ಮಂಗಳೂರು : ಪ್ರತಿಷ್ಠಿತ ಔಷಧ ತಯಾರಿಕೆಯ ಸಂಸ್ಥೆ ಮೆಡ್ ಆರ್ಗಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮಂಗಳೂರು ಹಾಗೂ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಚಾರ್ಯ ಮತ್ತು ಬಿ.ಎಂ. ರೆಡ್ಡಿ ಕಾಲೇಜು ಆಫ್ ಫಾರ್ಮಸಿ, ಬೆಂಗಳೂರು ಈ ಎರಡೂ ಸಂಸ್ಥೆಗಳು ವೈಜ್ಞಾನಿಕ ಅಧ್ಯಯನ ಹಾಗೂ ತರಬೇತಿಗಾಗಿ ಪರಸ್ಪರ ಮೆಮರಾಂಡಮ್ ಆಫ್ ಅಂಡರ್‌ಸ್ಟಾಂಡಿಂಗ್‌ನೊಂದಿಗೆ 13.09.2022ರಂದು ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮೆಡ್ ಆರ್ಗಾನಿಕ್ಸ್‌ನ ಸಿಬ್ಬಂದಿಗಳು ಆಯುರ್ವೇದ ಮತ್ತು ಗಿಡಮೂಲಿಕೆಗಳ ಔಷಧಿ, ಔಷಧ ಶಾಸ್ತ್ರಕ್ಕೆ ಸಂಬಂಧಪಟ್ಟ ವೈಜ್ಞಾನಿಕ ಅಧ್ಯಯನವನ್ನು ಪರಸ್ಪರ ಸಹಕಾರದೊಂದಿಗೆ ಸಂಶೋಧನೆಯ ಶಿಷ್ಟಾಚಾರಗಳನ್ನು ಅನುಸರಿಸಿಕೊಂಡು ಹೆಚ್ಚಿನ ಜ್ಞಾನ ವೃದ್ಧಿಸಿ ಮನುಕುಲದ ಆರೋಗ್ಯಕ್ಕೆ ಕೊಡುಗೆಯನ್ನು ನೀಡಲಿದ್ದಾರೆ. ಎಂ.ಫಾರ್ಮ್ನ ಅಂತಿಮ ವರ್ಷದ ವಿದ್ಯಾರ್ಥಿಗಳು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಮೆಡ್ ಆರ್ಗಾನಿಕ್ ಸಂಸ್ಥೆಯ ಉತ್ಪಾದನಾ ಘಟಕಕ್ಕೆ ಕೈಗಾರಿಕಾ ಇಂಟರ್ನ್‌ಶಿಪ್ ಪೂರೈಸಿ ತಮ್ಮ ಜ್ಞಾನ ವೃದ್ಧಿಸಿಕೊಳ್ಳಲಿದ್ದಾರೆ. ಮೆಡ್ ಆರ್ಗಾನಿಕ್ಸ್ ಇಂಡಿಯಾ ಪ್ರೈ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಶ್ರೀ ಪ್ರಮೋದ್ ಹೆಗ್ಡೆ ಮತ್ತು ಆಚಾರ್ಯ ಮತ್ತು ಬಿ.ಎಂ. ರೆಡ್ಡಿ ಕಾಲೇಜು ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ. ಅಮಿತ್ ಕುಮಾರ್ ದಾಸ್ ಅವರು ಮೆಮರಾಂಡಮ್‌ಗೆ ಸಹಿ ಹಾಕಿ ಪರಸ್ಪರ ಬದಲಾಯಿಸಿಕೊಂಡರು.
ಈ ಸಂದರ್ಭದಲ್ಲಿ ಮೆಡ್ ಆರ್ಗಾನಿಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್‌ನ ಪ್ಲಾಂಟ್ ಮತ್ತು ಅಪರೇಷನ್‌ನ ಜನರಲ್ ಮ್ಯಾನೇಜರ್, ಶ್ರೀ ಶಿವಕುಮಾರ್ ಹಾಗೂ ಆಚಾರ್ಯ ಮತ್ತು ಬಿ.ಎಂ. ರೆಡ್ಡಿ ಕಾಲೇಜು ಆಫ್ ಫಾರ್ಮಸಿಯ (ABMRCP), ಯ ಡಾ. ಮಂಜುನಾಥ್ ಪಿ ಎಂ, ವೈಸ್ ಪ್ರಿನ್ಸಿಪಾಲ್ ಮತ್ತು ಪ್ರೊಫೆಸರ್-ಫಾರ್ಮಕಾಲಜಿ,( ABMRCP), ಡಾ. ಸಿ ಎಸ್ ಲಕ್ಷ್ಮೀಶ, ಪ್ರೊಫೆಸರ್-ಔಷಧ ನಿಯಂತ್ರಣ ವ್ಯವಹಾರಗಳು (ABMRCP), ಡಾ. ವೆಂಕಟೇಶ್ ಡಿ ಪಿ, HOD & ಅಸೋಸಿಯೇಟ್ ಪ್ರೊಫೆಸರ್-ಫಾರ್ಮಾಸ್ಯೂಟಿಕ್ಸ್ (ABMRCP), ಡಾ. ಗುರು ಬಸವರಾಜ ಸ್ವಾಮಿ, HOD & ಪ್ರೊಫೆಸರ್ – ಫಾರ್ಮಾಸ್ಯುಟಿಕಲ್ ಕೆಮಿಸ್ಟ್ರಿ( ABMRCP) ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post