ಶಿರಾಡಿ: ಅಮಾನತುಗೊಳಿಸಲಾಗಿದ್ದ ಶ್ರೀ ವೆಂಕಟೇಶ್ ಪಿ. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಶಿರಾಡಿ ಗ್ರಾಮ ಪಂಚಾಯತ್, ಕಡಬ ತಾಲ್ಲೂಕು ಇವರನ್ನು ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಮಧ್ಯಂತರ ಆದೇಶದಂತೆ, ತಕ್ಷಣದಿಂದ ಜಾರಿಗೆ ಬರುವಂತೆ ಕಡಬ ತಾ, ಶಿರಾಡಿ ಗ್ರಾಮ ಪಂಚಾಯತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಹಾಜರಾಗಲು ಅನುಮತಿಸಿದೆ. ಈ ಅನುಮತಿ ಆದೇಶವು ಮಾನ್ಯ ಕೆ.ಎ.ಟಿ.ಯ ಅಂತಿಮ ಆದೇಶಕ್ಕೆ ಹಾಗೂ ಮಧ್ಯಂತರ ಆದೇಶದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
ಗ್ರಾಮಸ್ಥರ ಹೋರಾಟಕ್ಕೆ ಜಯ, ಆಶಾ ಲಕ್ಷ್ಮಣ್: ಪಿಡಿಒ ವೆಂಕಟೇಶ್ರವರು ಶಿಲಾಡಿ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಾನೂನು ಚೌಕಟ್ಟಿನಲ್ಲಿಯೇ ಕೆಲಸ ಮಾಡಿದ್ದಾರೆ. ಆದ್ದರಿಂದ ಕೆ.ಎ.ಟಿಯಲ್ಲಿ ಅವರ ಪರವಾಗಿಯೇ ಮಧ್ಯಂತರ ತೀರ್ಪು ಬಂದಿದೆ. ಇದು ಅವರ ಪರ ಕಾನೂನು ಹೋರಾಟ ನಡೆಸಿದ ಗ್ರಾಮಸ್ಥರಿಗೆ ಸಿಕ್ಕಿರುವ ಜಯ ಆಗಿದೆ ಎಂದು ತಾ.ಪಂ, ಮಾಜಿ ಸದಸ್ಯೆ ಆಶಾ ಲಕ್ಷಕ್ ಪ್ರತಿಕ್ರಿಯಿಸಿದ್ದಾರೆ. ವೆಂಕಟೇಶ್ರವರು ಪಿಡಿಒ ಆಗಿದ್ದ ವೇಳೆ ಶಿರಾಡಿ ಗ್ರಾಮಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಯೂ ಬಂದಿತ್ತು. ಶಿರಾಡಿ ಗ್ರಾಮದಲ್ಲೂ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಇದೀಗ ಅವರ ಅಮಾನತು * ಆದೇಶಕ್ಕೆ ಕೆಎಟಿಯಿಂದ ಮಧ್ಯಂತರ ತಡಿ ಸಿಕ್ಕಿರುವುದು ಗ್ರಾಮದಲ್ಲಿನ ಅಭಿವೃದ್ದಿ ಕೆಲಸಗಳಿಗೆ ಹೆಚ್ಚಿನ ಪ್ರಯೋಜನ ಆಗಲಿದೆ. ಈ ಹಿನ್ನೆಲೆಯಲ್ಲಿ ವೆಂಕಟೇಶ್ ಪೆರ” ಗ್ರಾಮಸ್ಥರೇ ವೆಚ್ಚ ಬರಿಸಿಕೊಂಡು ಕಾನೂನು ಹೋರಾಟ ನಡೆಸಿದ್ದಾರೆ. ಇದೀಗ ಗ್ರಾಮಸ್ಥರ ಹೋರಾಟಕ್ಕೆ ಜಯಸಿಕ್ಕಿದೆ ಎಂದು ಆಶಾ ಲಕ್ಷ್ಮಣ್ ಪ್ರತಿಕ್ರಿಯಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post