ಮಂಗಳೂರು: ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ಧರ್ಮೇಂದ್ರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದು ಬಿಜೆಪಿ ಪಕ್ಷದ ಆಡಳಿತಕ್ಕೆ ಹಿಡಿದ ಗ್ರಹಣ.ಇವರು ದೇಶವನ್ನು ಯಾವ ದಿಕ್ಕಿನಲ್ಲಿ ಒಯ್ಯಲಿದ್ದರೇ ಎಂಬುದೇ ಪ್ರಶ್ನೆಯಾಗಿದೆ. ಮೀಸಲಾತಿ ದೇಶದ ಹಾಗೂ ಧರ್ಮದ ಅಭಿವ್ರದ್ಧಿಗೆ ಮಾರಕ ಎಂದು ತಿಳಿದಿದ್ದರೂ ಅಧಿಕಾರದ ಮೋಹ ಧರ್ಮ ವಿರೋಧಿ ಕಾರ್ಯ ಮಾಡುವ ಮೂಲಕ ಹಿಂದುತ್ವಕ್ಕೆ ದ್ರೋಹ ಮಾಡುತ್ತಿದ್ದರೆ, ಕಾಂಗ್ರೆಸ್ ದೇಶವನ್ನು ಧರ್ಮದ ಆಧಾರದಲ್ಲಿ ಒಡೆದರೆ ಬಿಜೆಪಿ ಜಾತಿಯ ಹೆಸರಿನಲ್ಲಿ ದ್ವಂಸ ಮಾಡುತ್ತಿದೆ ಮೀಸಲಾತಿ ವಿಚಾರದಲ್ಲಿ ಈ ಎರಡು ಪಕ್ಷಗಳು ಜನರ ಮಧ್ಯ ದ್ವೇಷವನ್ನು ತುಂಬುತ್ತವೆ. ಇದೇ ರೀತಿ ಮುಂದುವರಿದರೆ ಅವಕಾಶ ವಂಚಿತ ಯುವಜನತೆಯಿಂದ ಆಂತರಿಕ ಸಂಘರ್ಷಕ್ಕೆ ಕಾರಣವಾಗಬಹುದು. ಮೇಲು ಜಾತಿ ಎಂಬ ಕಾರಣ ಅವಕಾಶ ವಂಚಿರಾಗುವುದು ಯಾವ ನ್ಯಾಯ? ನಮ್ಮ ಮೂಲ ಸಂವಿಧಾನದಲ್ಲಿ ಮೀಸಲಾತಿಯನ್ನು ಎಪ್ಪತ್ತೈದು ವರ್ಷಗಳ ಕಾಲ ಮುಂದುವರಿಸಲು,ಹಾಗೂ ಧರ್ಮದ ಆಧಾರದಲ್ಲಿ ಮೀಸಲಾತಿ ಆಥವಾ ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಅವಕಾಶ ಇದೆಯೇ, ಅಧಿಕಾರ ಲಾಭ ವಡೆಯಲು ದೇಶವನ್ನು ದುರ್ಬಲಗೊಳಿಸುವುದು ಯಾವ ನ್ಯಾಯ? ಮೀಸಲಾತಿಯನ್ನು ಮುಂದುವರಿಸುವ ಉದ್ದೇಶ ನಾವು ಇನ್ನೂ ಅಭಿವೃದ್ಧಿ, ಹಾಗೂ ವಿದ್ಯಾವಂತರಾಗಿಲ್ಲ……….ಹಾಗಾದರೆ ನಮ್ಮ ದೇಶ ಅಭಿವೃದ್ಧಿ ಹಾಗೂ ವಿದ್ಯಾವಂತರನ್ನು ಹೊಂದಿದ ದೇಶ ಎಂದು ವಂಚಿಸುವ ಈ ಎರಡು ಪ್ರಮುಖ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ ಹೊಸಬರಿಗೆ ಅವಕಾಶ ಮಾಡಿಕೊಡಲು ಧರ್ಮೇಂದ್ರ ರವರು ವಿನಂತಿಯನ್ನು ಮಾಡುತ್ತಿದ್ದಾರೆ.

ಮೀಸಲಾತಿ ಅರ್ಥ ಏನು ಎಂಬುದನ್ನು ರಾಜಕಾರಣಿಗಳು ಮೊದಲ ತಿಳಿದುಕೊಳ್ಳುವ ಅಗತ್ಯವಿದೆ. ಮೀಸಲಾತಿ ಮೂಲಕ ಒಂದು ಕುಟುಂಬದ ಎಲ್ಲಾ ಸದಸ್ಯರು ಸರಕಾರಿ, ಅರೆಸರಕಾರಿ ಪಡೆಯಲು ಅವಕಾಶವಿದ್ದರೆ ಉಳಿದ ಸಮುದಾಯ ಏನು ಮಾಡಬೇಕು..? ಮೀಸಲಾತಿ ಮೂಲಕ ನೌಕರಿ ಹಿಡಿದವರು ಆರ್ಥಿಕವಾಗಿ ಪುಬಲವಾದರೂ ತಮ್ಮ ಮಕ್ಕಳಿಗೆ ಮೀಸಲಾತಿ ಲಾಭ ಪಡೆಯುವುದಾದರೆ ಮೀಸಲಾತಿಗೆ ಏನು ಅರ್ಥ..? ಇತ್ತೀಚಿನ ದಿನಗಳಲ್ಲಿ ಮೀಸಲಾತಿಗಾಗಿ ಹಚ್ಚಿನ ಧಾರ್ಮಿಕ ಗುರುಗಳು ತಮ್ಮ ಸಮುದಾಯದ ಪರ ಹೋರಾಟ ನಡೆಸಿದ್ದು ಕಂಡರೆ ಅಸಹ್ಯವಾಗುತ್ತದೆ.
ಇದನ್ನು ಪರಿಹರಿಸಲು ಒಂದು ಎನ್ ಜಿ.ಒ ಸ್ಥಾಪಿಸಿ ಸಾಮಾಜಿಕ ನ್ಯಾಯ ಹುಡುಕುವ ಅಗತ್ಯವಿದೆ. ನಗರ ಪುದೇಶದಿಂದ ಮೀಸಲಾತಿಯನ್ನು ಸಂಪೂರ್ಣವಾಗಿ ತೆಗೆದು ಗ್ರಾಮೀಣ ಪ್ರದೇಶಕ್ಕೆ ಹೆಚ್ಚಿನ ಆಧ್ಯತೆ ನೀಡುವುದರಿಂದ ಅಧಿಕಾರ ಹಾಗೂ ಸೌಲಭ್ಯಗಳ ಕೇಂದ್ರೀಕರಣವು ತಪ್ಪಿ ವಿಕೇಂದ್ರೀಕೃತವಾಗುವ ಮೂಲಕ ಹಳ್ಳಿಯ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ.ನಗರ ಪ್ರದೇಶದಲ್ಲಿ ಮೀಸಲಾತಿಯನ್ನು ಅನಿವಾರ್ಯ ಪರಿಸ್ಥಿತಿಯಲ್ಲಿ ಅರ್ಥಿಕ ವ್ಯವಸ್ಥೆಯಲ್ಲಿ ನೀಡಬೇಕು. ಮೀಸಲಾತಿ ಮೂಲಕ ನೌಕರಿಯನ್ನು ಪಡೆದ ಕುಟುಂಬದ ಸದಸ್ಯರಿಗೆ ಒಂದು ಹುದ್ದೆಯನ್ನು ಉಳಿಸಿಕೊಂಡು ಉಳಿದ ಹುದ್ದೆಯನ್ನು ತ್ಯಜಿಸಿ ಬೇಕು.ಹಾಗೂ ಮುಂದಿನ ದಿನಗಳಲ್ಲಿ ಒಂದು ಸಲ ಮೀಸಲಾತಿ ಪಡೆದ ಕುಟುಂಬಕ್ಕೆ ಮೀಸಲಾತಿ ಲಾಭ ಪಡೆಯಲು ಅವಕಾಶ ನೀಡಬಾರದು. ಅತ್ಯಂತ ಪ್ರಮುಖವಾಗಿ ಜಾತ್ಯತೀತ ರಾಷ್ಟ್ರದಲ್ಲಿ ಜಾತಿಗೆ ಏನು ಕೆಲಸ. ಅದುದರಿಂದ ಸರಕಾರಿ, ಶಾಲಾ,ಕಾಲೇಜಿನಲ್ಲಿ ಜಾತಿ ಕಲಾಂ ತೆಗೆದು ಹಾಕಬೇಕು. ಅಗತ್ಯ ಬಿದ್ದರೆ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಇರಲಿ.
ಮುಂದಿನ ದಿನಗಳಲ್ಲಿ ಮೀಸಲಾತಿ ವಿರೋಧಿ ಹೋರಾಟವನ್ನು ರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಳ್ಳುವುದರ ಜೊತೆಗೆ ಮುಂದಿನ ತಿಂಗಳು ಮೀಸಲಾತಿ ವಿರೋಧಿಸುವವರ ಸಭೆಯನ್ನು ಮಂಗಳೂರಿನಲ್ಲಿ ಕರೆದು ಮುಂದಿನ ಹೋರಾಟಕ್ಕೆ ರೂಪುರೇಷೆಗಳನ್ನು ತಯಾರಿಸಲಾಗುತ್ತದೆ.
Discover more from Coastal Times Kannada
Subscribe to get the latest posts sent to your email.







Discussion about this post