

ದಾವೂದ್ ಎಂಬ ಯುವಕ ಬಾಲಕಿಯನ್ನು ಬೈಕ್ ನಲ್ಲಿ ಹಿಂಬಾಲಿಸುತ್ತಾ ಬಂದು ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಡಿ.13ರಂದು ದುರ್ವರ್ತನೆ ತೋರಿದ್ದ ಬಗ್ಗೆ ಮಾಹಿತಿ ತಿಳಿದಿದ್ದ ಬಾಲಕಿಯ ತಂದೆ ಮತ್ತು ಅವರ ಸ್ನೇಹಿತರು ಡಿ.17ರಂದು ಗಮನಿಸಿದ್ದಾರೆ. ಮತ್ತೆ ಬೈಕಿನಲ್ಲಿ ಬಂದಿದ್ದ ಯುವಕನನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಕಂಬಕ್ಕೆ ಕಟ್ಟಿ ಹಾಕಿದ್ದಾರೆ.





ಈ ನಡುವೆ ಅದೇ ಯುವಕ ಮತ್ತೆ ಕಿರುಕುಳ ನೀಡಲು ಮುಂದಾದ. ಆಗ ಪೋಷಕರು ಮತ್ತು ಅವರ ಜತೆಗಿದ್ದವರು ಈ ವೇಳೆ, ಯುವಕನ ಕಡೆಯವರಿಗೂ, ಬಾಲಕಿ ಹೆತ್ತವರ ಕಡೆಗೂ ಜಟಾಪಟಿ ಆಗಿದೆ. ಜನರು ಸೇರಿ ಹಲ್ಲೆ ನಡೆಸುವುದನ್ನು ತಡೆದಿದ್ದಾರೆ. ಬಳಿಕ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ಆರೋಪಿ ಕೇಸ್ ದಾಖಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ, ಆರೋಪಿಯ ಹೇಳಿಕೆ ಆಧರಿಸಿ ಹಲ್ಲೆ ನಡೆಸಿದವರ ಮೇಲೂ ದೂರು ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.







