ಕೇರಳ, ಮಾರ್ಚ್ 19: ಕಣ್ಣೂರು ಜಿಲ್ಲೆಯ ಪಾಪ್ಪಿನಶ್ಶೇರಿ ಮಾಂಕಡವು ಪಾರಕಲ್‌ನಲ್ಲಿ ನಾಲ್ಕು ತಿಂಗಳ ಹೆಣ್ಣು ಮಗುವನ್ನು ಬಾವಿಗೆಸೆದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ 12ರ ಹರೆಯದ ಬಾಲಕಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ವಲಸೆ ಕಾರ್ಮಿಕರು ವಾಸಿಸುತ್ತಿದ್ದ ಬಾಡಿಗೆ ಮನೆಯ ಬಾವಿಯಲ್ಲಿ ತಮಿಳುನಾಡಿನ ದಂಪತಿಗಳ ನಾಲ್ಕು ತಿಂಗಳ ಹೆಣ್ಣು ಮಗು ಶವವಾಗಿ ಪತ್ತೆಯಾಗಿದೆ. ಮಗುವನ್ನು ಕೊಲೆ ಮಾಡಿರುವುದು 12 ವರ್ಷದ ಬಾಲಕಿ ಎಂಬುದು ತಿಳಿದುಬಂದಿದೆ, ಆಕೆ ಕೂಡ ಅದೇ ಕುಟುಂಬದವಳಾಗಿದ್ದು, ಮಗು ಬಂದಿದ್ದರಿಂದ ಕುಟುಂಬದವರಿಗೆ ತನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ ಎಂದು ಭಾವಿಸಿ ಮಗುವನ್ನು ಕೊಲೆ ಮಾಡಿದ್ದಾಳೆ. ಆಕೆ ಅನಾಥೆಯಾಗಿದ್ದು, ಮಗುವಿನ ಪೋಷಕರು, ಆಕೆಯ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಳು. ಈ ಮಗು ಬಂದ ಮೇಲೆ ಎಲ್ಲರೂ ಮಗುವನ್ನೇ ಹೆಚ್ಚು ಇಷ್ಟ ಪಡುತ್ತಿದ್ದಾರೆಂದು ತಪ್ಪು ಭಾವಿಸಿ ಈ ಕೃತ್ಯವೆಸಗಿದ್ದಾಳೆ.
ರಾತ್ರಿ ಮಲಗಿದ್ದಾಗ ಶಿಶುವನ್ನು ಎತ್ತಿಕೊಂಡು ಹೋಗಿ, ಬಾಡಿಗೆ ಮನೆಯ ಬಳಿ ಇರುವ ಬಾವಿಗೆ ಎಸೆದಿದ್ದಾಳೆ ಎಂದು ಆರೋಪಿಸಲಾಗಿದೆ. ಕೇರಳಕ್ಕೆ ಕೆಲಸಕ್ಕಾಗಿ ವಲಸೆ ಬಂದಿದ್ದ ದಂಪತಿ ರಾತ್ರಿ 9.30ರ ಸುಮಾರಿಗೆ ತಮ್ಮ ಮನೆಯ ಹಾಲ್ನಲ್ಲಿ ಮಲಗಿದ್ದರು. ರಾತ್ರಿ 11 ಗಂಟೆ ಸುಮಾರಿಗೆ ಮಗುವಿನ ತಾಯಿ ಎಚ್ಚರಗೊಂಡಾಗ ಮಗು ಇಲ್ಲದಿರುವುದನ್ನು ಕಂಡು ಪತಿಗೆ ತಿಳಿಸಿದ್ದಾಳೆ. ನಂತರ ಮಗುವಿನ ಶವ ಬಾವಿಯಲ್ಲಿರುವುದು ಪತ್ತೆಯಾಗಿದೆ. ಮನೆ ಒಳಗಿಂದ ಲಾಕ್ ಆಗಿದ್ದರಿಂದ ಆ ಬಾಲಕಿ ಮೇಲೆ ಎಲ್ಲರಿಗೂ ಅನುಮಾನ ಬಂದಿತ್ತು, ವಿಚಾರಣೆ ನಡೆಸಿದಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಶಿಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post