ಮಂಗಳೂರು, ಸೆ.18; ಸಂಘ ಸಂಸ್ಥೆಗಳು, ಪತ್ರಕರ್ತರ ರು ಸೇರಿದಂತೆ ಎಲ್ಲರ ಸಹಯೋಗದಲ್ಲಿ ನಗರದ ಉದ್ಯಾನವನಗಳ ಸುಸ್ಥಿತಿಗೆ ಆದ್ಯತೆ ನೀಡಲಾಗುವುದು ಎಂದು ಮನಪಾ ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕ ಮತ್ತು ಇನ್ನರ್ ವೀಲ್ ಕ್ಲಬ್ ಮಂಗಳೂ ರು ನಾರ್ತ್ ಸಹಯೋಗ ದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮವನ್ನು ಅವರು ಇಂದು ಮಂಗಳೂ ರು ಮಹಾನಗರ ಪಾಲಿಕೆ ಇಂದಿರಾ ಪ್ರಿಯ ದರ್ಶಿ ನಿ ಉದ್ಯಾನವನ ಹ್ಯಾಟ್ ಹಿಲ್ ಆವರಣದ ಲ್ಲಿಂದು ಉದ್ಘಾಟಿಸಿ ಮಾತನಾಡುತ್ತಿದ್ದರು. ನಗರದ ಅಭಿವೃದ್ಧಿಯಲ್ಲಿ ಉದ್ಯಾನ ವನಗಳ ಅಭಿವೃದ್ಧಿ ,ಸ್ವಚ್ಛಪರಿಸರ,ಮೂಲ ಸೌಕರ್ಯ ಗಳ ಅಭಿವೃದ್ಧಿ ಗೆ ಗಮನಹರಿಸಲಾಗುತ್ತಿದೆ ಎಂದು ಜಯಾನಂದ ತಿಳಿಸಿದ್ದಾರೆ.
ಮನಪಾ ಉಪ ಮೇಯರ್ ಪೂರ್ಣಿಮಾ, ಮನಪಾ ಸದಸ್ಯರಾದ ಸಂಧ್ಯಾ ಮೋಹನ ಆಚಾರ್ಯ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದ ಸಭಾಪತಿ ಶಾಂತಾರಾಮ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ಇದರ ಅಧ್ಯಕ್ಷೆ ವಸಂತಿ ಕಾಮತ್, ಪದಾಧಿಕಾರಿಗಳಾದ ಮಾಲಿನಿ ಹೆಬ್ಬಾರ್,ಭಾರತಿ ಪ್ರಕಾಶ್,ಜಯಶ್ರೀ ಬಾಸ್ರಿ,ಉಮಾ ರಾವ್ ,ರಮಾಮಣಿ ಭಟ್,ಶೋಭಾ ಭಟ್,ಉಷಾ ಸುಧಾಕರ್, ಶೋಭಾ ಶಿವರಾಮ್,ರೆಡ್ ಕ್ರಾಸ್ ಘಟಕದ ಕೋಶಾಧಿಕಾರಿ ಮೋಹನ್ ಶೆಟ್ಟಿ, ಡಾ. ಕೆ . ಆರ್. ಕಾಮತ್, ಡಾ. ಸಚ್ಚಿದಾ ನಂದ ರೈ ಸಂಘಟಕರಾದ ರವೀಂದ್ರನಾಥ ಉಚ್ಚಿಲ, ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಗೀತಾ ಬಿ .ರೈ ಪ್ರೆಸ್ಸ್ ಕ್ಲಬ್ ಕಾರ್ಯದರ್ಶಿ ಆರಿಫ್ ಪಡುಬಿದ್ರಿ,ಭಾರತೀಯ ಕಾರ್ಯ ನಿರತ ಪತ್ರ ಕರ್ತರ ರಾಷ್ಟ್ರೀಯ ಸಮಿತಿ ಸದಸ್ಯ ಪಿ .ಬಿ .ಹರೀಶ್ ರೈ ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ. ಯನ್. ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕಾರ್ಯಕಾರಿ ಸಮಿತಿಸದಸ್ಯ ರಾಜೇಶ್ ದಡ್ಡಂಗಡಿ , ರಾಘವ, ಪ್ರೀತಂ ರೈ ಲಲಿತ ಶ್ರೀ ಪ್ರೀತಂ ರೈ ಎನ್ಐಟಿಕೆಯ ದೈಹಿಕ ನಿರ್ದೇಶಕ ಶಿವರಾಂ ಹಿರಿಯರಾದ ಅಚ್ಯುತ ಐಲ್ ,ಮೋಹನ ಆಚಾರ್ಯ,ಭಾರತಿ ಉಚ್ಚಿಲ್ ,ವಿಭಾ ಶ್ರೀನಿವಾಸ್ ನಾಯಕ್,ರೋಟ್ರ್ಯಾಕ್ಟ್ ವರುಣ್ ಬಿ.ರೈ ,ಅಮೃತಾ ನಂದ ಮಯಿ ಸಂಸ್ಥೆ ಯ ಪ್ರತಿನಿಧಿ ಮಾಧವ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post