ಮಂಗಳೂರು: ವೆನ್ಲಾಕ್ ಆಸ್ಪತ್ರೆಯ ಹೊರರೋಗಿ ಘಟಕ ಕಟ್ಟಡವು ತೀರಾ ಹಳೆಯದಾಗಿರುವುದರಿಂದ ಹೊಸ ಒಪಿಡಿ ಬ್ಲಾಕ್ ನಿರ್ಮಿಸಬೇಕಿದೆ. ಹಾಗಾಗಿ ಸದ್ಯ ಮಂಜೂರಾಗಿರುವ “ಕ್ರಿಟಿಕಲ್ ಕೇರ್ ಬ್ಲಾಕ್’ ನಿರ್ಮಿಸುವ ಮೊತ್ತವನ್ನೇ ಹೊಂದಾಣಿಕೆ ಮಾಡಿಕೊಂಡು ಅದನ್ನು ನಿರ್ಮಿಸುವುದು ಸೂಕ್ತ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಶನಿವಾರ ವೆನ್ಲಾಕ್ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಮಾತನಾಡಿದರು. ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ 50 ಬೆಡ್‌ನ ಕ್ರಿಟಿಕಲ್ ಕೇರ್ ಬ್ಲಾಕ್‌ಗೆ 24 ಕೋಟಿ ರೂ. ಮೀಸಲಿರಿಸಲಾಗಿದೆ. ಅದೇ ಮೊತ್ತವನ್ನು ಬಳಸಿಕೊಂಡು ಒಪಿಡಿ ಬ್ಲಾಕ್ ನಿರ್ಮಿಸುವ ಬಗ್ಗೆ ಯೋಜನೆ ರೂಪಿಸಿ, ಆ.28ಕ್ಕೆ ತನಗೆ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕ ಸಂಪರ್ಕಾಧಿಕಾರಿಗಳ ನೇಮಕ, 900ಕ್ಕೂ ಹೆಚ್ಚು ಹಾಸಿಗೆಯ ಹಲವು ಜಿಲ್ಲೆಗಳಿಗೆ ಸೇವೆ ಸಲ್ಲಿಸುವ ದೊಡ್ಡ ಆಸ್ಪತ್ರೆಯಾಗಿರುವ ವೆನ್ಲಾಕ್ ಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡುವುದಕ್ಕೆ ಸಾರ್ವಜನಿಕ ಸಂಪರ್ಕಾಧಿ ಕಾರಿ(ಪಿಆರ್‌ಒ)ಗಳ ಅಗತ್ಯ ಇದೆ. ಅದನ್ನು ಹೆಲ್ಪ್ ಡೆಸ್ಕ್ಗೆ ನಿರ್ವಹಿಸುವುದು ಅಸಾಧ್ಯ. ಹಾಗಾಗಿ ಕನಿಷ್ಠ 2 ಪಿಆರ್‌ಒಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸುವ ಬಗ್ಗೆ ಪ್ರಸ್ತಾವನೆ ಕಳುಹಿಸುವಂತೆ ಸಚಿವರು ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ವೈದ್ಯಕೀಯ ಅಧೀಕ್ಷಕಿ ಡಾ| ಜೆಸಿಂತಾ ಡಿ’ಸೋಜಾರಿಗೆ ಸಚಿವರು ಸೂಚಿಸಿದರು.
ರೋಗಿಗಳ ಆರೈಕೆ ಕುರಿತ ಸಿಬಂದಿಯ ಹೊರಗುತ್ತಿಗೆ ಸಂಸ್ಥೆಗೆ ಸರಿಯಾಗಿ ಸರಕಾರದಿಂದ ಮೊತ್ತ ಪಾವತಿಯಾಗದ ಕಾರಣ ಹೊಸ ಗುತ್ತಿಗೆದಾರರು ಬರುತ್ತಿಲ್ಲ. ಹಾಗಾಗಿ ಈ ತಿಂಗಳಿಂದಲೇ ಹಳೆ ಗುತ್ತಿಗೆದಾರರು ಸೇವೆ ಸ್ಥಗಿತಗೊಳಿಸುವ ಸಾಧ್ಯತೆಯೂ ಇದೆ ಎಂದು ಸಚಿವರ ಗಮನ ಸೆಳೆಯಲಾಯಿತು. ಆಸ್ಪತ್ರೆಯ ಒಳಚರಂಡಿ ತ್ಯಾಜ್ಯ ಸಂಸ್ಕರಣ ಘಟಕ ಕಾರ್ಯನಿರ್ವಹಿಸದೆ ತ್ಯಾಜ್ಯ ಚರಂಡಿಗೆ ಸೇರುತ್ತಿರುವ ಬಗ್ಗೆಯೂ ಸಾರ್ವಜನಿಕರ ದೂರು ಕೇಳಿಬಂತು.
ಹೊಸ ಡಯಾಲಿಸಿಸ್ ಸೆಂಟರನ್ನು ನಿರ್ಮಿಸಲು ಜಿಲ್ಲಾಧಿಕಾರಿಯ ಅನುಮತಿ ಪಡೆದು ಡಿಎಂಎಫ್ ಟಿ ಯಿಂದ ಒಂದು ಕೋಟಿ ರೂಪಾಯಿ, ಕೆಐಒಸಿಎಲ್ ಸಿಎಸ್ ಆರ್ ನಿಧಿಯಿಂದ 50ಲಕ್ಷ ರೂ, ನೋವಿಗೊ ಸೊಲ್ಯೂಷನ್ ವತಿಯಿಂದ 18ಲಕ್ಷ ರೂಪಾಯಿ ಪಡೆ ದಿದ್ದು ಉಳಿದ ಮೊತ್ತವನ್ನು ಇತರ ಸಂಸ್ಥೆಗಳ ಸಿಎಸ್ಆರ್ ನಿಧಿಯಿಂದ ಪಡೆದುಕೊಳ್ಳಲು ಪತ್ರವ್ಯವಹಾರ ನಡೆಸಲಾಗಿದೆ ಎಂದು ವೆನ್ ಲಾಕ್ ಅಧೀಕ್ಷಕರು ಸಭೆಯಲ್ಲಿ ಮಾಹಿತಿ ನೀಡಿದರು.
ಕ್ಯಾನ್ಸರ್ ಚಿಕಿತ್ಸೆ:-ವೆನ್ ಲಾಕ್ ಆಸ್ಪತ್ರೆ ಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿಲ್ಲ ಎನ್ನುವ ದೂರಿನ ಬಗ್ಗೆ ಸಚಿವರು ಪ್ರಶ್ನಿಸಿದಾಗ, ಈ ಬಗ್ಗೆ ಕೆಎಂಸಿ ಆಸ್ಪತ್ರೆಯ ಡೀನ್ ಸುರೇಶ್ ಶೆಟ್ಟಿಯವರು ಸಭೆಗೆ ಮಾಹಿತಿ ನೀಡಿ ವೆನ್ಲಾಕ್ ಒಪಿಡಿ ವಿಭಾಗದಲ್ಲಿ ಪ್ರತಿ ದಿನ ಬೆಳಗ್ಗೆ 9ರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಕ್ಯಾನ್ಸರ್ ತಜ್ಞರು ತಪಾಸಣೆ ನಡೆಸಿ ಕೆಎಂಸಿ ಆಸ್ಪತ್ರೆ ಯಲ್ಲಿ (ರೇಡಿಯೇಶನ್ ಒಂಕಾಲಜಿಸ್ಟ್ ). ಚಿಕಿತ್ಸೆ ನೀಡಲಾಗುತ್ತದೆ ಇನ್ನು ಮುಂದೆಯೂ ಈ ಚಿಕಿತ್ಸೆಯನ್ನು ಮುಂದುವರಿಸಲಾಗುವು ದು.ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಕ್ಯಾಥ್ ಲ್ಯಾಬ್ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
Discover more from Coastal Times Kannada
Subscribe to get the latest posts sent to your email.
Discussion about this post