ಮಂಗಳೂರು: ನಗರದ ಹೊರವಲಯದಲ್ಲಿರುವ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ ‘ಗೀತಾ’ ಏಳು ಮರಿಗಳಿಗೆ ಜನ್ಮ ನೀಡಿದ್ದು, ಇದನ್ನು ಉದ್ಯಾನವನದಲ್ಲಿ ನಡೆದ ವಿಶೇಷ ಬೆಳವಣಿಗೆಯಾಗಿ ಗುರುತಿಸಲಾಗಿದೆ.
2026ರ ಜನವರಿ ತಿಂಗಳಲ್ಲಿ ನಡೆದ ಈ ಸಂತಾನೋತ್ಪತ್ತಿಯಲ್ಲಿ ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮರಿಗಳು ಜನಿಸಿದ್ದು, ಪಿಲಿಕುಳದಲ್ಲಿ ಭಾರತೀಯ ತೋಳಗಳ ಮೊದಲ ಯಶಸ್ವಿ ಸಂತಾನೋತ್ಪತ್ತಿ ಎಂದು ಉದ್ಯಾನವನದ ಪ್ರಕಟನೆ ತಿಳಿಸಿದೆ. ಕಳೆದ ಮೂರು ವರ್ಷಗಳಿಂದ ಉದ್ಯಾನವನದಲ್ಲಿ ಭಾರತೀಯ ತೋಳಗಳನ್ನು ಸಾಕಲಾಗುತ್ತಿದೆ. ತಾಯಿ ತೋಳ ಗೀತಾ ಮತ್ತು ಎಲ್ಲಾ ಏಳು ಮರಿಗಳು ಆರೋಗ್ಯವಾಗಿದ್ದು, ಪಶುವೈದ್ಯರು ಹಾಗೂ ಪ್ರಾಣಿ ಪಾಲಕರು ಅವುಗಳ ಆರೈಕೆಯನ್ನು ಸಮರ್ಪಕವಾಗಿ ನೋಡಿಕೊಳ್ಳುತ್ತಿದ್ದಾರೆ. ಇದೀಗ ಮರಿಗಳು ಚುರುಕಾಗಿ ಓಡಾಡಲು ಪ್ರಾರಂಭಿಸಿದ್ದು, ಸಂದರ್ಶಕರ ವೀಕ್ಷಣೆಗೆ ಅವುಗಳನ್ನು ಮುಕ್ತಗೊಳಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post