ಉಳ್ಳಾಲ ; ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉಳ್ಳಾಲ ವತಿಯಿಂದ ಸೋಮವಾರ ಕ್ಷೇತ್ರದ ಅಭ್ಯರ್ಥಿ ರಿಯಾಝ್ ಪರಂಗಿಪೇಟೆ ನಾಮಪತ್ರ ಸಲ್ಲಿಕೆಯ ಪೂರ್ವಭಾವಿಯಾಗಿ ತೊಕ್ಕೊಟ್ಟು ಕೇಂದ್ರ ಬಸ್ ನಿಲ್ದಾಣದ ಬಳಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಉಳ್ಳಾಲ ಶಾಸಕ ಯು.ಟಿ ಖಾದರ್ ರೂ.3,500 ಕೋಟಿ ಅಧಿಕೃತ ಒಡೆಯ ಹಾಗೂ 10,000 ಕೋಟಿಗಳ ಅನಧಿಕೃತ ಒಡೆಯನಾಗಿದ್ದಾರೆ ಎಂದು ಉಳ್ಳಾಲದ ಎಸ್ ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಗಂಭೀರವಾಗಿ ಆರೋಪಿಸಿದ್ದಾರೆ.
ತೊಕ್ಕೊಟ್ಟುವಿನ ಮೈದಾನದಲ್ಲಿ ಜರಗಿದ ಎಸ್ ಡಿಪಿಐ ಮಂಗಳೂರು ವಿಧಾಸನಭಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಪ್ರಯುಕ್ತ ಹಮ್ಮಿಕೊಳ್ಳಲಾದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಳ ವ್ಯಕ್ತಿತ್ವ, ಸ್ಟೀಲ್ ಲೋಟದಲ್ಲಿ ಚಹಾ ಕುಡಿಯುವವರು ಕೆ.ಟಿಯನ್ನು ಸೇವಿಸುವವರು ಉಳ್ಳಾಲದ ಶಾಸಕರು. ಚುನಾವಣೆ ಬಂದಾಗ ಎಲ್ಲರಿಂದಲೂ ಹಣ ಸಂಗ್ರಹಿಸಿ ಚುನಾವಣೆ ಎದುರಿಸುತ್ತಾರೆ. ಆದರೆ ಅವರ ಜತೆಗಿರುವ ಕಾಂಗ್ರೆಸ್ ಕಾರ್ಯಕರ್ತರು ಯುಎಇ ಯ ಬರ್ ದುಬಾಯಿಯಲ್ಲಿರುವ ಎನ್ ಬಿಡಿ ಎಮಿರೇಟ್ಸ್ ಬ್ಯಾಂಕಿನಲ್ಲಿ ಯು.ಟಿ ಅಬ್ದುಲ್ ಖಾದರ್ ಅಲೀಫ್ ಆಲಿ ಹೆಸರಿನಲ್ಲಿರುವ 3,500 ಕೋಟಿ ರೂ. ಮತ್ತು 10,000 ಕೋಟಿ ರೂ. ಯಾರದ್ದು ಅನ್ನುವುದನ್ನು ಪ್ರಶ್ನಿಸಬೇಕಿದೆ ಎಂದರು.
ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಚಿಂತೆ ಇಲ್ಲದವರನ್ನ ನಾವು ಆರಿಸಿ ವಿಧಾನ ಸೌಧಕ್ಕೆ ಕಳುಹಿಸುತ್ತಿದ್ದೇವೆ. ಶಾಸಕ ಖಾದರ್ ಅವರಿಗೆ ಒಂದು ಸರಕಾರಿ ಮೆಡಿಕಲ್ ಕಾಲೇಜು ಮಾಡಲು ಸಾಧ್ಯವಾಗಿಲ್ಲ. ಯಾಕೆಂದರೆ ಉಳ್ಳಾಲದ ಖಾಸಗಿ ಮೆಡಿಕಲ್ ಕಾಲೇಜ್ ನವರು ಅವರಿಗೆ ಕಿಕ್ ಬ್ಯಾಕ್ ಕೊಡುತ್ತಿದ್ದಾರೆಂದರು.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಮಾತನಾಡಿ, ಭಯಮುಕ್ತ, ಹಸಿವುಮುಕ್ತ ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ಧಕ್ಕಿಸಿಕೊಡುವ ಉದ್ದೇಶ, ಸಮಸಮಾಜ ನಿರ್ಮಾಣದ ಗುರಿಯೊಂದಿಗೆ ಇರುವ ಏಕೈಕ ಪಕ್ಷ ಎಸ್ ಡಿಪಿಐ. ಪಕ್ಷದ ಅಧಿಕಾರ ನಡೆಸುವ ಎರಡು ಗ್ರಾ.ಪಂ ಗಳು ಕೂಡಾ ಮಂಗಳೂರು ಮಂಡಲದಲ್ಲೇ ಇದೆ. ಹಿಜಾಬ್ ವಿಚಾರದ ಸಂದರ್ಭ ಸಹೋದರಿಯರ ಕಣ್ಣೀರು ಕಂಡಾಗ, ಕರಾವಳಿಯ ಏಕೈಕ ಮುಸ್ಲಿಂ ಶಾಸಕನ ಮಾತನ್ನು ಉಳ್ಳಾಲದ ಜನತೆ ಮರೆಯಬಾರದು. ಕಲಿಕೆ ಮೊಟಕುಗೊಳಿಸಿ ಕಣ್ಣೀರು ಹಾಕುತ್ತಿದ್ದ ವಿದ್ಯಾರ್ಥಿನಿಯರು ಪಾಕಿಸ್ತಾನ, ಸೌದಿ ಅರೆಬಿಯಾಕ್ಕೆ ಹೋಗಿ ಅಂದಿರುವುದನ್ನು ನೆನಪಿಸಬೇಕಿದೆ. ಹಿಂದೆ ಯು.ಟಿ ಖಾದರ್ ಗೆಲ್ಲಿಸಿದವರು ನಾವೇ,ಆದರೆ ಅಂತಹವರು ಸಮುದಾಯದ ದನಿಯಾಗದ ಸಂದರ್ಭ ಹಕ್ಕುದಾರರಾದ ಸಮುದಾಯದವರು ಕೆಳಗಿಳಿಸಬೇಕಾಗಿರುವುದು ಅನಿವಾರ್ಯ. 2018 ರ ಮೊದಲ ಎಷ್ಟು ಜನರಿಗೆ ಸರಕಾರಿ ಉದ್ಯೋಗ ದೊರಕಿಸಿಕೊಟ್ಟಿದ್ದೀರಿ.ಸುಸಜ್ಜಿತ ಕ್ರೀಡಾಂಗಣ, ಶಾಶ್ವತ ಕುಡಿಯುವ ನೀರು ವ್ಯವಸ್ಥೆಗಳೇ ಇಲ್ಲ . ಖಾದರ್ ಆಶೀರ್ವಾಧಿಂದ ಖಾಸಗಿ ವೈದ್ಯಕೀಯ ಕಾಲೇಜುಗಳು ಕ್ಷೇತ್ರದುದ್ದಕ್ಕೂ ಕಾರ್ಯಚರಿಸಿದರೂ ಈವರೆಗೆ ಸರಕಾರಿ ಆಸ್ಪತ್ರೆಗಳೇ ಇಲ್ಲ. ಸುಸಜ್ಜಿತ ಮಾರುಕಟ್ಟೆಯಿಲ್ಲ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಿಲ್ಲ, ಕಲ್ಲುಗಳು ನೀರಿಗೆ ಹಾಕುವುದರಲ್ಲಿ ನಿರಂತರ ಕಮೀಷನ್ ಪಡೆಯುವುದರ ಜೊತೆಗೆ ಆಶ್ರಯ ಯೋಜನೆಯಡಿ ನಿರ್ಮಿಸಿದ ಕೋಳಿಗೂಡಿನಂತೆ ನಿರ್ಮಿಸಿ 390 ಕುಟುಂಬಗಳಿಗೆ ಮನೆ ಇಲ್ಲದಂತೆ ಮಾಡಲು ಖಾದರ್ರೇ ಕಾರಣ. ಜನಸಂದಣಿ ಇರುವ ಉಳ್ಳಾಲದ ಕೋಡಿಯಲ್ಲಿ ಯುಜಿಡಿ ಸಂಸ್ಕರಣಾ ಘಟಕವನ್ನು ನಿರ್ಮಿಸಲು ಹೊರಟು ಕೋಡಿಯ ಜನರ ಮೇಲಿರುವ ಹಗೆತನವೇ ಕಾರಣ. ಈ ಬಾರಿಯ ಚುನಾವಣೆ ಸತ್ಯ ಮತ್ತು ಮಿಥ್ಯದ ನಡುವೆ ಆಗಿರುತ್ತದೆ ಎಂದರು.
ಸಾರ್ವಜನಿಕ ಸಭೆಯ ಬಳಿಕ ಉಳ್ಳಾಲ ಮಾಸ್ತಿಕಟ್ಟೆಯಿಂದ ಎಸ್ ಡಿಪಿಐ ಕಾರ್ಯಕರ್ತರೊಂದಿಗೆ ಕಾಲ್ನಡಿಗೆ ಜಾಥಾದಲ್ಲಿ ಉಳ್ಳಾಲ ನಗರಸಭೆಗೆ ತೆರಳಿದ ರಿಯಾಝ್ ಪರಂಗಿ ಪೇಟೆ ನಾಮಪತ್ರ ಸಲ್ಲಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post