• About us
  • Contact us
  • Disclaimer
Tuesday, February 24, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ವಿಶ್ವದರ್ಜೆಯ ಸೌಲಭ್ಯದ ರೋಹನ್ ಇಥೋಸ್ ಅಪಾರ್ಟ್‌ಮೆಂಟ್‌ಗೆ ಭೂಮಿಪೂಜೆ

Coastal Times by Coastal Times
April 19, 2025
in ಕರಾವಳಿ
ಮಂಗಳೂರು: ವಿಶ್ವದರ್ಜೆಯ ಸೌಲಭ್ಯದ ರೋಹನ್ ಇಥೋಸ್ ಅಪಾರ್ಟ್‌ಮೆಂಟ್‌ಗೆ ಭೂಮಿಪೂಜೆ
33
VIEWS
WhatsappTelegramShare on FacebookShare on Twitter

ಮಂಗಳೂರು, ಎ.19 : ಕರಾವಳಿಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಶನಿವಾರ ನಗರದ ಫಾ.ಮುಲ್ಲರ್ ಆಸ್ಪತ್ರೆ ಬಳಿ ನೆರವೇರಿತು.

ಫಾ.ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ವಂ|ಫಾ|ರಿಚಾರ್ಡ್ ಕುವೆಲ್ಲೊ ಅವರು ಆಶೀರ್ವದಿಸಿ, ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡು ಜನರ ಬಳಕೆಗೆ ಶೀಘ್ರ ಸಿಗುವಂತಾಗಲಿ ಎಂದರು.

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಕಳೆದೊಂದು ತಿಂಗಳಲ್ಲೇ ರೋಹನ್ ಸಂಸ್ಥೆಯ ನಾಲ್ಕು ಪ್ರಮುಖ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ, ಬಹುತೇಕ ಎಲ್ಲ ಫ್ಲಾಟ್‌ಗಳೂ ಮಾರಾಟಗೊಂಡಿವೆ, ಕಂಕನಾಡಿಯ ಪ್ರಮುಖ ಆಯಕಟ್ಟಿನ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಇಥೋಸ್‌ನ ಉಳಿದ ಫ್ಲಾಟ್‌ಗಳೂ ಕೂಡಾ ಶೀಘ್ರ ಮಾರಾಟಗೊಳ್ಳಲಿವೆ, ಜನರ ಅಭಿರುಚಿಗೆ ತಕ್ಕಂತೆಯೇ, ಸದೃಢವಾದ ಹಾಗೂ ಸಮಕಾಲೀನ ಶೈಲಿಯ ಕಟ್ಟಡಗಳನ್ನು ನಿರ್ಮಿಸುವ ಕಾರಣ ಇದು ಸಾಧ್ಯವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಅವರು ಮಾತನಾಡಿ, ಕಂಕನಾಡಿ ಪ್ರದೇಶದಲ್ಲಿ ಫಾದರ್ ಮುಲ್ಲರ್‍ಸ್ ಆಸ್ಪತ್ರೆ ಒಂದು ಹೆಗ್ಗುರುತಾಗಿದೆ, ಈಗ ನಿರ್ಮಾಣಗೊಳ್ಳಲಿರುವ ರೋಹನ್ ಇಥೋಸ್ ಇನ್ನೊಂದು ಆಕರ್ಷಕ ಹೆಗ್ಗುರುತಾಗಿ ಮೂಡಿಬರಲಿರುವುದು ಖಚಿತ. ರೋಹನ್ ಮೊಂತೇರೊ ಅವರು ಅವರ ಪ್ರಾಮಾಣಿಕತೆ ಹಾಗೂ ಪರಿಶ್ರಮದಿಂದ ಇಷ್ಟು ಎತ್ತರಕ್ಕೇರಿದ್ದಾರೆ ಎಂದರು.

ಮಾಜಿ ಶಾಸಕ ಜೆ.ಆರ್.ಲೋಬೊ, ಪತ್ರಕರ್ತ ವಾಲ್ಟರ್ ನಂದಳಿಕೆ ಶುಭಹಾರೈಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್‌ಗಳಾದ ಎಂ.ಶಶಿಧರ ಹೆಗ್ಡೆ, ಭಾಸ್ಕರ್ ಕೆ, ನಿಕಟಪೂರ್ವ ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಜೆಸಿಂತಾ ಆಲ್ಪ್ರೆಡ್, ವಕೀಲ ಜಗದೀಶ್ ಶೇಣವ, ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್, ಭಾಸ್ಕರ್, ರೋಹನ್ ಕಾರ್ಪೊರೇಷನ್ ನಿರ್ದೇಶಕ ಡಿಯೊನ್ ಮೊಂತೆರೊ ಉಪಸ್ಥಿತರಿದ್ದರು. ಸಾಹಿಲ್ ಝಹೀರ್ ನಿರೂಪಿಸಿದರು, ರೋಹನ್ ಮೊಂತೇರೊ ವಂದಿಸಿದರು.

ವಿಶ್ವದರ್ಜೆಯ ಸೌಲಭ್ಯದ ರೋಹನ್ ಇಥೋಸ್  ವೈಶಿಷ್ಟ್ಯ: ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆ ಬಳಿಯ ನಿವೇಶನದಲ್ಲಿ ಈ ಯೋಜನೆ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಐಶಾರಾಮಿ ಹಾಗೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. 15 ಮಹಡಿಗಳನ್ನು ಹೊಂದಿದ್ದು, ಪ್ರತಿ ಮಹಡಿಯಲ್ಲಿ 3,4 ಬಿಎಚ್‌ಕೆಯ ಫ್ಲಾಟ್‌ಗಳಿದ್ದು ಒಟ್ಟು 28 ಅಪಾರ್ಟ್‌ಮೆಂಟ್‌ಗಳಿರಲಿವೆ. ಇನ್‌ಫಿನಿಟಿ ಸ್ವಿಮ್ಮಿಂಗ್ ಫೂಲ್, ಆಧುನಿಕ ಜಿಮ್, ಇಂಡೋರ್‌ಗೇಮ್ಸ್, ಯೋಗಾ ರೂಮ್, ಮಕ್ಕಳ ಆಟದ ವಲಯ ಮತ್ತು ಬಹು ಉಪಯೋಗಿ ಸಭಾಂಗಣವನ್ನು ಹೊಂದಿದೆ. ತಳ ಮತ್ತು ಕೆಳ ಅಂತಸ್ತುಗಳಲ್ಲಿ ವಿಶಾಲ ಪಾರ್ಕಿಂಗ್ ಸೌಲಭ್ಯವಿದೆ. ಅಪಾರ್ಟ್‌ಮೆಂಟ್‌ಗಳು ವಾಸ್ತು ಪ್ರಕಾರವಾಗಿದ್ದು ಸಿಸಿ ಕೆಮರಾ, ಸ್ವಯಂಚಾಲಿತ ಲಿಫ್ಟ್, ಜನರೇಟರ್ ಮತ್ತು ಇಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ರೋಹನ್ ಇಥೋಸ್ ಯೋಜನೆ ಹೊಸ ಟ್ರೆಂಡ್, ಗುಣಮಟ್ಟ ಮತ್ತು ಗ್ರಾಹಕರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣಗೊಳ್ಳುತ್ತಿದೆ. ಆಸ್ಪತ್ರೆಗಳು, ಪೂಜಾ ಸ್ಥಳಗಳು, ರೈಲ್ವೆ ಸ್ಟೇಶನ್, ಸೂಪರ್ ಮಾರ್ಕೆಟ್, ಸಾರ್ವಜನಿಕ ಉದ್ಯಾನ ಮತ್ತು ಶಿಕ್ಷಣ ಸಂಸ್ಥೆಗಳು ಈ ಯೋಜನೆಯ ಸಮೀಪದಲ್ಲೇ ಇವೆ.
ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್ ದೂರವಾಣಿ ಸಂಖ್ಯೆ: 98454 90100. ಈಮೇಲ್: info@rohancorporation.in, ಜಾಲತಾಣ: www.rohancorporation.in ಅಥವಾ ರೋಹನ್ ಕಾರ್ಪೋರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್: ಮೂಗು, ಕೈಗೆ ತಾಕಿದ ಗುಂಡು

Next Post

ಗೋಲ್ಡ್ ಸ್ಮಗ್ಲಿಂಗ್ ; ಕೇರಳದ ಇಬ್ಬರು ಸ್ನೇಹಿತರನ್ನು ಹತ್ತು ವರ್ಷಗಳ ಹಿಂದೆ ಕೊಲೆಗೈದ ಮೂವರು ಅಪರಾಧಿಗಳಿಗೆ ಮಂಗಳೂರಿನ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

Related Posts

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ
ಕರಾವಳಿ

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

February 24, 2026
8
ತುರ್ತಾಗಿ ಬೆಳ್ತಂಗಡಿಯಿಂದ ಮಂಗಳೂರಿಗೆ ಕರೆತರುತ್ತಿದ್ದಾಗ ಆಂಬುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮವಿತ್ತ ಮಹಿಳೆ
ಕರಾವಳಿ

ತುರ್ತಾಗಿ ಬೆಳ್ತಂಗಡಿಯಿಂದ ಮಂಗಳೂರಿಗೆ ಕರೆತರುತ್ತಿದ್ದಾಗ ಆಂಬುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮವಿತ್ತ ಮಹಿಳೆ

February 23, 2026
24
Next Post
ಗೋಲ್ಡ್ ಸ್ಮಗ್ಲಿಂಗ್ ; ಕೇರಳದ ಇಬ್ಬರು ಸ್ನೇಹಿತರನ್ನು ಹತ್ತು ವರ್ಷಗಳ ಹಿಂದೆ ಕೊಲೆಗೈದ ಮೂವರು ಅಪರಾಧಿಗಳಿಗೆ ಮಂಗಳೂರಿನ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಗೋಲ್ಡ್ ಸ್ಮಗ್ಲಿಂಗ್ ; ಕೇರಳದ ಇಬ್ಬರು ಸ್ನೇಹಿತರನ್ನು ಹತ್ತು ವರ್ಷಗಳ ಹಿಂದೆ ಕೊಲೆಗೈದ ಮೂವರು ಅಪರಾಧಿಗಳಿಗೆ ಮಂಗಳೂರಿನ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

Discussion about this post

Recent News

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

February 24, 2026
8
ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

February 24, 2026
18
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

February 24, 2026
ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

February 24, 2026
ಉಡುಪಿ; ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಯತ್ನ ಪೊಲೀಸರಿಂದ ರಕ್ಷಣೆ

ಉಡುಪಿ; ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಯತ್ನ ಪೊಲೀಸರಿಂದ ರಕ್ಷಣೆ

February 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d