್‌ನಲ್ಲಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ ಸ್ಥಳಕ್ಕೆ ಪುಂಜಾಲಕಟ್ಟೆ ಪೋಲೀಸರು ಭೇಟಿ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post